ಚಿತ್ರದುರ್ಗ:
ಐತಿಹಾಸಿಕ ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ಮಹಿಳಾ ನಿರ್ದೇಶಕಿಯರಾದ ರತ್ನಮ್ಮ, ಲತ ಇವರುಗಳ ನೇತೃತ್ವದಲ್ಲಿ ಕೋಟೆ ಆವರಣದಲ್ಲಿರುವ ಕರುವರ್ತಿಯಲ್ಲಿ ಸಂಕಷ್ಟಿ ಪ್ರಯುಕ್ತ ಸೋಮವಾರ ಕಾರ್ತಿಕ ಹಮ್ಮಿಕೊಳ್ಳಲಾಗಿತ್ತು.
ಬಸವಣ್ಣನ ದೇವಸ್ಥಾನದ ಎದುರಿನಲ್ಲಿರುವ ಕರುವರ್ತಿಶ್ವರ ಪುಷ್ಕರಣಿಯ ಸುತ್ತಲೂ ದೀಪಗಳನ್ನು ಹಚ್ಚಿ ಕಾರ್ತಿಕವನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು. ಕೋಟೆ ವಾಯುವಿಹಾರಿಗಳ ಸಂಘದ ಗೀತಮ್ಮ, ವನಜಾಕ್ಷಿ, ಲತ, ವೀಣ, ಕಮಲ, ಶೋಭ, ಜಯಶ್ರಿಉ, ರಚನ, ಮಹದೇವಮ್ಮ, ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ, ಚನ್ನಬಸಪ್ಪ, ಮಂಜಪ್ಪ, ನರಸಿಂಹಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
