ಮಕ್ಕಳನ್ನು ಮೊಬೈಲ್‍ನಿಂದ ದೂರವಿಡಿ : ಮಸಾಲೆ ಜಯರಾಮ್

ತುರುವೇಕೆರೆ

     ಪೋಷಕರು ತಮ್ಮ ಮಕ್ಕಳನ್ನು ಆದಷ್ಟು ಮೊಬೈಲ್‍ನಿಂದ ಮತ್ತು ಅದರಲ್ಲಿನ ಅಪಾಯಕಾರಿ ಗೇಮ್‍ಗಳಿಂದ ದೂರವಿರಿಸಿ ಎಂದು ಶಾಸಕ ಮಸಾಲಜಯರಾಮ್ ಕಿವಿ ಮಾತು ಹೇಳಿದರು.ಪಟ್ಟಣದ ವಿದ್ಯಾರಣ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸೋಮವಾರ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಮಕ್ಕಳ ಮೇಲೆ ಓದಲು ಹೆಚ್ಚು ಒತ್ತಡ ಹಾಕದೆ, ಅವರು ಮುಕ್ತವಾಗಿ ತಮಗೆ ಬೇಕಾದ ವಿಷಯಗಳನ್ನು ಓದುವಂತೆ ಅವಕಾಶ ಕಲ್ಪಿಸಬೇಕು. ತಾಲ್ಲೂಕಿನ ಎಲ್ಲಾ ಶಿಕ್ಷಣ ಸಂಸ್ಥೆಗಳು ಬಡ ಮಕ್ಕಳನ್ನು ಶೋಷಣೆ ಮಾಡದೆ ಉತ್ತಮ ರೀತಿಯಲ್ಲಿ ಶಿಕ್ಷಣ ಕೊಡುತ್ತಿವೆ. ತಾಲ್ಲೂಕು ಹೆಮ್ಮೆಯ ಪುತ್ರರನ್ನು ಪಡೆದಿರುವುದರಿಂದ ಬಹಳಷ್ಟು ಯುವಕರು ಕೆಎಎಸ್, ಐ.ಎ.ಎಸ್ ಸೇರಿದಂತೆ ಉನ್ನತಮಟ್ಟದ ಅಧಿಕಾರಿಗಳಾಗಿ ಹೊರಹೊಮ್ಮುತ್ತಿರುವುದು ಸಂತಸದ ವಿಷಯ.

    ಇದೇ ಸಂದರ್ಭದಲ್ಲಿ ವಿದ್ಯಾರಣ್ಯ ಶಿಕ್ಷಣ ಸಂಸ್ಥೆಗೆ ಎಂಜಿನಿಯರಿಂಗ್ ಮತ್ತು ನರ್ಸಿಂಗ್ ಕೋರ್ಸ್‍ಗಳನ್ನು ಮಂಜೂರು ಮಾಡುವಂತೆ ನೀಡಿದ ಮನವಿಗೆ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸುವುದಾಗಿ ಭರವಸೆ ನೀಡಿದರು. ಸಿಪಿಐ ಲೋಕೇಶ್ ಮಾತನಾಡಿ, ಬಾಲ್ಯಾವಸ್ಥೆಯಲ್ಲಿಯೆ ಮಕ್ಕಳಿಗೆ ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸುವ ಮೂಲಕ ಬಾಲಾಪರಾಧವನ್ನು ತಹಬದಿಗೆ ತರಬೇಕು. ಬದಲಾದ ಕಾಲಕ್ಕೆ ತಕ್ಕಂತ ಶಿಕ್ಷಣ ಅಳವಡಿಸಿಕೊಳ್ಳಬೇಕು.

    ಪರೀಕ್ಷೆ ಕೇವಲ ರ್ಯಾಂಕ್ ಮತ್ತು ಅಂಕಗಳಿಗೆ ಸೀಮಿತವಾಗದೆ ವಿದ್ಯಾರ್ಥಿಯ ಸಮಗ್ರ ಬದುಕಿನ ದಾರಿ ದೀವಿಗೆ ಯಾಗುವಂತೆ ಮಾಡಬೇಕಿದೆ. ಆ ಮೂಲಕ ಮಕ್ಕಳನ್ನು ಆತ್ಮಹತ್ಯೆಯಿಂದ ದೂರವಿಡಲು ಸಾಧ್ಯ. ಪ್ರಾಥಮಿಕ ಶಿಕ್ಷಣ ಒತ್ತಡ ರಹಿತ, ಆಟಪಾಠದ ಮೂಲಕ ಸಾಗಬೇಕು. ಆಂಗ್ಲಭಾಷಾ ವ್ಯಾಮೋಹದ ಕೀಳರಿಮೆ ಬಿಟ್ಟು ಜ್ಞಾನವಂತರಾಗಿ. ಮಗು ಮಾತೃಭಾಷೆಯಲ್ಲಿ ಓದಿದರೆ ಉನ್ನತ ಮಟ್ಟಕ್ಕೇರಬಲ್ಲದು. ಮೊಬೈಲ್ ಅನ್ನು ಓದಿಗೆ ಪೂರಕವಾಗಿ ಪೋಷಕರ ಕಣ್ಗಾವಲಿನಲ್ಲಿ ಬಳಸುವಂತೆ ಪೋಷಕರು ನೋಡಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಜರುಗಿದ ಸಾಂಸ್ಕøತಿಕ ನ್ಯತ್ಯ ಪೋಷಕರನ್ನು ರಂಜಿಸಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದಲ್ಲಿ ಎಪಿಎಂಸಿ ನಿರ್ದೇಶಕ ವಿ.ಟಿ.ವೆಂಕಟರಾಮ್, ಕಸಾಪ ತಾಲ್ಲೂಕು ಅಧ್ಯಕ್ಷ ನಂರಾಜು ಮುನಿಯೂರು, ವಿದ್ಯಾರಣ್ಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆರ್. ರಂಗಸ್ವಾಮಿ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದುಂಡಾರೇಣುಕಪ್ಪ, ಮುಖಂಡರುಗಳಾದ ಕೊಂಡಜ್ಜಿ ವಿಶ್ವನಾಥ್, ಕಡೇಹಳ್ಳಿಸಿದ್ದೇಗೌಡ, ವಿ.ಬಿ.ಸುರೇಶ್, ನಾಗಲಾಪುರ ಮಂಜಣ್ಣ, ಕಾಳಂಜಿಹಳ್ಳಿ ಸೋಮಣ್ಣ, ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ವಸಂತ್‍ಕುಮಾರ್, ಆಡಳಿತಾಧಿಕಾರಿ ಜಯಣ್ಣ, ಸಿಆರ್‍ಪಿ. ಕಮಲ್‍ರಾಜ್, ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link