ಬೆಂಗಳೂರು
ಪತ್ನಿಯ ಕನ್ಯತ್ವದ ಪರೀಕ್ಷೆ ನಡೆಸಿ ಶೀಲ ಶಂಕಿಸಿ ಕಿರುಕುಳ ನೀಡಿದ್ದ ಕಾಮುಕ ಪತಿಯನ್ನು ಶಿವಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಪತ್ನಿಯ ಕನ್ಯತ್ವ(ವರ್ಜಿನಿಟಿ)ದ ಮೇಲೆಯೇ ಅನುಮಾನಗೊಂಡು ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ದು ಕನ್ಯತ್ವ ಪರೀಕ್ಷೆ ಮಾಡಿಸಿದ್ದ ಪತಿ ಪರಪ್ಪನ ಅಗ್ರಹಾರ ಜೈಲಿನ ಅತಿಥಿಯಾಗಿದ್ದಾನೆ.
ಕನ್ಯತ್ವ ಪರೀಕ್ಷೆ ಬಳಿಕ ಪತ್ನಿಗೆ ಹುಷಾರಿಲ್ಲದ ಕಾರಣ ಆಗಾಗ ವಾಂತಿ ಶುರುವಾಗಿದ್ದು ಇದನ್ನು ತಪ್ಪಾಗಿ ತಿಳಿದುಕೊಂಡು ನೀನು ಮತ್ತೋರ್ವನ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಿಯಾ ಎಂದು ಪತಿಯ ಕುಟುಂಬಸ್ಥರೆಲ್ಲ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯು ಮಹಿಳಾ ಸಹಾಯವಾಣಿಯ ಮೊರೆ ಹೋಗಿದ್ದರು ಅಲ್ಲಿಂದ ದೂರು ಶಿವಾಜಿನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡು ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ
ದೂರಿನಲ್ಲಿ ಆಕೆ ನಮ್ಮದು ಬಡ ಕುಟುಂಬ ಮೂವರು ಅಕ್ಕ-ತಂಗಿಯರಿಗೆ ಮದುವೆಯಾಗಿದ್ದು ತಂದೆ ತೀರಿಕೊಂಡ ನಂತರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ನನ್ನ ತಾಯಿಯನ್ನ ನೋಡಿಕೊಳ್ಳುತ್ತಿದ್ದೆ ಆದರೆ ತಾಯಿಗೆ ಕ್ಯಾನ್ಸರ್ ಇದ್ದ ಕಾರಣ ಮನೆಯಲ್ಲಿ ಮದುವೆಯ ಚಿಂತೆಯಿತ್ತು. ಈ ವೇಳೆ ಮದುವೆಗೆ ಸಂಬಂಧವೊಂದು ಕೂಡಿ ಬಂದಿತ್ತು. ಮದುವೆ ಮುನ್ನವೇ ತಾಯಿ ತೀರಿಕೊಂಡಿದ್ದರು.ತಾಯಿ ತೀರಿಕೊಂಡರೂ ಸಹ ಆಗ ನೋಡಿದ್ದ ಹುಡುಗನನ್ನೇ ವಿವಾಹವಾಗಲು ನಾನು ಒಪ್ಪಿಕೊಂಡೆ
ತಾಯಿ ಕೊನೆಯುಸಿರೆಳೆದ ವೇಳೆ ಒಬ್ಬಂಟಿತನ ಕಾಡುತ್ತಿತ್ತು ಆಗ ತಂದೆ ಸಮಾನರಂತಿದ್ದ ವ್ಯಕ್ತಿವೋರ್ವನ ಬಳಿ ತನಗಾದ ನೋವಿನ ಬಗ್ಗೆ ಹೇಳಿಕೊಳ್ಳುತ್ತಿದ್ದಳು. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿಕೊಂಡ ಯುವಕ ಮದುವೆಯಾದ ಮೊದಲ ದಿನವೇ ಪತ್ನಿಯ ಕನ್ಯತ್ವದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ.
ಬಳಿಕ ಆಸ್ಪತ್ರೆಗೆ ಕರೆದೊಯ್ದು ಕನ್ಯತ್ವ ಪರೀಕ್ಷೆ ಮಾಡಿಸಿದ್ದ ಬಳಿಕ ಆರೋಗ್ಯ ಹದಗೆಟ್ಟು ಆಗಾಗ ವಾಂತಿ ಆಗುತ್ತಿರುವುದನ್ನೂ ತಪ್ಪಾಗಿ ತಿಳಿದುಕೊಂಡು ಬೇರೊಬ್ಬನಿಂದ ನೀನು ಗರ್ಭಿಣಿಯಾಗಿದ್ದಿಯಾ ಎಂದು ಪತಿಯ ಕುಟುಂಬಸ್ಥರೆಲ್ಲಾ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದರು.ಸಂತ್ರಸ್ಥೆಯು ನೀಡಿದ ದೂರನ್ನು ಮಹಿಳಾ ಸಹಾಯವಾಣಿಯ ಅಧಿಕಾರಿಗಳು ಶಿವಾಜಿನಗರ ಪೆÇಲೀಸ್ ಠಾಣೆಗೆ ವರ್ಗಾಹಿಸಿದ್ದು ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ