ಆಟೋದಲ್ಲಿ ಕೆ ಜಿ ಹಳ್ಳಿ ಸ್ಟೀಫನ್ ಕೊಲೆ..!!

ಬೆಂಗಳೂರು

   ಆಟೋದಲ್ಲಿಯೇ ಹಳೇ ಆರೋಪಿಯೊಬ್ಬನನ್ನು ಇಬ್ಬರು ಪರಿಚಯಸ್ಥ ದುಷ್ಕರ್ಮಿಗಳೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಕಾಡುಗೊಂಡನ(ಕೆಜಿ)ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

    ಕೆಜಿಹಳ್ಳಿಯ ಇದಾಯಿತ್ ನಗರದ ಸ್ಟೀಫನ್ ಅಲಿಯಾಸ್ ಸ್ಟೀಫನ್ ರಾಜಾ(29) ಕೊಲೆಯಾದವರು,ತಲೆ, ಕುತ್ತಿಗೆ, ಇನ್ನಿತರ ಭಾಗಗಳಿಗೆ ಮಾರಕಾಸ್ತ್ರಗಳಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿ ಆಟೋದಲ್ಲಿಯೇ ಮೃತದೇಹವನ್ನು ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

     ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸ್ಟೀಫನ್, ವರ್ಷದ ಹಿಂದೆ ತಮಿಳುನಾಡಿಗೆ ಹೋಗಿ ನೆಲೆಸಿದ್ದ ನಂತರ ವಾಪಸ್ಸಾಗಿ ಆಟೋ ಚಲಾಯಿಸಿಕೊಂಡು ಜೀವನ ನಡೆಸುತ್ತಿದ್ದ. ನಿನ್ನೆರಾತ್ರಿ ಸ್ಟೀಫನ್‍ನನ್ನು ಕರೆದುಕೊಂಡು ಹೋಗಿರುವ ಇಬ್ಬರು ಸ್ನೇಹಿತರು, ಜತೆಯಲ್ಲಿ ಮದ್ಯಪಾನ ಮಾಡಿ ಜಗಳ ಮಾಡಿಕೊಂಡಿದ್ದಾರೆ.

     ಜಗಳ ವಿಕೋಪಕ್ಕೆ ತಿರುಗಿದಾಗ ಸ್ಟೀಫನ್‍ನ್ನು ಕೊಲೆ ಮಾಡಿ ಆಟೋದಲ್ಲಿಯೇ ಮೃತದೇಹವನ್ನು ಬಿಟ್ಟು ಹೋಗಿದ್ದು, ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿರುವ ಕೆಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link