ಬಂಡಾಯ ಸಾಹಿತಿ ಶಿವಲಿಂಗಪ್ಪ ಪ್ರತಿಪಾದನೆ; ಸಾಹಿತಿಗಳಿಗೆ ರಾಜಕೀಯ, ಸಾಮಾಜಿಕ ಪ್ರಜ್ಷೆ ಮುಖ್ಯ

ಚಿತ್ರದುರ್ಗ:

        ಆಹಾರದ ಮೂಲಕ ಧರ್ಮವನ್ನು ವಿಭಜಿಸಿ ಅಮಾಯಕರನ್ನು ಹತ್ಯೆ ಮಾಡುತ್ತಿರುವವರನ್ನು ದೂರವಿಡುವ ಕೆಲಸವನ್ನು ಸಾಹಿಹಿತಿಗಳು ಮಾಡಬೇಕಿದೆ ಎಂದು ವಿಶ್ರಾಂತ ಪ್ರಾಚಾರ್ಯರು ಮತ್ತು ಸಾಹಿತಿ ಡಾ.ಸಿ.ಶಿವಲಿಂಗಪ್ಪ ಹೇಳಿದರು.

       ಮದಕರಿಪುರದಲ್ಲಿ ಶನಿವಾರ ನಡೆದ ನಾಲ್ಕನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಮಾರೋಪ ನುಡಿಗಳನ್ನಾಡಿ ಸ್ವಾತಂತ್ರಕ್ಕೆ ಸಾಹಿತಿಗಳು ಬದ್ದರಾಗಿ ರಾಜಕೀಯ, ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಪ್ರಸ್ತುತ ವಿದ್ಯಮಾನಗಳಲ್ಲಿ ವಿಮರ್ಶಾತ್ಮಕವಾಗಿ ಚರ್ಚಿಸುತ್ತಿರುವವರನ್ನು ಬಂಧಿಸುತ್ತಿರುವುದು ಅಮಾನವೀಯ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಹೇಳಿದರು

         ದಲಿತ ಚಿಂತಕ ಆನಂದ್ ತೇಲ್ತುಂಡೆ ಇವರುಗಳನ್ನು ಬಂಧಿಸುತ್ತಿರುವುದು, ಕಲ್ಬುರ್ಗಿ, ಗೌರಿಲಂಕೇಶ್ ಇವರುಗಳ ಹತ್ಯೆಯಾಗಿರುವುದು ಸಣ್ಣ ವಿಚಾರವಲ್ಲ. ಸಂವಿಧಾನವನ್ನು ಸುಟ್ಟಿರುವುದನ್ನು ಸಾಹಿತಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಮಾಜದ ಮುಂಗೋಲಿಗೆ ಬಂದಾಗ ಮಾತ್ರ ಅಸಮಾನತೆ ಹೋಗಲಾಡಿಸಿ ಮನುಷ್ಯ ಮನುಷ್ಯರ ನಡುವೆ ಸೌಹಾರ್ಧತೆಯನ್ನು ಬೆಸೆಯಲು ಸಾಧ್ಯ ಎಂದು ಕರೆ ನೀಡಿದರು.

          ನಾಗರೀಕ ಹಕ್ಕು ಹೋರಾಟಗಾರರನ್ನು ಬಂಧಿಸಬಾರದೆಂದು ಅಚಿತರಾಷ್ಟ್ರೀಯ ಮಟ್ಟದಲ್ಲಿ ಆರು ನೂರಕ್ಕೂ ಹೆಚ್ಚು ಚಿಂತಕರುಗಳು ಬೆಂಬಲಿಸಿದ್ದಾರೆ. ಗಾಂಧಿ ಫೋಟೋಗೆ ಗುಂಡಿಕ್ಕಿರುವ ವಿಕೃತ ಮನಸ್ಮ್ಸಗಳಿಗೆ ತಕ್ಕ ಶಿಕ್ಷೆಯಾಗಬೇಕು. ಅಂಬೇಡ್ಕರ್-ಗಾಂಧಿ ನಡುವೆ ಭಿನ್ನಾಭಿಪ್ರಾಯವಿದ್ದರೂ ಇಬ್ಬರ ನಡುವೆ ಸಹಬಾಳ್ವೆಯಿತ್ತು ಎಂದರು.

        ಚಿತ್ರದುರ್ಗ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮದಕರಿಪುರದಲ್ಲಿ ನಡೆಯುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಸಾಹಿತ್ಯ, ಸಾಂಸ್ಕøತಿಕವಾಗಿ ಮದಕರಿಪುರ ಇತಿಹಾಸದಲ್ಲಿ ಸುವರ್ಣ ದಾಖಲೆ ಸಾಧಿಸಿದೆ. ಸಾಹಿತ್ಯವೆಂದರೆ ಅಸಮಾನತೆಯನ್ನು ದೂರಸರಿಸಿ ಸೌಹಾರ್ಧತೆಯನ್ನು ಬೆಸೆಯಬೇಕು.

        ಇಂತಹ ಸಮ್ಮೇಳನಗಳ ಮೂಲಕ ಮನುಷ್ಯತ್ವದ ಸಂಬಂಧಗಳನ್ನು ಗಟ್ಟಿಗೊಳಿಸಿ ಕನ್ನಡದ ಮನಸ್ಸ್ಸುಗಳನ್ನು ಒಂದಾಗಿಸುವುದು ಬಹಳ ಮುಖ್ಯ ಎಂದು ತಿಳಿಸಿದರು.

       ಗ್ರಾಮೀಣ ಸಂಸ್ಕøತಿಗೆ ಈ ಸಮ್ಮೇಳನ ಸಾಕ್ಷ್ಷಿಯಾಗಿದೆ. ಯಂತ್ರೋಪಕರಣದ ಮಾತಿಗಿಂತ ಬಂಧುತ್ವವನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ಸಾಹಿತಿಗಳ ಮೇಲಿದೆ ಎಂದು ನುಡಿದರು.

        ಇತಿಹಾಸ ಸಂಶೋಧಕ ಪ್ರೊ.ಲಕ್ಷ್ಮಣ್‍ತೆಲಗಾವಿ ಮಾತನಾಡಿ ಚಿತ್ರದುರ್ಗದ ಇತಿಹಾಸದೊಡನೆ ಮದಕರಿಪುರದ. ಮದಕರಿ ಎನ್ನುವ ಹೆಸರಿನಲ್ಲಿಯೇ ಪಾಳೆಯಗಾರರ ಇತಿಹಾಸ ತಳಕು ಹಾಕಿಕೊಂಡಿದೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇನಾಧ್ಯಕ್ಷ ಎಸ್.ಆರ್.ಗುರುನಾಥ್ ದಂಪತಿಗಳನ್ನು ಎತ್ತಿನಗಾಡಿಯಲ್ಲಿ ಮೆರವಣಿಗೆ ಮಾಡಿದ್ದು, ನಿಜಕ್ಕೂ ಗ್ರಾಮೀಣ ಸೊಡಗನ್ನು ನೆನಪಿಸುªಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

       ಸಮ್ಮೇಳನಾಧ್ಯಕ್ಷ ಎಸ್.ಆರ್.ಗುರುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ತಾಲೂಕು ಅಧ್ಯಕ್ಷ ಎಸ್.ಆರ್.ದಾಸೇಗೌಡ, ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಎಂ.ಗೋವಿಂದಪ್ಪ ವೇದಿಕೆಯಲ್ಲಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap