ಬೆಂಗಳೂರು
ಪ್ಲಾಸ್ಟಿಕ್ ಬಳಸದಿರುವುದು ಹಸಿ ಕಸ ಮತ್ತು ಒಣ ಕಸವನ್ನು ಸಮರ್ಪಕವಾಗಿ ವಿಂಗಡಿಸುವ ಬಗ್ಗೆ ಜಾಗೃತಿ ಮೂಡಿಸಲು ನಗರದ ಎಲ್ಲಾ ವಲಯಗಳಲ್ಲೂ ಜಾಗೃತಿ ಜಾಥಾಗಳನ್ನು ನಡೆಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ಅವರು ತಿಳಿಸಿದರು.
ಮಲ್ಲೇಶ್ವರಂನಲ್ಲಿರುವ ಐಪಿಪಿ ಕೇಂದ್ರದಲ್ಲಿ ಪಶ್ಚಿಮ ವಲಯದ ಶಾಲಾ ಮಕ್ಕಳು ಮತ್ತು ಶಿಕ್ಷಕರ ಸಭೆ ನಡೆಸಿದ ಅವರು ಮುಂದಿನವಾರ ಇದೇ ವಲಯದಲ್ಲಿ ಪ್ಲಾಸ್ಟಿಕ್ ನಿಷೇಧ, ಪಿಓಪಿ ಗಣೇಶಮೂರ್ತಿ ಬದಲು ಮಣ್ಣಿನ ಗಣೇಶ ಮೂರ್ತಿಗಳನ್ನು ಕೊಳ್ಳುವಂತೆ ಅರಿವು ಮೂಡಿಸಲು ಜಾಥಾ ಆಯೋಜಿಸಲಾಗುವುದು ಎಂದು ಹೇಳಿದರು.
ಜಾಥಾಗಳಲ್ಲಿ ಬಿಬಿಎಂಪಿಯು ಎಲ್ಲಾ ಶಾಲೆಗಳ ಮುಖ್ಯಸ್ಥರು ಮತ್ತು ಮಕ್ಕಳು ಭಾಗವಹಿಸಬೇಕು ಎಂದ ಅವರು ಪಶ್ಚಿಮ ವಲಯದಲ್ಲಿ 33 ಬಿಬಿಎಂಪಿ ಮತ್ತು 140 ಖಾಸಗಿ ಶಾಲೆಗಳಿವೆ. ಪರಿಸರ ಸಂರಕ್ಷಣೆಗಾಗಿ ಈ ಶಾಲೆಗಳ ಮಕ್ಕಳಿಗೆ 2 ನಿಮಿಷಗಳ ಕಾಲ ಅರಿವು ಮೂಡಿಸಿದರೆ ಅವರು ತಮ್ಮ ಮನೆ ಮತ್ತು ಅಕ್ಕಪಕ್ಕದ ಮನೆಯವರಿಗೂ ಮನವರಿಕೆ ಮಾಡಿಕೊಡಲಿದ್ದಾರೆ ಎಂದರು.
ಜಾಥಾ ನಡೆಸುವ ಸಂಬಂಧ ಆಯಾ ವಲಯ ಜಂಟಿ ಆಯುಕ್ತರನ್ನೆ ನೋಡೆಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು. ಜಾಥಾ ಯಾವ ರಸ್ತೆಯಲ್ಲಿ ಸಾಗಬೇಕು ಎಂಬ ಬಗ್ಗೆ ರಸ್ತೆಯ ನೀಲಿ ನಕ್ಷೆಯನ್ನು ಸಿದ್ಧಪಡಿಸಿ ಪಾಲಿಕೆ ವತಿಯಿಂದಲೇ ನಾಮ ಫಲಕಗಳನ್ನು ವಿತರಿಸುವರು ಎಂದು ತಿಳಿಸಿದರುಸಭೆಯಲ್ಲಿ ಜೆಡಿಎಸ್ ಗುಂಪಿನ ನಾಯಕಿ ನೇತ್ರಾ ನಾರಾಯಣ್, ಪಶ್ಚಿಮ ವಲಯದ ಜಂಟಿ ಆಯುಕ್ತ ಚಿದಾನಂದ ಅವರು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








