ಕನ್ನಡದ ಮನಸ್ಸುಗಳು ಕನ್ನಡ ಕಟ್ಟುವ ಕೆಲಸ ಮಾಡಬೇಕು..!

ಚಿಕ್ಕನಾಯಕನಹಳ್ಳಿ
    ಕನ್ನಡ ನಾಡಿನ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆ ಎಂದು ನಾವು ತಿಳಿದುಕೊಂಡಾಗ ಮಾತ್ರ ನಮಗೆ ನಾಡು, ನುಡಿ, ಇತಿಹಾಸ, ಸಂಸ್ಕೃತಿಯ ಬಗ್ಗೆ ಪ್ರೀತಿ, ಅಭಿಮಾನ ಮೂಡಲು ಸಾಧ್ಯ ಎಂದು ತಹಶೀಲ್ದಾರ್ ತೇಜಸ್ವಿನಿ ಹೇಳಿದರು.
     ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 64ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕರ್ನಾಟಕದಂತಹ ಭವ್ಯ ನಾಡಿನಲ್ಲಿ ವಾಸಿಸುತ್ತಿರುವ ನಾವು ನಮ್ಮ ನಾಡಿನ ಏಳಿಗೆಗೆ ದುಡಿದ ಮಹನೀಯರನ್ನು ಸ್ಮರಿಸುತ್ತಾ ನಾಡಿನ ಇತಿಹಾಸ, ಸಂಸ್ಕೃತಿಯನ್ನು ಮೆಲುಕು ಹಾಕುತ್ತಾ ರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಜವಬ್ದಾರಿಯಾಗಿದೆ ಹಾಗೂ ಆಡಳಿತ ಭಾಷೆಯಾಗಿ ಕನ್ನಡವನ್ನು ಅನುಷ್ಠಾನಗೊಳಿಸಲು ಕರ್ನಾಟಕ ಸರ್ಕಾರ ನೂರಾರು ಆದೇಶಗಳು, ಸುತ್ತೋಲೆಗಳು ಮತ್ತು ಅಧಿಸೂಚನೆಯನ್ನು ಹೊರಡಿಸುವ ಮೂಲಕ ನಾನಾ ಉತ್ತೇಜನಗಳನ್ನು ನೀಡುತ್ತಾ ಬಂದಿದೆ ಎಂದರು.
     ನಮ್ಮ ರಾಜ್ಯ ಅತ್ಯುನ್ನತ ಸಾಂಸ್ಕೃತಿಕ ವೈಭವ, ಪರಂಪರೆಯನ್ನು ಹೊಂದಿದ ರಾಜ್ಯವಾಗಿದ್ದು ಇದರ ಸಂಸ್ಕೃತಿ ಪಾರಂಪರಿಕ ವೈಭವವನ್ನು ಉಳಿಸಿ, ಬೆಳೆಸಿ ಪೋಷಿಸುವ ಮತ್ತು ಉನ್ನತೀಕರಿಸುವ ಜವಬ್ದಾರಿ ನಮ್ಮ, ನಿಮ್ಮೆಲ್ಲರ ಮೇಲಿದೆ ಎಂದು ಹೇಳಿದರು.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಎನ್.ಇಂದಿರಮ್ಮ ಮಾತನಾಡಿ, ಕನ್ನಡ ಭಾಷೆಯು ಕೆಲವರಿಂದ ನಿಧಾನವಾಗಿ ಮರೆಯಾಗುತ್ತಿದ್ದು ಇಂತಹದರ ಬಗ್ಗೆ ಕನ್ನಡಿಗರಾದ ನಾವು ಗಂಭೀರವಾಗಿ ಯೋಚನೆ ಮಾಡಬೇಕಿದೆ ಎಂದರು
 
    ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಮಾತನಾಡಿ, ನಮ್ಮ ಕನ್ನಡ ಬಾವುಟದ ಬಣ್ಣದ ಸಂಕೇತ, ಹರಿಶಿನ ಮತ್ತು ಕುಂಕುಮವಾಗಿದೆ, ಅರಿಶಿನ ಶಾಂತಿ ಮಂತ್ರ ನೀಡಿದರೆ, ಕುಂಕುಮ ಕ್ರಾಂತಿಯ ಸಂಕೇತವಾಗಿದೆ, ನಾವುಗಳು ತಾಯಿಗೆ ಎಷ್ಟು ಗೌರವ ನೀಡುತ್ತೆವೆಯೇ ಮಾತೃಭಾಷೆಗೂ ಅಷ್ಟೇ ಗೌರವ ನೀಡಬೇಕು ಎಂದ ಅವರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಕನ್ನಡಿಗರಿಗೆ ಅರ್ಥವಾಗುವಂತೆ ಕನ್ನಡದಲ್ಲಿ ಅಲ್ಲಿನ ಅರ್ಜಿಗಳು ದೊರೆಯುವಂತಾಗಬೇಕು ಎಂದರು.
    ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ವರದಿಗಾರ ವಿ.ಆರ್.ಮೇರುನಾಥ್, ಸಮಾಜ ಸೇವಯ ಮೂಲಕ ಗುರುತಿಸಿಕೊಂಡಿರುವ ಎನ್.ಇಂದಿರಮ್ಮರವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಲಕ್ಷ್ಮೀಪಾಂಡುರಂಗಯ್ಯ, ಮಮತಾಧೃವಕುಮಾರ್, ಉಮಾಪರಮೇಶ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ನಾರಾಯಣ ಸ್ವಾಮಿ, ಬಿಇಓ ಕಾತ್ಯಾಯಿನಿ, ಬೆಸ್ಕಾಂ ಎಇಇ ಗವಿರಂಗಯ್ಯ, ಪಿಡಬ್ಲ್ಯೂಡಿ ಎಇಇ ಚಂದ್ರಶೇಖರ್, ಪುರಸಭಾ ಮುಖ್ಯಾಧಿಕಾರಿ ನಿರ್ವಾಣಯ್ಯ, ಕನ್ನಡ ಸಂಘದ ಕಾರ್ಯದರ್ಶಿ ಕೆ.ಜಿ.ಕೃಷ್ಣೆಗೌಡ, ಸಿ.ಎಸ್.ನಟರಾಜು,  ಮತ್ತಿತರರು ಉಪಸ್ಥಿತರಿದ್ದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link