ಚಳ್ಳಕೆರೆ
ಪುರಾಣ ಕಾಲಗಳಿಂದಲೂ ಮಳೆಬಾರದ ಸಂದರ್ಭದಲ್ಲಿ ಕತ್ತೆಗಳ ಮೆರವಣಿಗೆಯನ್ನು ನಡೆಸಿ ಮಳೆಗಾಗಿ ಪ್ರಾರ್ಥಿಸುವ ಪದ್ದತಿ ನಡೆದು ಬಂದಿದ್ದು, ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಬೂದಿಹಳ್ಳಿ ಗ್ರಾಮದ ಯುವಕರೂ ಸಹ ಗುರುವಾರ ಮಳೆಗಾಗಿ ಪ್ರಾರ್ಥಿಸಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಕತ್ತೆಗಳ ಮೆರವಣಿಗೆ ನಡೆಸಿದರು.
ತಫಸ್ ಫೌಂಡೇಷನ್ನ ರಾಜುಬೂದಿಹಳ್ಳಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಕತ್ತೆಗಳ ಮದುವೆ, ಮೆರವಣಿಗೆ ನೋಡಲು ಇಡೀ ಗ್ರಾಮದ ಜನರೇ ಸೇರಿದ್ದು, ಇದರಿಂದಾದರೂ ನಮಗೆ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದರು. ಕತ್ತೆಗಳ ಮೆರವಣಿಗೆ ಮುನ್ನ ಗ್ರಾಮದ ದೇವಸ್ಥಾನದಲ್ಲಿ ಪೂಜೆಯನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬೊಮ್ಮಣ್ಣ, ಗಿರೀಶ್, ಮಂಜುನಾಥ, ಮುತ್ತಣ್ಣ, ರಮೇಶ್ ಮುಂತಾದವರು ಪಾಲ್ಗೊಂಡಿದ್ದರು.