ದಾವಣಗೆರೆ
ಜನರಿಂದ ಜನರಿಗೆ ಕೊರೊನಾ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಹೋಮ್ ಕ್ವಾರಂಟೈನ್‍ನಲ್ಲಿ ಇರುವವರಿಗಾಗಿ ಜಿಲ್ಲೆಯ ಲಾಡ್ಜ್‍ಗಳಲ್ಲಿನ ರೂಮ್ ಬಳಸಿಕೊಳ್ಳಲು ತಯಾರಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ಹಿನ್ನೆಲೆಯಲ್ಲಿ ನಗರದ ಲಾಡ್ಜ್ ಮಾಲೀಕರೊಂದಿಗೆ ಏರ್ಪಡಿಸಿದ್ದ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸಿ ಕಡಿತಗೊಳಿಸಿ:
ಜಿಲ್ಲೆಯಲ್ಲಿ 3 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗಿದರೆ, ಅಂತಹ ಸಂದರ್ಭದಲ್ಲಿ ನಗರದಲ್ಲಿನ ಲಾಡ್ಜ್‍ಗಳಲ್ಲಿನ ರೂಮ್ ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಬಹುದು. ಎಸಿ ರೂಮ್‍ಗಳಿದ್ದರೆ, ಎಸಿ ಕಡಿತಗೊಳಿಸಿ ಬಳಸಲಾಗುವುದು.ಈ ಹಿನ್ನೆಲೆಯಲ್ಲಿ ಮಾನಸಿಕವಾಗಿ ಸನ್ನದ್ಧರಾಗಬೇಕುಎಂದು ಲಾಡ್ಜ್ ಮಾಲೀಕರಿಗೆ ಸೂಚಿಸಿದರು.
ರೋಗಿಗಳಲ್ಲ, ನಿಗಾದಲ್ಲಿರುವರು:
ಹೋಮ್ ಕ್ವಾರಂಟೈನ್‍ನಲ್ಲಿರುವವರ ಬಗ್ಗೆ ಮಾಲೀಕರಿಗೆ ಯಾವುದೇ ಭಯ ಬೇಡ. ಹೋಮ್ ಕ್ವಾರಂಟೈನ್‍ಲ್ಲಿರುವವರು ರೋಗಿಗಳಲ್ಲ, ಬದಲಾಗಿ ನಿಗಾದಲ್ಲಿರುವವರಷ್ಟೇ ಇವರಲ್ಲಿ ಯಾರಿಗಾದರೂ ನೆಗಡಿ, ಕೆಮ್ಮು, ಶೀತ ಕಂಡು ಬಂದರೆ ಕೂಡಲೇ ಆಸ್ಪತ್ರೆಗೆ ಸೇರಿಸಲಾಗುವುದು. ಇವರನ್ನು ಕಾಳಜಿ ಮಾಡಲು ಕೊರೊನಾ ಸ್ವಯಂ ಸೇವಕರು ನಿಮ್ಮ ಜೊತೆಗೆ ಇರಲಿದ್ದಾರೆ ಎಂದು ಹೇಳಿದರು.
ಮೂಲ ಸೌಕರ್ಯ ಕಲ್ಪಿಸಿ:
ಲಾಡ್ಜ್‍ಗಳಲ್ಲಿ ಅಗತ್ಯವಾದ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡಲು ಮಾಲೀಕರು ಸಿದ್ಧರಿರಬೇಕು.ಉಚಿತವಾಗಿ ಬಳಸಿಕೊಳ್ಳದೇ, ಸರ್ಕಾರದಿಂದ ಹಣಒದಗಿಸಲಾಗುವುದು.ಊಟದ ವ್ಯವಸ್ಥೆ ಮಾಡಲು ಆಗದಿದ್ದರೆಅದನ್ನು ಸಹ ಜಿಲ್ಲಾಡಳಿತವೇ ನೋಡಿಕೊಳ್ಳಲಿದೆ ಎಂದರು.
ಕೈಲಾದಷ್ಟು ನೀಡಿ:
ಕೊರೊನಾ ವೈರಸ್ ತಡೆಯಲು ಸರ್ಕಾರದ ನೆರವಿಗೆ ಸಹಾಯಕ್ಕಾಗಿ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿ ಖಾತೆ ತೆರೆಯಲಾಗಿದೆ.ಜ್ಞಾನ, ಸಂಪತ್ತು, ಅನುಭವ ಎಲ್ಲವನ್ನು ಸಮಾಜದಿಂದ ಪಡೆದಿರುತ್ತೇವೆ. ಸಮಾಜದಿಂದ ಪಡೆದದನ್ನು ಸಮಾಜಕ್ಕೆ ನೀಡಬೇಕು. ಸಮಾಜವೂ ಗಂಡಾಂತರದಲ್ಲಿ ಸಿಲುಕಿದಾಗ ಸಮಾಜಕ್ಕೆ ಕೈ ಜೋಡಿಸಬೇಕು.ಅದಕ್ಕಾಗಿ ಏನಾದರೂ ನಿಮ್ಮ ಕೈಲಾದಷ್ಟು ಸಹಾಯ ಮಾಡಬೇಕು.ವಸ್ತು, ಸಾಮಾಗ್ರಿ ಅಥವಾ ಹಣದ ರೂಪದಲ್ಲಾದರೂ ಸಹಾಯ ಮಾಡಲು ಮುಂದಾಗಿ ಎಂದರು.
ಮಹಾನಗರ ಪಾಲಿಕೆ ಮೇಯರ್ ಅಜಯ್ ಕುಮಾರ್ ಮಾತನಾಡಿ, ಜನರ ನೋವು, ಕಷ್ಟದ ಅರಿವು ನಮಗಿದೆ.ಈ ಬಗ್ಗೆ ಜಿಲ್ಲಾಡಳಿತ ದೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ.ಈಗಲೇ ಲಾಡ್ಜ್ ರೂಮ್‍ಗಳ ಅವಶ್ಯಕತೆಯಿಲ್ಲ. ಬದಲಾಗಿ ಅಂತಹ ಸಂದರ್ಭ ಎದುರಾದರೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಪದ್ಮಾ ಬಸವಂತಪ್ಪ ಮಾತನಾಡಿ, ಕೊರೊನಾ ವೈರಸ್ ಪತ್ತೆ ಹಚ್ಚಲು 14 ದಿನಗಳು ಬೇಕು. ಕೊರೊನಾ ಸಂಚಿತಎಂದು ಹೇಳಿ ಹೋಮ್ ಕ್ವಾರೆಂಟೈನ್‍ನಲ್ಲಿ ಇರುವಂತೆ ಹೇಳಿರುವರು ಮನೆಯಿಂದ 14 ದಿನಗಳ ಕಾಲ ಹೊರಗಡೆ ಬರಬಾರದು.ಅಂತವರಿಗೆ ಮಾರ್ಗ ಸೂಚನೆಗಳನ್ನು ಈಗಾಗಲೇ ನೀಡಿದ್ದೇವೆ. ಕೊರೊನಾ ವೈರಸ್ ಬಂದಿರುವವರ ಸಂಪರ್ಕದಲ್ಲಿದ್ದಾಗ ಈ ಸೋಂಕು ಹರಡುವ ಸಾಧ್ಯತೆಇದ್ದು, ಜನರುಆತಂಕಕ್ಕೆ ಒಳಗಾಗದೇ ಮನೆಯಲ್ಲಿಇದ್ದು, ಚಿಕಿತ್ಸೆ ಪಡೆದುಕೊಳ್ಳಬೇಕು.ಈಗಾಗಲೇ ಸೋಂಕಿತ ಎಂದು ದೃಢಪಟ್ಟಿರುವ ವ್ಯಕ್ತಿಯ ಕುಟುಂಬದವರಿಗೂ ಹೋಮ್ ಕ್ವಾರೆಂಟೈನ್‍ನಲ್ಲಿ ಇರುವಂತೆ ಸೂಚನೆ ನೀಡಲಾಗಿದೆ ಎಂದರು.
ರೋಗಿಯನ್ನುವ ಮನೋಭಾವದಿಂದ ನೋಡದೆ, ಲಾಡ್ಜ್‍ನಲ್ಲಿ ಒಬ್ಬೊರನ್ನು ಒಂದೊಂದು ಪ್ರತ್ಯೇಕವಾದ ರೂಮ್‍ನಲ್ಲಿ ಇರುವಂತೆ ವ್ಯವಸ್ಥೆಯನ್ನು ಮಾಡಬೇಕಾಗಿದೆ. ನಿಮ್ಮ ಕೆಲಸಗಾರರು ಮಾಸ್ಕ್, ಗ್ಲೌಸ್ ಹಾಕಿಕೊಂಡು ಕೆಲಸ ಮಾಡಬೇಕು ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ಅಪೂರ್ವ ರೆಸ್ಟೋರೆಂಟ್ ಮಾಲೀಕ ಅಣಬೇರು ರಾಜಣ್ಣ, ಕಳೆದ ಒಂದು ತಿಂಗಳಿನಿಂದ ಹೋಟೆಲ್, ರೆಸ್ಟೋರೆಂಟ್ ಲಾಡ್ಜ್‍ಗಳನ್ನು ಮುಚ್ಚಲಾಗಿದೆ. ಅವುಗಳನ್ನು ಕಾಯುವವರು ಯಾರು ಇಲ್ಲ. ಹೀಗೆ ಅವರನ್ನು ಮನೆಯವರೆ ಸರಿಯಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಅಂದ ಮೇಲೆ ಇನ್ನೂ ಹೋಟೆಲ್‍ನಲ್ಲಿ ನಿಗಾವಹಿಸುವುದು ಕಷ್ಟ.ಅದಕ್ಕೆ ಜಿಲ್ಲಾಡಳಿತ ವ್ಯವಸ್ಥೆಕಲ್ಪಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಅಪರಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ನಗರಅಭಿವೃದ್ಧಿ ಯೋಜನಾ ನಿದೇಶಕಿ ನಜ್ಮಾ, ಹೋಟಲ್ ಉದ್ದಿಮೆದಾರರು, ನಗರದ ಲಾಡ್ಜ್ ಮಾಲೀಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ