ಕಾರ್ಮಿಕ ದಿನಾಚರಣೆ ಪ್ರಯುಕ್ತ ಪ್ರತ್ಯೇಕ ಮೆರವಣಿಗೆ

ದಾವಣಗೆರೆ:

     ಮೇ ದಿನಾಚರಣೆಯ ಪ್ರಯುಕ್ತ ಎಐಟಿಯುಸಿ ಹಾಗೂ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ನಗರದಲ್ಲಿ ಬುಧವಾರ ಪ್ರತ್ಯೇಕ ಮೆರವಣಿಗೆ ನಡೆಸಿದರು.

ಎಐಟಿಯುಸಿ ಮೆರವಣಿಗೆ:

      ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಎಐಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ನಗರದ ನಿಟ್ಟುವಳ್ಳಿ ರಸ್ತೆಯಲ್ಲಿರುವ ಕಾಮ್ರೇಡ್ ಸುರೇಶ್, ಕಾಮ್ರೇಡ್ ಶೇಖರಪ್ಪ ವ್ಯಾಯಾಮ ಶಾಲೆಯಿಂದ ಬೃಹತ್ ಮೆರವಣಿಗೆ ನಡೆಸಿದರು.ಮೆರವಣಿಗೆಯಲ್ಲಿ ಕಾರ್ಲ್‍ಮಾಕ್ಸ್, ಕಾಮ್ರೇಡ್ ಪಂಪಾಪತಿ, ಕಾಂ.ಸೂರ್ಯನಾರಾಯಣರಾವ್, ಕಾಮ್ರೇಡ್ ಸುರೇಶ್, ಕಾಮ್ರೇಡ್ ಶೇಖರಪ್ಪ, ಕಾಂ.ಬಸವರಾಜ್, ಕಾಂ.ಹುಬ್ಬಳ್ಳಿ ಬುಡೇನ್ ಸಾಬ್ ಹಾಗೂ ಮತ್ತಿತರರ ಹುತಾತ್ಮ ಹೋರಾಟಗಾರರ ಭಾವಚಿತ್ರಗಳನ್ನು ಟ್ರಾಕ್ಟರ್‍ನಲ್ಲಿಟ್ಟು ಮೆರವಣಿಗೆ ಮಾಡಿದರು.

      ಮೇ ಡೇಯ ಮೆರವಣಿಗೆಯ ಉದ್ದಕ್ಕೂ ಕೆಂಪು ಬಾವುಟಗಳು ರಾರಾಜಿಸುತ್ತಿದ್ದವು. ಅಲ್ಲದೇ, ಕೆಂಪು ಅಂಗಿ ಹಾಗೂ ಖಾಕಿ ಬಣ್ಣದ ಪ್ಯಾಂಟ್ ತೊಟ್ಟ ಸ್ವಯಂ ಸೇವಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕರನ್ನು ಶಿಸ್ತಾಗಿ ಸಾಲಿನಲ್ಲಿ ಬರುವಂತೆ ಸೂಚಿಸುತ್ತಿದ್ದರು. ಅಲ್ಲದೇ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಬಿಸಿಯೂಟ ತಯಾರಕರು ಕೆಂಪು ಸೀರೆ ಉಟ್ಟು ಮೆರವಣಿಗೆಗೆ ಕೆಂಬಾವುಟದ ಕಳೆ ತಂದು ಕಟ್ಟಿಕೊಟ್ಟರು.

       ಕಾಮ್ರೇಡ್ ಸುರೇಶ್, ಕಾಮ್ರೇಡ್ ಶೇಖರಪ್ಪ ವ್ಯಾಯಾಮ ಶಾಲೆಯಿಂದ ಆರಂಭವಾದ ಮೆರವಣಿಗೆಯು ಶಿವಪ್ಪಯ್ಯ ವೃತ್ತ, ಜಯದೇವ ವೃತ್ತ, ಪ್ರವಾಸಿ ಮಂದಿರ ರಸ್ತೆ, ಪಿಬಿ ರಸ್ತೆ, ಗಾಂಧಿ ವೃತ್ತ, ಅಶೋಕ ರಸ್ತೆಯ ಮೂಲಕ ಬಹಿರಂಗ ಸಭೆ ನಡೆದ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ರಸ್ತೆಯನ್ನು ತಲುಪಿ ಮುಕ್ತಾಯವಾಯಿತು.

      ಮೆರವಣಿಗೆಯ ನೇತೃತ್ವವನ್ನು ಎಐಟಿಯುಸಿಯ ಹೆಚ್.ಕೆ.ರಾಮಚಂದ್ರಪ್ಪ, ಎಐಬಿಇಎ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯರಿ, ಎಐಟಿಯುಸಿಯ ಆನಂದರಾಜ್, ಆವರಗೆರೆ ಚಂದ್ರು, ಆವರಗೆರೆ ವಾಸು, ಸಿ.ರಮೇಶ್, ಐರಣಿ ಚಂದ್ರು, ಪಿ.ಷಣ್ಮುಖಸ್ವಾಮಿ, ಎಂ.ಬಿ.ಶಾರದಮ್ಮ, ಗುಡಿಹಳ್ಳಿ ಹಾಲೇಶ್, ಸರೋಜಾ, ರಮೇಶ್ ನಾಯ್ಕ, ಆವರಗೆರೆ ಭಾನಪ್ಪ, ಯರಗುಂಟೆ ಸುರೇಶ್ ಸೇರಿದಂತೆ ಹಲವರು ವಹಿಸಿದ್ದರು.

ಎಐಯುಟಿಯುಸಿ ಮೆರವಣಿಗೆ:

      ಕಾರ್ಮಿಕರ ದಿನಾಚರಣೆಯ ಪ್ರಯುಕ್ತ ಎಐಯುಟಿಯುಸಿ ನೇತೃತ್ವದಲ್ಲಿ ಕಾರ್ಮಿಕರು ನಗರದ ವಿಶ್ವೇಶ್ವರಯ್ಯ ಉದ್ಯಾನವನದಿಂದ ಮೆರವಣಿಗೆ ನಡೆಸಿದರು.

       ವಿಶ್ವೇಶ್ವರಯ್ಯ ಪಾರ್ಕ್ ಬಳಿಯಿಂದ ಆರಂಭವಾದ ಮೆರವಣಿಗೆಯು ವಿದ್ಯಾರ್ಥಿ ಭವನ ವೃತ್ತ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ ಬಳಸಿಕೊಂಡು ಪ್ರವಾಸಿ ಮಂದಿರ ರಸ್ತೆಯ ಮೂಲಕ ವೇದಿಕೆ ಕಾರ್ಯಕ್ರಮ ನಡೆದ ರೋಟರಿ ಬಾಲ ಭವನ ಸೇರಿ ಮುಕ್ತಾಯವಾಯಿತು.
ಮೆರವಣಿಗೆಯಲ್ಲಿ ಕಾರ್ಲ್‍ಮಾಕ್ರ್ಸ್, ಫೆಡ್ರಿಕ್ ಎಂಗೆಲ್, ಲೆನಿನ್, ಸ್ಟ್ಯಾಲಿನ್, ಮಾವೋ ಜೆಡಾಂಗ್, ಶಿಬ್‍ದಾಸ್ ಘೋಷ್ ಅವರ ಭಾವಚಿತ್ರಗಳು ವಿಶೇಷ ಗಮನ ಸೆಳೆದರೆ, ಕಾರ್ಮಿಕರ ಹಕ್ಕುಗಳ ಕುರಿತು ಬರೆದಿದ್ದ ಪ್ಲೆಕಾಡ್ರ್ಸ್ ಸಹ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದವು.

      ಮೆರವಣಿಗೆಯಲ್ಲಿ ಎಐಯುಟಿಯುಸಿಯ ಮಂಜುನಾಥ್ ಕುಕ್ಕುವಾಡ, ತಿಪ್ಪೇಸ್ವಾಮಿ, ಮಧು ತೊಗಲೇರಿ, ಭಾರತಿ, ಸೌಮ್ಯ, ಸ್ಮಿತಾ, ಸ್ವಾಮಿಲಿಂಗಪ್ಪ, ಪ್ರಕಾಶ್ ಅನಿತಾ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link