ಕೊಪ್ಪಳ:
ಬಜೆಟ್ ಅಧಿವೇಶನದಲ್ಲಿ ಎಲ್ಲಾ ಶಾಸಕರಿಗೂ ಸಹ ಸಂವಿಧಾನದ ಕನ್ನಡ ಆವೃತಿಯನ್ನು ನೀಡಲಾಗುವುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಚ್ 5 ರಂದು ಬಜೆಟ್ ಮಂಡನೆಗೆ ಎಲ್ಲ ಸಿದ್ದತೆ ನಡೆದಿದೆ. ಈ ಬಾರಿಯ ಬಜೆಟ್ ಅಧಿವೇಶನ ಐತಿಹಾಸಿಕವಾಗಲಿದೆ. ಯಾಕೆಂದರೇ ಬಜೆಟ್ ಅಧಿವೇಶನದಲ್ಲಿ ಎಲ್ಲ ಶಾಸಕರು ಸಂವಿಧಾನದ ಬಗ್ಗೆ ಮಾತನಾಡಲಿದ್ದಾರೆ. ಅದಕ್ಕಾಗಿ ಸಂವಿಧಾನವನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸಿ ಎಲ್ಲರಿಗೂ ಪುಸ್ತಕ ನೀಡುತ್ತೇವೆ ಎಂದರು.
ಶಾಸಕರಿಗೆ ಸಂವಿಧಾನದ ಪುಸ್ತಕ ಓದಿಕೊಂಡು ಬಂದು ಮಾತನಾಡಲು ಅವಕಾಶ ಕಲ್ಪಿಸಲಾಗುತ್ತದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದರು.ಇನ್ನು ಕೊಪ್ಪಳ ಜಿಲ್ಲೆಯ ತುಂಗಭದ್ರಾ ಡ್ಯಾಂ ನಲ್ಲಿ ಹೂಳು ತುಂಬಿದ ವಿಚಾರಕ್ಕೆ ಸಂಬಂಧಿಸಿದಂತೆ ನವಲಿ ಬಳಿ ಜಲಾಶಯ ನಿರ್ಮಾಣದ ಚಿಂತನೆ ಮಾಡಲಾಗುವುದು. ಹೊಸ ಡ್ಯಾಂ ನಿರ್ಮಾಣಕ್ಕೆ 6 ಸಾವಿರ ಕೋಟಿಗೂ ಅಧಿಕ ಹಣ ವ್ಯಯವಾಗಲಿದೆ. ಇದೊಂದು ಅಂತರಾಜ್ಯ ವಿಷಯವಾಗಿದ್ದು ಅದರ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ