ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಬೇಕು : ಡಾ.ರಾಜಶೇಖರಪ್ಪ

ಚಿತ್ರದುರ್ಗ

    ಕನ್ನಡ ಶಾಲೆಗಳನ್ನು ಉಳಸಿಕೊಂಡು ಬೆಳಸುವ ಕಾಲ ಬಂದಿದ್ದೆ ಎಂದು ಹಿರಿಯ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಹೇಳಿದರು.

    ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಾಲಯದ ಆವರಣದಲ್ಲಿ ಶುಕ್ರವಾರ 22ನೇ ವಾರ್ಡ್ ಜೆಸಿಆರ್ ಮತ್ತು ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ, ಗಮಕ ಕಲಾ ಸಂಘ, ಗಣಪತಿ ದೇವಸ್ಥಾನ ಸೇವಾ ಸಮಿತಿಯಿಂದ ಆಯೋಜಿಸಿದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

   ಕನ್ನಡ ಅತ್ಯಂತ ಪ್ರಾಚೀನ ಭಾಷೆಯಾಗಿದೆ. ಇಂಗ್ಲೀಷ ಭಾಷೆ ಹುಟ್ಟುವ ಮೊದಲ್ಲೇ ಕನ್ನಡದಲ್ಲಿ ದೊಡ್ಡ ಗ್ರಂಥಗಳನ್ನು ರಚಿಸಲಾಗಿತ್ತು. ಕನ್ನಡ ಅತ್ಯಂತ ಸುಂದರ ಭಾಷೆ ಇದನ್ನು ಲಿಪಿ ತಜ್ಞರು ಹೇಳಿದ್ದಾರೆ. ಕನ್ನಡ ಜಗತ್ತಿನ 7ನೇ ಹಾಗೂ ಭಾರತದ 5ನೇ ಪ್ರಾಚೀನ ಭಾಷೆಯಾಗಿದೆ. ಆದರೆ ಅಂತಹ ಪ್ರಾಚೀನ ಭಾಷೆಯನ್ನು ನಾವು ಉಳಿಸಿಕೊಳ್ಳಲು ಕಷ್ಟ ಪಡಬೇಕಾಗಿದೆ. ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಭಾಷೆ ಕನ್ನಡ. ಕನ್ನಡ ಭಾಷೆ ಬಹಳ ಹಿಂದೆಯೆ ಲಿಪಿಯನ್ನು ಹೊಂದಿತ್ತು.

   ಭಾಷಾ ಲಿಪಿ ತಜ್ಞರ ಪ್ರಕಾರ ಭಾಷಾ ಲಿಪಿಗಳ ರಾಣಿ ಕನ್ನಡ ಭಾಷೆ ಎಂದು ಅಭಿಪ್ರಾಯ ಪಡುತ್ತಾರೆ. ಮಹಾಭಾರತದಲ್ಲಿ ಕರ್ನಾಟಕ ಒಂದು ಪ್ರಾಂತದ ಹೆಸರಾಗಿ ಬಳಕೆಯಾಗಿದೆ. ನಂತರ ಅದು ಭಾಷೆಯಾಗಿ ಲಿಪಿಯಾಗಿ ಹಲ್ಮಿಡಿ ಶಾಸನದಲ್ಲಿ ಬಳಕೆಯಾಗಿದೆ. ಹಲ್ಮಿಡಿ ಶಾಸನದಲ್ಲಿ ಬಳಸಿರುವ ಕನ್ನಡ ಪೂರ್ವ ಹಳೆಗನ್ನಡ ಭಾಷೆ. ಪಂಪನ ಕಾಲದಲ್ಲಿ ಹಳೆಗನ್ನಡ ಅನಿಸಿಕೊಂಡಿತ್ತು. ಕಾಲಕಾಲಕ್ಕೆ ಕನ್ನಡ ಭಾಷೆ ತನ್ನ ಸ್ವರೂಪ ಬದಲಾಯಿಸುತ್ತ ಸಾಗಿತು ಎಂದರು.

    ಕನ್ನಡ ರಾಜರು ಕಲೆ, ಸಾಹಿತ್ಯ, ಸಂಗೀತದ ಪೋಷಕರಾಗಿದ್ದರು. ಹಿಂದಿನ ರಾಜ ಮಹರಾಜುರು ಕಲೆ, ಸಾಹಿತ್ಯ ಮತ್ತು ಸಂಗೀತಕ್ಕೆ ನೀಡುತ್ತಿದೆ ಮಹತ್ವವನ್ನು ನಾನಾ ಶಾಸನಗಳಿಂದು ತಿಳಿಯುತ್ತದೆ. ಕನ್ನಡದ ಸಾಹಿತ್ಯ ಕೃತಿಗಳು ಜಗತ್ತಿಗೆ ಮಾದರಿಯಾಗಿವೆ. ಜಗತ್ತಿಗೆ ಸವಾಲೊಡ್ಡುವ ಸಾಹಿತ್ಯ ಕನ್ನಡ ಭಾಷೆಯಲ್ಲಿ ಲಭ್ಯವಿದೆ. ಅಂತಹ ಪ್ರಾಚೀನ ಭಾಷೆಗೆ ಇಂದು ಸಂಕಷ್ಟ ಎದುರಾಗಿದೆ. ಬಹಳಷ್ಟು ಕನ್ನಡ ಶಾಲೆಗಳನ್ನು ಮುಚ್ಚುವ ಹಂತಕ್ಕೆ ಬಂದಿದ್ದೆ. ಎಲ್ಲರು ಕನ್ನಡವನ್ನು ಬಳಸಬೇಕು. ಭಾಷೆ ಬೆಳದರೆ ಒಂದು ಸಂಸ್ಕøತಿ ಬೆಳಸಿದಂತೆ. ದೊಡ್ಡ ನಗರಗಳಲ್ಲಿ ಕನ್ನಡ ಭಾಷೆ ಬಳಸುವವರ ಸಂಖ್ಯೆ ಕಡಿಮೆಯಾಗಿದೆ. ಕನ್ನಡ ಭಾಷೆ ಬಂದರು ಸಹ ಕನ್ನಡ ಮಾತನಾಡಲು ಹಿಂಜರಿಯುತ್ತಿದ್ದಾರೆ ಎಂದರು.

    22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮುರುಗೇಶ್ ಗೌಡ್ರು, ನಗರಸಭೆ ಸದಸ್ಯೆ ರೋಹಿಣಿ ನವೀನ್, ಗಮಕ ಕಲಾ ಸಂಘದ ಅಧ್ಯಕ್ಷೆ ರಾಮಾದೇವಿ ವೆಂಕಣಾಚಾರ, 22ನೇ ವಾರ್ಡ್ ಜೆಸಿಆರ್ ವಿಪಿ ಬಡಾವಣೆ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಸುರೇಶ್, ಗಣಪತಿ ಸೇವಾ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ, ವೆಂಕಣಾಚಾರ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap