ಕೇಂದ್ರೀಯ ವಿಶ್ವವಿದ್ಯಾಲಯ ಕಾರ್ಯಾರಂಭಕ್ಕೆ ಕ್ರಮ

ಚಿತ್ರದುರ್ಗ

    ಚಿತ್ರದುರ್ಗ ಜಿಲ್ಲೆಗೆ ಮಂಜೂರಾಗಿರುವ ಕೇಂದ್ರೀಯ ವಿದ್ಯಾಲಯವನ್ನು ತ್ವರಿತವಾಗಿ ಪ್ರಾರಂಭ ಮಾಡಲು ಕ್ರಮ ಕೈಗ್ಗೊಳ್ಳಲಾಗುವುದು ಎಂದು ನೂತನ ಸಂಸದರಾದ ಎ.ನಾರಾಯಣಸ್ವಾಮಿ ತಿಳಿಸಿದರು.

      ನಗರದ ಬಿಜೆಪಿ ಕಛೇರಿಯಲ್ಲಿಂದು ತಮ್ಮ ಪ್ರಥಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇಂದ್ರದಿಂದ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗೆ ಒಟ್ಟಿಗೆ ಕೇಂದ್ರೀಯ ವಿದ್ಯಾಲಯ ಪ್ರಾರಂಭಿಸಲು ಅನುಮತಿ ಸಿಕ್ಕಿತ್ತು ತುಮಕೂರಿನಲ್ಲಿ ಈಗಾಗಲೇ ವಿದ್ಯಾಲಯ ಪ್ರಾರಂಭವಾಗಿದೆ ಆದರೆ ಚಿತ್ರದುರ್ಗದಲ್ಲಿ ಇನ್ನೂ ಜಾಗದ ಸರ್ವೇಯಲ್ಲಿಯೇ ಇದೆ ಇದರ ಬಗ್ಗೆ ಸಂಬಂಧಪಟ್ಟವರ ಜೊತೆ ಮಾತನಾಡಿ ಮುಂದಿನ ಶೈಕ್ಷಣಿಕೆ ವರ್ಷದಿಂದಲ್ಲಾದರು ತಾತ್ಕಾಲಿಕ ಕಟ್ಟಡದಲ್ಲಿ ಪ್ರಾರಂಭ ಮಾಡುವ ಬಗ್ಗೆ ಸಂಸದರು ಭರವಸೆ ನೀಡಿದ್ದಾರೆ.

       ಜಿಲ್ಲೆಯ 5ಜನ ಶಾಸಕರು ಯುವ ಹಾಗೂ ಪ್ರಜ್ಞಾವಂತ ಸಮಾಜ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಇದರಿಂದ 2019 ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲ್ಲಲು ಸಾಧಿಸಲು ಕಾರಣವಾಗಿದೆ, ಜನತೆಗೆ ಸಚಿವನಾಗಿ ನಾನು ಜಿಲ್ಲೆಗೆ ಪರಿಚಿತನಾಗಿದ್ದೆ ಇಲ್ಲಿಂದ ನನ್ನನ್ನು ಗೆಲ್ಲಿಸಿ ದೆಹಲಿಗೆ ಕಳಿಸಿದ್ದಾರೆ. ಎಲ್ಲರಿಗೂ ನನ್ನ ಧನ್ಯವಾದಗಳು ಎಂದ ಸಂಸದರು, ಇದೇ ರೀತಿ ದೇಶದಲ್ಲಿ ಮೋದಿಯವರ ಆಡಳಿತವನ್ನು ಮೆಚ್ಚಿ ಮತದಾರರು 350 ಸ್ಥಾನಗಳನ್ನು ಗೆಲ್ಲಿಸಿದ್ದಾರೆ ಎಂದರು.

      ಲೋಕಸಭಾ ಸದಸ್ಯನಾದ ಮೇಲೆ ಪ್ರಧಾನ ಮಂತ್ರಿಯವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗಿ ನಿನ್ನೆ ಮರಳಿ ಕ್ಷೇತ್ರಕ್ಕೆ ಬಂದು ಜಿಲ್ಲೆಯ ಆದರ್ಶ ಪುರಷರ ಮಠಾಧೀಶರು ಇದ್ದಾರೆ ಅವರಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದು ಜಿಲ್ಲೆಯ ಅಭಿವೃದ್ದಿಗೆ ಸಲಹೆ ನೀಡುವಂತೆ ಕೇಳಿಕೊಂಡಿದ್ದೆನೆ ಎಂದು ನಾರಾಯಣಸ್ವಾಮಿ, ಇಂದಿನ ದಿನಮಾನದಲ್ಲಿ ವೈಯಕ್ತಿಕ ಟೀಕೆಗಳಿಗೆ ಒತ್ತು ನೀಡುತ್ತಿದ್ದಾರೆ ಇದರಿಂದ ಅಭಿವೃದ್ಧಿ ಕುಂಟಿತಗೊಳ್ಳುತ್ತದೆ. ಇದರಿಂದ ಹೊರ ಬಂದು ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಿ ಸಹಕರಿಸುವಂತೆ ಮನವಿ ಮಾಡಿದರು.

       ಸರ್ಕಾರದ ಮೊಬೈಲ್ ಸಂಸ್ಥೆಯಾದ ಬಿಎಸ್‍ಎನ್‍ಎಲ್ ಜಿಲ್ಲೆಯಲ್ಲಿ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ, ಇದರಿಂದ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚಾಗಿದೆ ಇವರಿಂದ ತರಾಂಗತರಗಳನ್ನು ಪಡೆದೆ ಖಾಸಗಿಯವರು ಗ್ರಾಹಕರಿಗೆ ಉತ್ತಮವಾದ ಸೇವೆಯನ್ನು ನೀಡಲಾಗುತ್ತಿದೆ ಆದರೆ ಬಿಎಸ್‍ಎನ್‍ಎಲ್ ಮಾತ್ರ ಸೇವೆ ನೀಡುವಲ್ಲಿ ನಿರ್ಲಕ್ಷ ಮಾಡುತ್ತಿದೆ ಎಂದು ಪತ್ರಕರ್ತರು ಸಂಸದರ ಗಮನಕ್ಕೆ ತಂದಾಗ ಇದರ ಬಗ್ಗೆ ನನಗೂ ಸಹಾ ಅನುಭವ ಆಗಿದೆ ಆದ್ದರಿಂದ ಸರ್ಕಾರ ಮತ್ತು ಸಂಸ್ಥೆಯ ಮಟ್ಟದಲ್ಲಿ ಚಿತ್ರದುರ್ಗ ಕ್ಷೇತ್ರದ ಸಂಸದನಾಗಿ ಏನು ಮಾಡಬೇಕು ಆದನ್ನು ಮಾಡಲಾಗುವುದು ಎಂದು ತಿಳಿಸಿದರು.

ಸಚಿವ ಸ್ಥಾನಾಂಕ್ಷಿ ಅಲ್ಲ ;

       ರಾಜ್ಯದ 28ಕ್ಷೇತ್ರಗಳಲ್ಲಿ ಏಳು ಮೀಸಲು ಕ್ಷೇತ್ರಗಳು. ಈ ಎಲ್ಲಾ ಸೀಟುಗಳನ್ನು ಬಿಜೆಪಿ ಗೆದ್ದದ್ದು ವಿಶೇಷ. ಆದರೆ, ಮೀಸಲು ಕ್ಷೇತ್ರದಿಂದ ಗೆದ್ದ ಯಾರಿಗೂ ನರೇಂದ್ರ ಮೋದಿ ಸರಕಾರದಲ್ಲಿ ಅವಕಾಶ ಸಿಗಲಿಲ್ಲ ಎನ್ನುವ ಕೂಗು ಅಲ್ಲಲ್ಲಿ ಆರಂಭವಾಗಿದೆ ಇದರ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಪಕ್ಷ ಮತ್ತು ಮುಖಂಡರು ಸರಿಯಾದ ಸಮಯಕ್ಕೆ ಸರಿಯಾದ ತೀರ್ಮಾನವನ್ನು ಮಾಡುತ್ತಾರೆ, ಆದ್ದರಿಂದ ಅದರ ಬಗ್ಗೆ ಮಾತನಾಡುವುದಿಲ್ಲ ಅಲ್ಲದೆ ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದ ಪರವಾಗಿ ಕೆಲಸವನ್ನು ಮಾಡುವುದಾಗಿ ಸಂಸದ ನಾರಾಯಣಸ್ವಾಮಿ ಹೇಳಿದರು.

       ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ಮಾತನಾಡಿ, ಈ ಬಾರಿ ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆಯ ಸಂಸದರು ಬಿಜೆಪಿಯವರಾಗಿದ್ದಾರೆ, ಇದರಿಂದ ಈ ಭಾಗದ ಬಹು ದಿನದ ಬೇಡಿಕೆಯಾದ ದಾವಣಗೆರೆಯಿಂದ ತುಮಕೂರು ನೇರ ರೈಲು ಮಾರ್ಗದ ಕಾಮಗಾರಿಯನ್ನು ಪ್ರಾರಂಭ ಮಾಡುವ ಬಗ್ಗೆ ಆಲೋಚನೆ ಮಾಡಬೇಕಿದೆ ಇದರಿಂದ ಈ ಮೂರು ಜಿಲ್ಲೆಯ ಜನತೆಗೆ ಅನುಕೂಲವಾಗಲಿದೆ ಎಂದು ಸಂಸದರ ಗಮನಕ್ಕೆ ತಂದರು.

      ರೈಲ್ವೆ ಮಾರ್ಗಕ್ಕೆ ಭೂಮಿಗೆ ಹಣವನ್ನು ಇದುವರೆಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿಲ್ಲ ಹಣವನ್ನು ಬಿಡುಗಡೆ ಮಾಡುವಂತರ ಒತ್ತಾಯಿಸಲಾಗುವುದು ಮತ್ತು ಚಿತ್ರದುರ್ಗದಲ್ಲಿ ತ್ವರಿತವಾಗಿ ಕೇಂದ್ರೀಯ ವಿದ್ಯಾಲಯ ಪ್ರಾರಂಭಕ್ಕೆ ಪ್ರಯತ್ನ ಮಾಡುವುದಾಗಿ ತಿಳಿಸಿಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವುಂತಹ ಕಾರ್ಯಕ್ರಮವನ್ನು ಜೂ 10 ರ ನಂತರ ಹಮ್ಮಿಕೊಳ್ಳಲಾಗುವುದು ಎಂದರು.

     ಹೊಳಲ್ಕೆರೆ ಹಾಗೂ ಮೊಳಕಾಲ್ಮೂರು ಪಟ್ಟಣ ಪಂಚಾಯತಿಯಲ್ಲಿ ಅಧಿಕಾರ ಹಿಡಿಯಲಿದ್ದೆವೆ. ಹಿರಿಯೂರು ಪುರಸಭೆಯಲ್ಲಿ ಮಾತ್ರ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಬಹುತೇಕ ವಾರ್ಡ್‍ಗಳಲ್ಲಿ ಸ್ಪರ್ಧೆ ಮಾಡಿದ್ದರಿಂದ ಅಲ್ಲಿ ನಾವು ಅಧಿಕಾರ ಹಿಡಿಯುವಲ್ಲಿ ವಿಫಲರಾದೆವು ಎಂದು ತಿಳಿಸಿದರು.

       ಗೋಷ್ಟಿಯಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಚಂದ್ರಪ್ಪ, ಸಿದ್ದೇಶ್ ಯಾದವ್, ರತ್ನಮ್ಮ, ಜಿ.ಎಂ.ಸುರೇಶ್, ಮಲ್ಲಿಕಾರ್ಜನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ ನಾಗರಾಜ್ ಬೇದ್ರೇ, ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link