ಹೊಸದುರ್ಗ:
ಕೆರೆ ಕಟ್ಟೆಗಳು ಗ್ರಾಮೀಣ ಪ್ರದೇಶದ ಅವಿಭಾಜ್ಯ ಅಂಗ ಕೆರೆ ಕಟ್ಟೆಗಳ ಹೂಳೆತ್ತಿ ಸಂರಕ್ಷಿಸಿ ಪ್ರಾಣಿ ಪಕ್ಷಿಗಳ ಅನುಕೂಲ ಆಗುವ ಕೆಲಸವನ್ನುಗ್ರಾಮಸ್ಥರುಆಸಕ್ತಿಯಿಂದ ನಿರ್ವಹಿಸಬೇಕು ಸರ್ಕಾರ ನೀಡಿದಅನುದಾನವನ್ನುಸದ್ಬಳಕೆ ಮಾಡುವ ಸಮರ್ಪಕರೀತಿಯಲ್ಲಿ ಬಳಸಬೇಕೆಂದು ಕುಂಚಿಟಿಗ ಮಠದಡಾ. ಶಾಂತವೀರ ಸ್ವಾಮೀಜಿಆಶ್ರ್ರಿವಚನ ನೀಡಿದರು.
ತಾಲ್ಲೂಕಿನ ಬೋಕಿಕೆರೆಗ್ರಾಮದಲ್ಲಿನಡೆದಕರ್ನಾಟಕ ಸರ್ಕಾರಕೆರೆ ಸಂರಕ್ಷಣೆ ಮತ್ತುಅಭಿವೃದ್ದಿ ಪ್ರಾಧಿಕಾರ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿಯೋಜನೆ ಮತ್ತುಕಸ್ತೂರಿಕೆರೆಯನ್ನುಕೆರೆ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಇತ್ತೀಚೆಗೆ ಗ್ರಾಮಸ್ಥರು ಒಟ್ಟಾಗಿ ಸಹಭಾಗಿತ್ವವನ್ನು ತೋರಿಸುವ ಮೂಲಕ ತಮ್ಮ ತಮ್ಮ ಗ್ರಾಮಗಳಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ತಾವೇ ಮೇಲ್ವಿಚಾರಣೆ ಮಾಡಿ ಉತ್ತಮ ಕಾಮಗಾರಿ ನಡೆಯಲು ಕಾಳಜಿ ವಹಿಸಬೇಕಾಗಿದೆ.ಯಾವುದೇ ಯೋಜನೆ ಸದ್ಬಳಕೆಯಾಗಲು ನಮ್ಮಗಳ ಸಹಭಾಗಿತ್ವ ಸಹಕಾರ ಅಗತ್ಯ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಶಾಸಕ ಇಲ್ಕಲ್ ವಿಜಯ್‍ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಸರೋಜಮ್ಮ, ಧರ್ಮಸ್ಥಳ ಗ್ರಾಮೀಣಾಭಿವೃದ್ದಿಯ ಯೋಜನಾಧಿಕಾರಿ ಎಚ್.ವಿಶ್ವನಾಥ್, ಪಿಡಿಓ ಮೋಹನ್‍ಕುಮಾರ್, ಕೆರೆಕಮಿಟಿಅಧ್ಯಕ್ಷ ಲಕ್ಕಪ್ಪ, ಮುಖಂಡ ಮಹೇಶ್ವರಪ್ಪ, ಮಂಜುನಾಥ್, ಕೃಷಿ ಅಧಿಕಾರಿ ಮೋಹನ್‍ಜಿ.ಎಚ್, ಶ್ರೀಮತಿ ಆಶಾ ಮೇಲ್ವಿಚಾರಕರು, ಸ್ಥಳೀಯ ಸೇವಾ ಪ್ರತಿನಿಧಿ, ಪ್ರಗತಿ ಬಂಧು, ಸ್ವಸಹಾಯ ಸಂಘಗಳು, ಸರ್ವ ಸದಸ್ಯರು ಮತ್ತುಗ್ರಾಮಸ್ಥರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
