ಜಗಳೂರು :
ತಾಲೂಕಿನ ಪಿಂಜಾರ್/ನದಾಫ್ ಸಂಘದ ವತಿಯಿಂದ ಅ. 21 ರಂದು ಸಮಾಜ ಬಾಂಧವರ ಕಾರ್ಯಕಾರಣಿ ಸಭೆ ಕರೆಯಲಾಗಿದೆ ಎಂದು ಪಿಂಜಾರ್/ನದಾಪ್ ಸಂಘದ ಉಪಾಧ್ಯಕ್ಷ ಜೆ.ಬಿ.ಮಹಮ್ಮದ್ಗೌಸ್ ತಿಳಿಸಿದರು.ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪಟ್ಟಣದ ಶಾದಿಮಹಲ್ನಲ್ಲಿ ಹಾಲಿ ಅಧ್ಯಕ್ಷರಾದ ಹೆಚ್.ಎಸ್.ಮಹಮ್ಮದ್ ಮುಸ್ತಾಫ್ ಇವರ ಅಧ್ಯಕ್ಷೆಯಲ್ಲಿ ಸಭೆಯನ್ನು ಕರೆಯಲಾಗಿದ್ದು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೊಸ ಸಮಿತಿ ರಚನೆ ಮಾಡಲು ಸಹಕರಿಸಬೇಕೆಂದು ತಿಳಿಸಿದ್ದಾರೆ.
ಸಮಿತಿಯಲ್ಲಿ ಇದೇ ಮೊದಲಭಾರಿಗೆ 5 ಮಹಿಳೆಯರಿಗೆ ಸಮಿತಿಯಲ್ಲಿ ಸ್ಥಾನಮಾನ ನೀಡಲಾಗಿದೆ. ಒಟ್ಟು 30 ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಹೊಸದಾಗಿ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಸದಸ್ಯರು 500 ರೂ. ಸದಸ್ಯತ್ವ ಶುಲ್ಕವನ್ನು ನೀಡಿ ಸದಸ್ಯರ ದೃಢೀಕರಣ ಪತ್ರವನ್ನು ಪಡೆಯತಕ್ಕದ್ದು ಎಂದವರು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಮುಖಂಡರಾದ ಎಸ್.ಹೆಚ್.ಸನಾಉಲ್ಲಾ, ಇಮಾಂಅಲಿ, ಉಸ್ಮಾನ್ಅಲಿ, ಸುಭಾನ್ ಸೇರಿದಂತೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
