ಹುಳಿಯಾರು:
ಹುಳಿಯಾರು ಸಮೀಪದ ಜೋಡಿಕಲ್ಲೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂತಾರಾಜು, ಉಪಾಧ್ಯಕ್ಷರಾಗಿ ಅನಂತಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುಡಿಗೌಡರಾದ ಹನುಮಂತಯ್ಯ. ಗ್ರಾಮ ಪಂಚಾಯ್ತಿ ಸದಸ್ಯರಾದ ಸರೋಜಮ್ಮಉಮೇಶ್ , ಪ್ರೇಮಲೀಲಾಮಹದೇವಯ್ಯ, ಮಾಜಿ ಅಧ್ಯಕ್ಷರಾದ ಕಮಲಮ್ಮಹನುಮಂತಯ್ಯ, ಮಾಜಿ ಗ್ರಾಮಪಂಚಾಯ್ತಿ ಸದಸ್ಯರಾದ ಶಕುಂತಲಾ ನಾಗರಾಜು, ರಾಮದಾಸ್,ದಯಾನಂದ್ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಅಭಿನಂದನೆ ಸಲ್ಲಿಸಿದರು.