ಹರಿಹರ ;
ನಗರದ ಗ್ರಾಮದೇವತೆ ಶ್ರೀ ಊರಮ್ಮನ ಜಾತ್ರೆಯು ಸಮೀಪಿಸುತ್ತಿದ್ದು, ದೇವಸ್ಥಾನದ ಪಕ್ಕದಲ್ಲಿಂದಲೇ ಜಾತ್ರೆಯ ಚರಕವು ಬಂದು ಸೇರುವುದರಿಂದ ದೇವಸ್ಥಾನದ ಸುತ್ತಮುತ್ತ ಶೀಘ್ರವಾಗಿ ಸ್ವಚ್ಛತೆಯನ್ನು ಕಾಪಾಡುವಂತೆ ಅಧಿಕಾರಿಗಳಿ ಶಾಸಕ ಎಸ್ ರಾಮಪ್ಪ ಸೂಚನೆ ನೀಡಿದರು.
ಅವರು ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು ಹಾಗೂ ದೇವಸ್ಥಾನದ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದ ಕಾಂಪೌಂಡ್ ಗೇಟನ್ನು ನಿರ್ಮಿಸಲು ಸಹ ಸೂಚನೆ ನೀಡಿದರು.
ನಂತರ ದೇವಸ್ಥಾನದ ಆವರಣದಲ್ಲಿರುವ ಬಿರ್ಲಾ ಕಲ್ಯಾಣ ಮಂಟಪಕ್ಕೂ ಸಹ ಭೇಟಿ ನೀಡಿದ ಶಾಸಕರು ಕಂಪನಿಯ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕರೆಯಿಸಿ ಕಲ್ಯಾಣ ಮಂಟಪದ ದುರಸ್ತಿ ಕಾರ್ಯವನ್ನು ಆದಷ್ಟು ಶೀಘ್ರವಾಗಿ ಕೈಗೆತ್ತಿಕೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ.ಎಸ್.ಲಕ್ಷ್ಮಿ ಹಾಗೂ ಸದಸ್ಯರಾದ ವಸಂತ್ ಕುಮಾರ್, ಶಿವಪ್ರಕಾಶ್ ಶಾಸ್ತ್ರಿ, ರಮೇಶ್ ನಾಯ್ಕ, ದಿನೇಶ್ ಕೊಣ್ಣೂರು,ರಂಗನಾಥ ,ಸುಬ್ರಹ್ಮಣ್ಯ ನಾಡಿಗೇರ್ ಹಾಗೂ ಕೋಟೆ ಭಾಗದ ಅನೇಕ ಗಣ್ಯರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ