ಕೆರೆಗೆ ನೀರು ತುಂಬಿಸಿ ಅಭಿಯಾನ ..!!

ಪಾವಗಡ;-

       ಪಾವಗಡ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಿ ಅಭಿಯಾನ ಇಂದು ತಾಲ್ಲೂಕಿನ ಓಬಳಾಪುರ, ಸಾಸಲಕುಂಟೆ ವದನಕಲ್, ಲಿಂಗದಹಳ್ಳಿ ಗ್ರಾಮಗಳಿಗೆ ತೆರಳಿ ಅಭಿಯಾನಕ್ಕೆ ಬೆಂಬಲ ನೀಡಿ ಎಂದು ಘೋಷವಾಕ್ಯದೊಂದಿಗೆ ಮಂಗಳಲವಾರ ಬೈಕ್ ರ್ಯಾಲಿಯನ್ನು ನಡೆಸಿತು.

       ಲಿಂಗದಹಳ್ಳಿ ಗ್ರಾಮದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸರ್ವಧರ್ಮ ಆಶ್ರಮದ ಓಂಶಾಂತಿ ಪೀಠಾಧ್ಯಕ್ಷ ರಾಮಮೂರ್ತಿಸ್ವಾಮೀಜಿ ಮಾತನಾಡಿ,ಸಕಲ ಜೀವರಾಶಿಗಳಿಗೆ ನೀರೆ ಆಧಾರ ಆದರೇ ಪಾವಗಡ ತಾಲ್ಲೂಕಿಗೆ ನೀರು ಹರಿಸಲು ಎಲ್ಲಾ ಜನಪ್ರತಿನಿಧಿಗಳು ನಿರ್ಲಕ್ಷ ವಹಿಸಿದ್ದು, ಪಕ್ಷಾತೀತವಾಗಿ ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ಭದ್ರಾಮೇಲ್ದಂಡೆ ಯೋಜನೆಯನ್ನು ಅನುಷ್ಠಾನಗೊಳಿಸಲು ಈ ಅಭಿಯಾನಕ್ಕೆ ಜಯಸಿಗಲಿ ಎಂದು ಶುಭಹಾರೈಸಿದರು.

        ಅಭಿಯಾನದ ಮುಖಂಡ ಜೋಡಿಅಚ್ಚಮ್ಮನಹಳ್ಳಿ ಬಿ.ಲಿಂಗಪ್ಪ ಮಾತನಾಡಿ, ಕಳೆದ 20 ವರ್ಷಗಳಿಂದ ತಾಲ್ಲೂಕಿಗೆ ಮಳೆ ಇಲ್ಲದೆ ಕೆರೆಗಳು ಭತ್ತಿಹೋಗಿವೆ ಇದರಿಂದ ರೈತರು ಗುಳೆ ಹೋಗುತ್ತಿದ್ದಾರೆ, ಪಕ್ಕದ ಆಂದ್ರದ ಮಡಕಶಿರಾ, ಪೆನುಕೊಂಡ, ಕಲ್ಯಾಣದುರ್ಗ ತಾಲ್ಲೂಕಿನ ಕೆರೆಗಳಿಗೆ ಆಂದ್ರ ಸರ್ಕಾರ ನೀರು ತುಂಬಿಸಿದೆ ಪಕ್ಕದಲ್ಲಿರುವ ಪಾವಗಡ ತಾಲ್ಲೂಕು ಏನೂ ಪಾಪ ಮಾಡಿದೆ ಪಾವಗಡಕ್ಕೆ ನೀರು ಕೊಡಲು ಸಾದ್ಯವಾಗಲಿಲ್ಲ ಎಂದರೆ ಆಂದ್ರಕ್ಕೆ ಸೇರಿಸಿ ಎಂದು ಒತ್ತಾಯಿಸಿದ ಅವರು ನೀರಿನ ಮಹತ್ವ ತಿಳಿಸಲು ಕಳೆದ ಭಾನುವಾರದಂದು ಜೋಡಿ ಅಚ್ಚಮ್ಮನಹಳ್ಳಿಯಿಂದ ಈ ಅಭಿಯಾನವನ್ನು ಪ್ರಾರಂಭಮಾಡಲಾಗಿದೆ ತಾಲ್ಲೂಕಿನ ರೈತರು ಈ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದರು.

         ರಾಷ್ಠ್ರೀಯ ರಾಜ್ಯ ಕಿಸಾನ್ ಸಂಘದ ರಾಜ್ಯಾದ್ಯಕ್ಷ ವಿ.ನಾಗಭೂಷಣರೆಡ್ಡಿ ಮಾತನಾಡಿ, ಜೋಡಿಅಚ್ಚಮ್ಮನಹಳ್ಳಿ ಗ್ರಾಮದಿಂದ ಕೆರೆಗಳಿಗೆ ನೀರು ತುಂಬಿಸಿ ಎಂಬ ಅಭಿಯಾನಕ್ಕೆ ಚಾಲನೇ ನೀಡಿ ತಾಲ್ಲೂಕಿನ ರೈತರಿಗೆ ನೀರಿನ ಮಹತ್ವ ತಿಳಿಸಲು ಬೈಕ್ ರ್ಯಾಲಿ ಹಮ್ಮಿಕೊಂಡಿದ್ದು , ಜೋಡಿ ಅಚ್ಚಮ್ಮನಹಳ್ಳಿ ಗ್ರಾಮ ಗಾಂಧಿ ಗ್ರಾಮವಾಗಿದೆ ಎಂದು ಶ್ಲಾಘಿಸಿದರು.

          ಅಭಿಯಾನದ ಮುಖಂಡ ಬೆಂಗಳೂರಿನ ಹೈಕೋರ್ಟನ ವಕೀಲ ಎ.ರವಿ ಮಾತನಾಡಿ, ತಾಲ್ಲೂಕಿನ ಬರಪಿಸ್ಥಿತಿಯನ್ನು ಕಂಡು ಪಾವಗಡ ತಾಲ್ಲೂಕಿನ ಕೆರೆಗಳನ್ನು ನೀರು ತುಂಬಿಸಲು ಬೃಹತ್ ಮಟ್ಟದ ಹೋರಾಟ ಅನಿವಾರ್ಯವಾಗಿದ್ದು ಅಭಿಯಾನದ ಮೂಲಕ ತಾಲ್ಲೂಕಿನಾಧ್ಯಂತ ಬೈಕ್ ರ್ಯಾಲಿ ನಡೆಸಿ, ಇದೇ ತಿಂಗಳ 19 ನೇ ತಾರೀಖು ಪಾವಗಡದಲ್ಲಿ ಬೃಹತ್ ಅಭೆಯನ್ನು ಕರೆದಿದ್ದು ಅಂದು ಹೋರಾಟ ಸಮಿತಿಯನ್ನು ರಚಿಸಲಾಗುವುದು ಎಂದು ತಿಳಿಸಿದರು.

         ತಾ. ರಾಷ್ಠ್ರೀಯ ಕಿಸಾನ್ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಈರಲಿಂಗ, ಲಿಂಗದಹಳ್ಳಿ ಗ್ರಾಮದ ರೈತರಾದ ಜಯರಾಮರೆಡ್ಡಿ, ಮಹಾಲಿಂಗಪ್ಪ ,ಕೇಶವರೆಡ್ಡಿ,ಜೀತೇಂದ್ರರೆಡ್ಡಿ,ಸಣ್ಣಾರೆಡ್ಡಿ, ಬಲರಾಂ ಮತ್ತಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link