2025ರ ವೇಳೆಗೆ ಮಲೇರಿಯಾ ,ಮುಕ್ತ..!!

ಬೆಂಗಳೂರು

     ಬರುವ 2025ರ ವೇಳೆಗೆ ಮಲೇರಿಯಾ ಮುಕ್ತ ರಾಜ್ಯ ಎನ್ನುವ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಲಿದೆ.ಕಳೆದ 2019ರ ಜ. 19 ರಿಂದ ಮಾ. 19ರವರೆಗೆ ಮಲೇರಿಯಾ ಸಮೀಕ್ಷೆ ನಡೆಸಿ ಜನವರಿಯಲ್ಲಿ 48,636 ಪ್ರಕರಣಗಳಿಗೆ ರಕ್ತ ಲೇಪನ (ಬಿಎಸ್‍ಸಿ ಮತ್ತು ಬಿಎಸ್‍ಎಫ್) ಪರೀಕ್ಷೆಗಳನ್ನು ನಡೆಸಲಾಗಿದ್ದು, ಮಲೇರಿಯಾ ಶೂನ್ಯ ಸಂಖ್ಯೆಯಲ್ಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ.ಎಸ್ ಪ್ರಕಾಶ್ ತಿಳಿಸಿದರು.

      ಫೆಬ್ರವರಿಯಲ್ಲಿ ನಡೆಸಿದ 47,221 ರಕ್ತ ಪರೀಕ್ಷೆಯಲ್ಲಿ ಶೂನ್ಯ ಮಲೇರಿಯಾ ಹಾಗೂ ಶೂನ್ಯ ಸಾವು ಪ್ರಕರಣ ಕಂಡು ಬಂದಿದೆ. ಉಳಿದಂತೆ ಮಾ. 19ರಂದು ನಡೆಸಿದ 46,241 ರಕ್ತ ಲೇಪನ ಪರೀಕ್ಷೆಯಲ್ಲಿ ಶೂನ್ಯ ಮಲೇರಿಯಾ ಹಾಗೂ ಶೂನ್ಯ ಸಾವು ಪ್ರಕರಣ ಕಂಡು ಬಂದಿದೆ.

       2016ರಲ್ಲಿ 3,14,484 ರಕ್ತ ಲೇಪನ ಪ್ರಕರಣಗಳಲ್ಲಿ 13 ಮಲೇರಿಯಾ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಆದರೆ, ಸಾವಿನ ಸಂಖ್ಯೆ ಶೂನ್ಯವಾಗಿತ್ತು. 2017ರಲ್ಲಿ 3,91,168 ರಕ್ತ ಲೇಪನ ಪ್ರಕರಣಗಳಲ್ಲಿ 10 ಮಲೇರಿಯಾ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು. ಸಾವಿನ ಸಂಖ್ಯೆ ಶೂನ್ಯವಾಗಿದ್ದು, 2018ರಲ್ಲಿ 5,14,562 ಪ್ರಕರಣಗಳಲ್ಲಿ ಮಲೇರಿಯಾ ಪ್ರಕರಣ ಹಾಗೂ ಸಾವಿನ ಸಂಖ್ಯೆ ಶೂನ್ಯ ತಲುಪಿರುವುದನ್ನು ಕಂಡುಕೊಳ್ಳಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

       2016ರಲ್ಲಿ 9026 ಪುರುಷ ಆರೋಗ್ಯ ಸಹಾಯಕರು, 1,35,039 ಮಹಿಳಾ ಆರೋಗ್ಯ ಸಹಾಯಕರು ಹಾಗೂ 4399 ಆಶಾ ಕಾರ್ಯಕರ್ತೆಯರು, 2017ರಲ್ಲಿ 1,1500 ಪುರುಷ ಆರೋಗ್ಯ ಸಹಾಯಕರು, 1,52,250 ಮಹಿಳಾ ಆರೋಗ್ಯ ಸಹಾಯಕರು. 15,846 ಆಶಾ ಕಾರ್ಯಕರ್ತೆಯರು, 2018ರಲ್ಲಿ 1,3,419 ಪುರುಷ ಹಾಗೂ 2,36,337 ಮಹಿಳಾ, 34,147 ಆಶಾ ಕಾರ್ಯಕರ್ತೆಯರನ್ನು ಮಲೇರಿಯಾ ತಪಾಸಣಾ ಕಾರ್ಯಕ್ರಮಗಳಿಗೆ ತರಬೇತಿ ನೀಡುವ ಮೂಲಕ ಬಳಸಿಕೊಳ್ಳಲಾಗಿತ್ತು ಎಂದು ತಿಳಿಸಿದರು. ಉಳಿದಂತೆ 2019ರ ಜನವರಿಯಲ್ಲಿ 12,214 ಪುರುಷ, 2231 ಮಹಿಳೆ, 3,528 ಆಶಾ, ಫೆಬ್ರವರಿಯಲ್ಲಿ 12,058, 19,385 ಮಹಿಳಾ, 3625 ಆಶಾ ಕಾರ್ಯಕರ್ತರು, ಮಾರ್ಚ್‍ನಲ್ಲಿ 12,171 ಪುರುಷ, 19,381 ಮಹಿಳಾ, 3230 ಆಶಾ ಕಾರ್ಯಕರ್ತರನ್ನು ಮಲೇರಿಯಾ ನಿರ್ಮೂಲನೆ ಕಾರ್ಯಕ್ರಮದಲ್ಲಿ ಬಳಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಹೊಸ ಸೊಳ್ಳೆ ಪ್ರಬೇಧ

       ಮಲೇರಿಯಾ ರೋಗಕ್ಕೆ ಪ್ರಮುಖವಾಗಿ 4 ಸೊಳ್ಳೆ ಪ್ರಬೇಧಗಳು ಕಾರಣವಾಗಿವೆ. ಮಲೇರಿಯಾ ವೈವ್ಯಾಕ್ಸ್, ಪಾಸ್ಮೋಡಿಯಂ ವೈವ್ಯಾಕ್ಸ್, ಮಲೇರಿಯಾ ಓವಾಲೆ ಇದೀಗ ಅಂಡಮಾನ್-ನಿಖೋಬಾರ್‍ನಲ್ಲಿ ಹೊಸ ಸೊಳ್ಳೆ ಪ್ರಬೇಧವೊಂದನ್ನು ಪತ್ತೆ ಹಚ್ಚಲಾಗಿದೆ. ಅದಕ್ಕಿನ್ನು ಹೆಸರಿಡಲಾಗಿಲ್ಲ. ಮೂಲತಃ ಬೆಂಗಳೂರಿಗರಲ್ಲಿ ಮಲೇರಿಯಾ ಸೋಂಕು ಶೂನ್ಯ ಪ್ರಮಾಣದಲ್ಲಿದೆ. ರಾಜ್ಯದ ಅಥವಾ ದೇಶದ ಬೇರೆ ಬೇರೆ ಭಾಗಗಳಿಂದ ಬೆಂಗಳೂರಿಗೆ ಬಂದು ನೆಲೆಸುವ ವಲಸಿಗರಲ್ಲಿ ಹೆಚ್ಚು ಪ್ರಮಾಣದಲ್ಲಿ ಮಲೇರಿಯಾ ಸೋಂಕು ಕಂಡು ಬಂದಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಟಿ.ಕೆ. ಸುನಂದಾ ತಿಳಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap