ಕಾನೂನು ಸೇವಾಸಮಿತಿ ನೇತೃತ್ವದಲ್ಲಿ : ಕಾನೂನು ಅರಿವು ಕಾರ್ಯಕ್ರಮ

ಹಿರಿಯೂರು:

      ತಾಲ್ಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ, ಅಭಿಯೋಜನೆ ಇಲಾಖೆ, ಶಿಕ್ಷಣ ಇಲಾಖೆ, ಮತ್ತು ಸರ್ಕಾರ್ರಿ ಪದವಿ ಪೂವರ್ ಕಾಲೇಜು( ಪ್ರೌಢ ಶಾಲೆ ವಿಭಾಗ ) ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರ್ರಿ ಪದವಿ ಪೂರ್ವ ಕಾಲೇಜು ಹಿರಿಯೂರು ಇಲ್ಲಿ ”ನೊಂದ ವ್ಯಕ್ತಿ ಪರಿಹಾರ ಯೋಜನೆ ಹಾಗೂ ಸಾಗಾಣಿಕೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆಯ ಬಲಿ ಪಶುಗಳು ” ಕುರಿತು ಕಾರ್ಯಕ್ರಮದ ಉದ್ಗಾಟನೆಯನ್ನು ಪ್ರಧಾನ ಸಿವಿಲ್‍ ನ್ಯಾಯಾಧೀಶರಾದಶ್ರೀಮತಿ ಎನ್. ಬಿ. ಶೇಖ್‍ ‍ ಇವರು ನೆರವೇರಿಸಿದರು.

        ಕಾರ್ಯಕ್ರಮವನ್ನು ಕುರಿತು ಅವರು ಮಾತನಾಡಿ, ವಿದ್ಯಾರ್ಥಿ ಜೀವನ ಅತ್ಯಮೂಲ್ಯವಾದದು ಇಂತಹ ಜೀವನವನ್ನು ವಿದ್ಯಾರ್ಥಿಗಳು ಶಿಸ್ತು ಸಂಯಮ ಅಸಕ್ತಿಯನ್ನು ಕಲಿಕೆಯಲ್ಲಿ ತೋರಿಸಬೇಕು.ಅದರೆ ಇಂದಿನ ವಿದ್ಯಾರ್ಥಿಗಳು ಚಂಚಲ ಮನಸ್ಸಿನಿಂದ ವಿರುದ್ಧವಾಗಿ ಚಲ್ಲಿಸುತ್ತಾರೆ ಹಾಗೂ ಮಹಿಳೆಯರು ಮತ್ತು ಮಕ್ಕಳನ್ನು ವಾಣಿಜ್ಯ ಮತ್ತುಲೈಂಗಿಕ ಉದ್ದೇಶಕ್ಕಾಗಿ ಸಾಗಾಣಿಕೆಯನ್ನು ಮಾಡುತ್ತಿದ್ದಾರೆ . ಇಂತಹ ಘಾತಕ ಶಕ್ತಿಗಳನ್ನು ಪ್ರಜೆಗಳು ಸಂಬಂಧಿತ ಇಲಾಖೆಗಳು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು.

        ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ, ಮದ್ಯಸ್ಥಿಕೆ ಲೋಕ್‍ ಅದಾಲತ್‍ ಪೋಲಿಸ್‍ ದೂರು ಪ್ರಾಧಿಕಾರ ಪೆಟ್ಟಿಗೆ, ವ್ಯಾಜ್ಯ ಪೂರ್ವ ಪ್ರಕರಣ ಮುಂತಾದ ಸೌಲಭ್ಯಗಳಿದ್ದು ಅವುಗಳ ಸದುಪಯೋಗ ಪಡಿಸಿ ಕೊಳ್ಳಿ ಎಂದರು ಕಾರ್ಯಕ್ರಮದಲ್ಲಿ ಶ್ರೀ ಟಿ ದೃವಕುಮಾರ್ ಮತ್ತು ಟಿ ಜಗಧೀಶ್‍ ವಕೀಲರ‍ು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಿ ಎಸ್‍ ತಿಪ್ಪೆಸ್ವಾಮಿಯವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಅಪರ ಸಿವಿಲ್‍ ‍ ನ್ಯಾಯಾಧೀಶರಾದ ಶ್ರೀ ಮನುಪಟೇಲ್‍ ಬಿ ವೈ , ಬಿ ಇ ಒ ಸಿ ವಿ ನಟರಾಜ, ಇ ಸಿ ಒ ಹರೀಶ್‍ ಉಪಪ್ರಾಂಶು ಪಾಲರಾದ ಕೆ. ರಾಮಚಂದ್ರಪ್ಪ ಮತ್ತು ಶಾಲೆಯ ಬೋದಕ ಮತ್ತು ಬೋದಕೇತರ ಸಿಬ್ಬಂದಿಯವರು ಭಾಗವಹಿಸಿದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap