ಕರೂರಿನಲ್ಲಿ ಚುನಾವಣೆ ಬಹಿಷ್ಕರಿಸುವ ಬೆದರಿಕೆ..!

ದಾವಣಗೆರೆ:

    ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸದ ಪಾಲಿಕೆ ಕ್ರಮ ಖಂಡಿಸಿ, ನ.12ರಂದು ನಡೆಯುವ ಪಾಲಿಕೆ ಚುನಾವಣೆ ಬಹಿಷ್ಕಕರಿಸುವುದಾಗಿ ಎಚ್ಚರಿಸಿ, ಕರೂರು ಗ್ರಾಮಸ್ಥರು ಶನಿವಾರ ದಿಢೀರ್ ಪ್ರತಿಭಟನೆ ನಡೆಸಿದರು.ಮಹಾನಗರ ಪಾಲಿಕೆಯ ವ್ಯಾಪ್ತಿಯ ಕರೂರು ಗ್ರಾಮಸ್ಥರು ಕೂರುರು ಹಾದುಕೊಂಡು ಜಿಲ್ಲಾಡಳಿತ ಭವನಕ್ಕೆ ಹೋಗುವ ಮುಖ್ಯ ರಸ್ತೆಗೆ ಬೇಲಿ ಹಾಕಿ, ಸಾಮೂಹಿಕವಾಗಿ ಅಡುಗೆ ತಯಾರಿಸಿ, ಕೆಲ ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಕರೂರು ಗ್ರಾಮವನ್ನು ಸಂಪೂರ್ಣವಾಗಿ ಕಡೆಗಣಿಸಿರುವ ಜಿಲ್ಲಾಡಳಿತ ಮತ್ತು ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಮಹಾನಗರ ಪಾಲಿಕೆ ವ್ಯಾಪ್ತಿಯ 45ನೇ ವಾರ್ಡ್ನ ಕರೂರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಹೀಗಾಗಿ ತಮಗೆ ಸೌಲಭ್ಯ ಕಲ್ಪಿಸದ ಪಾಲಿಕೆ ಚುನಾವಣೆ ನಮಗೇಕೆ ಬೇಕೆಂಬ ಕಾರಣಕ್ಕೆ ಪಾಲಿಕೆ ಚುನಾವಣೆಯನ್ನು ಬಹಿಷ್ಕರಿಸಿ ಪ್ರತಿಭಟಿಸುತ್ತಿದ್ದೇವೆ ಎಂದು ಹೇಳಿದರು.

     ಕರೂರಿಗೆ ಸ್ಮಶಾನವಿಲ್ಲ, ಪಾಲಿಕೆಯಿಂದ ಸಮಪರ್ಕವಾಗಿ ಕುಡಿಯುವ ನೀರು ಪೂರೈಸದೇ 15 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದುವರೆವಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿಲ್ಲ. ಬಸ್ ಸೌಕರ್ಯ ಇಲ್ಲ. ಸರಿಯಾದ ಚರಂಡಿ, ಯುಜಿಡಿ ವ್ಯವಸ್ಥೆ ಇಲ್ಲ. ನಮ್ಮಿಂದ ತೆರಿಗೆ ಸಂಗ್ರಹಿಸಿಕೊಂಡು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸದ ಪಾಲಿಕೆ ಆಗಲಿ, ಪಾಲಿಕೆ ಚುನಾವಣೆಯಾಗಲಿ ನಮಗೇಕೆಬೇಕೆಂಬುದು ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು.

   ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಪಾಲಿಕೆಯ ಆಯುಕ್ತ ಮಂಜುನಾಥ ಬಳ್ಳಾರಿ ಹಾಗೂ ಕಾರ್ಯಪಾಲಕ ಇಂಜಿನಿಯರ್ ಭಾರತಿ ಸ್ಥಳಕ್ಕೆ ಧಾವಿಸಿ, ಪ್ರತಿಭಟನಾಕಾರರ ಮನವೋಲಿಸಲು ಪ್ರಯತ್ನಿಸಿದರು. ಪಟ್ಟು ಸಡಲಿಸದ ಕರೂರಿನ ನಾಗರೀಕರು, ಹಿಂದಿನ ಜಿಲ್ಲಾಧಿಕಾರಿಗಳು ಕರೂರು ಎಲ್ಲಿದೆ ಎಂದು ಪ್ರಶ್ನಿಸಿದ್ದರು. ಹೀಗಾಗಿ ಸ್ವತಃ ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಧಾವಿಸಬೇಕೆಂದು ಪಟ್ಟು ಹಿಡಿದರು.

    ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಚುನಾವಣೆ ಮುಗಿದ ತಕ್ಷಣ ನಿಮ್ಮ ಬೇಡಿಕೆಗಳನ್ನು ಈಡೇರಿಸಲಾಗುವುದು. ಆದ್ದರಿಂದ ಪ್ರತಿಭಟನೆಯನ್ನು ವಾಪಾಸ್ ಪಡೆದು ಯಾವುದೇ ಕಾರಣಕ್ಕೂ ಚುನಾವಣೆಯನ್ನು ಬಹಿಷ್ಕಕರಿಸದೇ, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸಲಹೆ ನೀಡಿದರು.ಜಿಲ್ಲಾಧಿಕಾರಿಗಳು ಭರವಸರೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ವಾಪಾಸ್ ಪಡೆದ ಕರೂರು ನಿವಾಸಿಗಳು, ಚುನಾವಣೆಯಲ್ಲಿ ತೊಡಗಿಸಿಕೊಳ್ಳಲು ಸಮ್ಮತಿ ನೀಡಿದರು.

    ಪ್ರತಿಭಟನೆಯಲ್ಲಿ ಮುಖಂಡರಾದ ಕೆ.ಜಿ.ಶಂಭುನಾಥ, ಕೆ.ಟಿ.ಪಕ್ಕೀರಪ್ಪ, ಖಲೀಲ್, ದಾದಾಪೀರ್, ಮಂಜುನಾಥ, ಸಚಿನ್, ಜಿ.ಎನ್. ಮಾರುತಿ, ರುದ್ರೇಶ, ಎ.ಕೆ.ಬಸವರಾಜ, ಎ.ಕೆ.ನಾಗರಾಜ, ರಘು ಪಟೇಲ್, ಸೈಯದ್ ಇಸ್ಮಾಯಿಲ್, ಸೈಯದ್ ಮುಜೀಬ್, ಮಂಜುನಾಥ, ಕೆ.ಎಚ್.ಕರಿಯಪ್ಪ, ಚಂದ್ರು, ಮಂಜುಳಮ್ಮ, ರತ್ನಮ್ಮ, ಶಾಂತಮ್ಮ, ಶಾರದಮ್ಮ, ಗೀತಮ್ಮ, ನಿರ್ಮಲಮ್ಮ, ಪುµÀ್ಪಮ್ಮ, ಜ್ಯೋತಿ, ರೇಣುಕಮ್ಮ, ಮೀನಾಕ್ಷಿ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link