ಹೊರಗಡೆಯಿಂದ ಬಂದವರ ಮೇಲೆ ನಿಗಾ ಇಡಿ : ಶಾಸಕ

ತುಮಕೂರು

      ನಗರವು ಲಾಕ್ ಡೌನ್ ಅದ ಸಂದರ್ಭದಿಂದಲೂ ಯಾವುದೇ ವ್ಯಕ್ತಿ ಕೋರೋನಾ ಪಾಸಿಟಿವ್ ಇಲ್ಲದೇ ಚೆನ್ನಾಗಿದ್ದು, ಯಾವುದೇ ಅತಂಕ ಇರುವುದಿಲ್ಲ. ಆದರೆ ಮುಂದೆ ಬೇರೆ ಸ್ಥಳದಿಂದ ಬಂದ ವ್ಯಕ್ತಿಯಾಗಿದ್ದರೆ, ಅಂತಹ ವ್ಯಕ್ತಿಗಳ ಬಗ್ಗೆ ಸ್ಥಳೀಯ ಪೋಲಿಸರು, ಆರೋಗ್ಯ ಇಲಾಖೆ, ಜಿಲ್ಲಾಡಳಿತ ಅಥವಾ ನಮಗೆ ಮಾಹಿತಿ ನೀಡಿ, ಏಕೆಂದರೆ ಬೇರೆ ಸ್ಥಳದಿಂದ ಬಂದಂತಹ ವ್ಯಕ್ತಿಗಳ ಹೋಂ ಕಾರೈಂಟನ್ ನಲ್ಲಿಯೇ ಇರಲು ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ಅದ್ದರಿಂದ ಸಾರ್ವಜನಿಕರು ತಮ್ಮ ಅಕ್ಕ ಪಕ್ಕದ ಮನೆಗಳಿಗೆ ಅಪರಿಚಿತರು ಅಥವಾ ಬೇರೆ ಸ್ಥಳಗಳಿಂದ ಬಂದವರ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿದೆ.

      ಅಧಿಕಾರಿಗಳು ಸಹ ಇಷ್ಟು ದಿನಗಳ ಕಾಲ ಕೋರೋನ ನಿಯಂತ್ರಣ ಮಾಡಲು ಸಾಕಷ್ಟು ಶ್ರಮವಹಿಸಿದ್ದಾರೆ. ನಮ್ಮಲ್ಲಿರುವ ಒಂದೇ ಅತಂಕ ಬೇರೆಡೆಯಿಂದ ಬಂದವರ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರು ಸಹಕಾರ ನೀಡದಿದ್ದರೇ ನಮ್ಮ ಶ್ರಮ ವ್ಯರ್ಥವಾಗಿ ಕೋರಾನ ಭಾದಿತರನ್ನು ಇಲ್ಲಿಯೂ ಸಹ ಕಾಣುವ ಪರಿಸ್ಥಿತಿ ಬರುತ್ತದೆ ಎಂದು ಅಧಿಕಾರಿಗಳು ಶಾಸಕರ ಬಳಿ ಹೇಳಿಕೊಂಡಿದ್ದಾರೆ. ಅದ್ದರಿಂದ ಬೇರೆ ಸ್ಥಳಗಳಿಂದ ಬಂದವರ ಬಗ್ಗೆ ಮಾಹಿತಿ ನೀಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿದೆ. ಇದರ ಬಗ್ಗೆ ಎಚ್ಚರವಹಿಸಲು ನಗರದ ಬಡಾವಣೆಗಳ ನಾಗರೀಕರ ಸಮಿತಿಗಳು ಸಹಕಾರವು ಅತ್ಯಂತ ಅಗತ್ಯವಾಗಿದೆ. ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕೋರೋನಾ ಪಾಸಿಟಿವ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಅದ್ದರಿಂದ ಸಾರ್ವಜನಿಕರು ಎಚ್ಚರವಹಿಸಬೇಕಾಗಿದೆ. ಎಂದು ತುಮಕೂರು ನಗರ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap