ಬೆಂಗಳೂರು:
ಸಣ್ಣ ಮತ್ತು ಅತಿ ಸಣ್ಣ ನಗರಗಳಿಗೆ ಕಲ್ಪಿಸಿದ ಉತ್ತಮ ಸಾರಿಗೆ ಸೇವೆಗಾಗಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಕೇಂದ್ರ ಸರ್ಕಾರದ “ಅವಾರ್ಡ್ ಆಫ್ ಎಕ್ಸಲೆನ್ಸ್” ಪ್ರಶಸ್ತಿ ಲಭಿಸಿದೆ.
ಕೆಎಸ್ ಆರ್‍ಟಿಸಿ ಸಂಸ್ಥೆ 16 ಸಣ್ಣ ಹಾಗೂ ಮಧ್ಯಮ ನಗರ ಮತ್ತು ಪಟ್ಟಣಗಳಲ್ಲಿ ಪ್ರತಿದಿನ 786 ಬಸ್ ಗಳನ್ನು ಒಡಿಸುವ ಮೂಲಕ 5 ಲಕ್ಷ ಗ್ರಾಮೀಣ ಪ್ರಯಾಣಿಕರಿಗೆ ಸಾರಿಗೆ ಸೇವೆ ಒದಗಿಸುವ ಕೆಲಸ ಮಾಡುತ್ತಿರುವುದಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಸದರಿ ಪ್ರಶಸ್ತಿಯನ್ನು ಬರುವ ತಿಂಗಳು 4 ರಂದು ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಲಿರುವ ನಗರ ಸಾರಿಗೆ ಸಮ್ಮೇಳನದಲ್ಲಿ ಮಹಾರಾಷ್ಟ್ರ ಇಂಧನ ಸಚಿವರು ಪ್ರದಾನ ಮಾಡಲಿದ್ದಾರೆ ಎಂದು ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.