ಅಭಿವೃದ್ಧಿಗೆ ಕೆಂಪೇಗೌಡರ ದೂರದೃಷ್ಠಿ ಚಿಂತನೆ ಆದರ್ಶ

ಚಿತ್ರದುರ್ಗ :

    ನಾಡಪ್ರಭು ಕೆಂಪೇಗೌಡ ಅವರ ದೂರದೃಷ್ಠಿಯ ಚಿಂತನೆಗಳು ನಾಡಿನ ಅಭಿವೃದ್ಧಿಗೆ ಆದರ್ಶವಾಗಿವೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಅವರು ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಗುರುವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ, ನಾಡಪ್ರಭು ಕೆಂಪೇಗೌಡರ ಜಂಯಂತಿ ಸಮಾರಂಭವನ್ನು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಾರ್ಪಣೆಗೈದು ಉದ್ಘಾಟಿಸಿ ಅವರು ಮಾತನಾಡಿದರು.

     ನಾಡು ಮೆಚ್ಚುವ ಬೆಂಗಳೂರನ್ನು ವ್ಯವಸ್ಥಿತವಾಗಿ ನಿರ್ಮಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಕೆಂಪೇಗೌಡರು ತಮ್ಮ ಆಡಳಿತಾವಧಿಯಲ್ಲಿ ನಾಡಿನ ರಕ್ಷಣೆಯ ಜೊತೆಗೆ ಕೃಷಿಗೆ ಹೆಚ್ಚಿನ ಒತ್ತು ನೀಡಿದ್ದರು. ಬೆಂಗಳೂರನ್ನು ಹಲವು ದೃಷ್ಟಿಕೋನದಲ್ಲಿ ಅಭಿವೃದ್ಧಿಯ ನಾಡಾಗುವಂತೆ ನಿರ್ಮಿಸಿದ ಅವರು, ಬೆಂಗಳೂರನ್ನು ವಾಣಿಜ್ಯ ನಗರವಾಗಿಸುವ ಕನಸು ಕಂಡಿದ್ದರು. ಅವರ ದೂರದೃಷ್ಟಿಯ ಚಿಂತನೆಗಳು, ನಾಡಿನ ಅಭಿವೃದ್ಧಿಗೆ ಮಾದರಿಯಾಗಿವೆ ಎಂದು ಜಿ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ನಟರಾಜನ್ ಅವರು ಹೇಳಿದರು.

     ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಅವರು ಮಾತನಾಡಿ, ಇಡೀ ವಿಶ್ವವೇ ಮೆಚ್ಚುವ ಬೆಂಗಳೂರಿನ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ. ಇಂತಹ ಬೆಂಗಳೂರನ್ನು ನಿರ್ಮಿಸಲು ಅವರು ಕಂಡಿದ್ದ ಅಭಿವೃದ್ಧಿಯ ಚಿಂತನೆಗಳು, ಯೋಜನೆಗಳು, ಕೃಷಿ ಹಾಗೂ ಜಲ ರಕ್ಷಣೆಗೆ ಕೈಗೊಂಡಿದ್ದ ಕಾಳಜಿಯನ್ನು ನಾವು ಅರಿತುಕೊಳ್ಳಬೇಕು. ಯೋಜನಾ ಬದ್ಧವಾಗಿ ನಗರಗಳ ನಿರ್ಮಾಣಕ್ಕೆ ಬೆಂಗಳೂರು ನಗರ ಮಾದರಿಯಾಗಿದ್ದು, ಈ ದಿಸೆಯಲ್ಲಿ ಇಂದಿನ ಅಧಿಕಾರಿಗಳು, ಜನಪ್ರತಿನಿಧಿಗಳು ಕೆಂಪೇಗೌಡರನ್ನು ಆದರ್ಶವಾಗಿಸಿಕೊಳ್ಳಬೇಕಿದೆ ಎಂದರು.

       ಸಾಹಿತಿಗಳು ಹಾಗೂ ನಿವೃತ್ತ ಪ್ರಾಂಶುಪಾಲ ಡಾ:ಸಿ.ಶಿವಲಿಂಗಪ್ಪ ಅವರು ಕೆಂಪೇಗೌಡರ ಕುರಿತು ವಿಶೇಷ ಉಪನ್ಯಾಸ ನೀಡಿ, ಕೆಂಪನಂಜೇಗೌಡ ಹಾಗೂ ಲಿಂಗಮಾಂಬೆ ದಂಪತಿಗಳಿಗೆ ಕೆಂಪೇಗೌಡ ಜನಿಸಿದರು. ವಿಜಯನಗರ ಸಾಮಾಜ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತಂದೆಯೊಂದಿಗೆ ಭಾಗವಹಿಸಿ, ಹಂಪಿಯ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡರು ಇದನ್ನೇ ಪ್ರೇರಣೆಯಾಗಿಸಿಕೊಂಡರು. ಬಳಿಕ, ದೂರದೃಷ್ಠಿಯನ್ನು ಇಟ್ಟುಕೊಂಡು ಬೆಂಗಳೂರನ್ನು ನಿರ್ಮಾಣ ಮಾಡಿದರಲ್ಲದೇ ವೃತ್ತಿಯಾಧಾರಿತ ಪೇಟೆಗಳನ್ನು ನಿರ್ಮಿಸಿದ್ದರು.

     ಕೋಟೆ ನಿರ್ಮಿಸಿ ಪೂರ್ವಕ್ಕೆ ಹಲಸೂರು ಬಾಗಿಲು, ಪಶ್ಚಿಮಕ್ಕೆ ಅರಳೇ ಪೇಟೆ, ಉತ್ತರಕ್ಕೆ ಯಲಹಂಕ ಮತ್ತು ದಕ್ಷಿಣಕ್ಕೆ ಆನೆಕಲ್ ಮಹಾದ್ವಾರಗಳನ್ನು ನಿರ್ಮಾಣ ಮಾಡಿದ್ದರು. ಹಲವಾರು ಕೆರೆಗಳ ನಿರ್ಮಾಣ, ದೇವಾಲಯಗಳ ನಿರ್ಮಾಣ ಮಾಡಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕೆರೆಗಳು ಇಂದು ಬಸ್‍ನಿಲ್ದಾಣ (ಮೆಜೆಸ್ಟಿಕ್), ಕ್ರೀಡಾಂಗಣ ಇತ್ಯಾದಿ ಸಾರ್ವಜನಿಕ ಸ್ಥಳಗಳಾಗಿವೆ. ನಗರ ಹಾಗೂ ಕೃಷಿಗೆ ಪ್ರತ್ಯೇಕವಾಗಿ ನೀರಿನ ವ್ಯವಸ್ಥೆಯನ್ನು ಸ್ಥಳೀಯ ಮೂಲದಿಂದಲೇ ಪಡೆಯುವಂತೆ ಮಾಡಿದ್ದು, ಅವರ ಬದ್ಧತೆಯನ್ನು ತೋರಿಸುತ್ತದೆ. ರಸ್ತೆಗಳು ಅಭಿವೃದ್ಧಿಯ ಸಂಕೇತವಾಗಿದ್ದು, ರಸ್ತೆಗಳ ನಿರ್ಮಾಣ ಮತ್ತು ಅವುಗಳ ಅಭಿವೃದ್ಧಿ ಮಾಡುವಂತಹ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ.

       ಕೆಂಪೇಗೌಡರು ಕೊನೆಯವರೆಗೂ ವಿಜಯನಗರ ಸಾಮ್ರಾಜ್ಯಕ್ಕೆ ನಿಷ್ಠೆಯನ್ನು ಹೊಂದಿದ್ದರು. ರಕ್ಷಣೆ ಮತ್ತು ಆಡಳಿತ ಸುವ್ಯವಸ್ಥೆಗೆ ಒತ್ತು ನೀಡಿದ್ದ ಅವರ ಸ್ವಾಭಿಮಾನ, ಬದ್ಧತೆ, ಹಿತಾಸಕ್ತಿ, ದೂರದೃಷ್ಟಿಯ ಚಿಂತನೆಗಳು ಇಂದಿನ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ. ಇಂದಿನ ದಿನಮಾನಗಳಲ್ಲಿ ಬೆಂಗಳೂರು ಒಂದು ಬೃಹತ್ ಉದ್ಯಮಗಳ ಮತ್ತು ಉದ್ಯಾನಗಳ ನಗರವಾಗಿದ್ದು, ಇದಕ್ಕೆ ಕೆಂಪೇಗೌಡರು ಮುಖ್ಯ ಕಾರಣಿಕರ್ತರಾಗಿದ್ದಾರೆ.

       ಅತಿ ಹೆಚ್ಚು ನೀರಿನ ಮೂಲ ಹೊಂದಿದ್ದ ಬೆಂಗಳೂರಲ್ಲಿ, ಪ್ರಸ್ತುತ ಅಭಿವೃದ್ಧಿಯ ನೆಪದಲ್ಲಿ ಬಹುತೇಕ ಕೆರೆಗಳನ್ನು ಮುಚ್ಚಿಹಾಕಿ, ನೂರಾರು ಕಿ.ಮೀ. ದೂರದಿಂದ ನೀರು ತರುವಂತಹ ಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸಂಗಪ್ಪ, ತಹಸಿಲ್ದಾರ್ ಕಾಂತರಾಜ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ನಿಜಲಿಂಗಪ್ಪ, ರಾ.ಹೆ. ವಿಶೇಷ ಭೂಸ್ವಾಧೀನ ವಿಶೇಷಾಧಿಕಾರಿ ಆರ್. ಚಂದ್ರಯ್ಯ, ನಗರಸಭೆ ಪೌರಾಯುಕ್ತ ಚಂದ್ರಪ್ಪ, ಭೂಸ್ವಾಧೀನ ವಿಶೇಷಾಧಿಕಾರಿ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ, ಗಣ್ಯರಾದ ಹನುಮಂತಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link