ನೆರೆ ಪರಿಹಾರದ ಕಡೆ ಗಮನ ಹರಿಸಿ : ಖರ್ಗೆ

ಬೆಂಗಳೂರು

     ನೆರೆ ಸಂತ್ರಸ್ತರ ನೆರವಿಗೆ ಸರ್ಕಾರ ಕೂಡಲೇ ಧಾವಿಸಿ ಪರಿಹಾರ ಕಾರ್ಯಗಳ ಬಗ್ಗೆ ಸರ್ಕಾರ ತಕ್ಷಣ ಗಮನಹರಿಸಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ನೆರೆ ಪರಿಸ್ಥಿತಿ ಅವಲೋಕನ ಬಗ್ಗೆ ಮುಖ್ಯಮಂತ್ರಿಗಳು ಸಚಿವರಿಗೆ ಜವಾಬ್ದಾರಿ ಕೊಟ್ಟಿರಬಹುದು. ಯಾರಿಗೆ ಕೊಟ್ಟಿದ್ದಾರೆಯೋ ಅವರು ನೆರೆ ಸ್ಥಳಗಳಿಗೆ ಭೇಟಿ ನೀಡಬೇಕು. ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿ ಕೊಡಬೇಕು. ಕಳೆದ ಭಾರಿ ಕೊಡಗಿನಲ್ಲಿ ಸಾಕಷ್ಟು ಹಾನಿಯಾಗಿತ್ತು. ಈಗಲೂ ಅಲ್ಲಿ ಮಳೆಯಿಂದ ಸಮಸ್ಯೆಯಾಗಿದೆ. ಸಮಸ್ಯೆಯನ್ನು ಸರಿಪಡಿಸುವ ಕೆಲಸ ಸರ್ಕಾರ ಮಾಡಬೇಕು.ಆದರೆ ಅಂತಹ ವಾತಾವರಣ ಇನ್ನೂ ಕಾಣುತ್ತಿಲ್ಲ ಎಂದು

     ರಾಜ್ಯ ಸರ್ಕಾರದ ನಡೆಗೆ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.ಕೃಷಿ ಮೂಲಸೌಕರ್ಯ ನಿಧಿಯಡಿ ವಿವಿಧ ಸೌಲಭ್ಯ ಒದಗಿಸುವ 1 ಲಕ್ಷ ಕೋಟಿ ರೂಪಾಯಿ ಯೋಜನೆಗೆ ಪ್ರಧಾನಿ ಚಾಲನೆ ರೈತರಿಗೆ ಹಣ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಖರ್ಗೆ, ಈಗಾಗಲೇ 20 ಲಕ್ಷ ಕೋಟಿ ಎಂಎಸ್ ಎಂಇಗೆ ಸಬ್ಸಿಡಿ ಕೊಡಲೆಂದು ಬಿಡುಗಡೆ ಮಾಡಿದ್ದರು. ಆದರೆ 20 ಲಕ್ಷ ಕೋಟಿಯಲ್ಲಿ ಇಲ್ಲಿಯವರೆಗೆ 75 ಸಾವಿರ ಮಾತ್ರ ಜನರಿಗೆ ತಲುಪಿದೆಯಷ್ಟೆ ಎಂದು ಹೇಳಿದರು.

     ನಮ್ಮ ಮುಂದೆ ಕೋವಿಡ್ 19 ದೊಡ್ಡ ಸಮಸ್ಯೆಯಿದೆ. ಅದರ ಕಡೆ ಹೆಚ್ಚಿನ ಗಮನಹರಿಸಿದ್ದೇವೆ. ಇದರ ನೆಪದಲ್ಲಿ ಜನರಿಗೆ ಏನನ್ನು ಸರ್ಕಾರ ಕೊಡುತ್ತಿಲ್ಲ. ಕೋವಿಡ್ ಹೆಸರಿನಲ್ಲಿ ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಕೇಳುವವರಿಲ್ಲ. ಕಾರ್ಮಿಕರಿಗೆ ಸಮಸ್ಯೆಯಾಗಿದೆಯಾದರೂ ಈ ಬಗ್ಗೆ ಯಾರೂ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.

   ದೊಡ್ಡ ಕಂಪನಿಗಳು ಮುಚ್ಚಿ ಹೋಗಿವೆ. ಯಾರೂ ಅದರ ಬಗ್ಗೆ ಮಾತನಾಡುತ್ತಿಲ್ಲ. ಕೋವಿಡ್ ಹೆಸರಿನಲ್ಲಿ ದುರ್ಬಳಕೆ, ಭ್ರಷ್ಟಾಚಾರ ನಡೆಯುತ್ತಿವೆ. ಅದನ್ನು ಕಾಂಗ್ರೆಸ್ ಪಕ್ಷದ ನಾಯಕರು ಎತ್ತಿ ಹಿಡಿದಿದ್ದಾರೆ.ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕೂಡ ಎತ್ತಿ ಹಿಡಿದಿದೆ. ಇದರ ಮೇಲೆ ಸಿಎಜಿ ಕೂಡ ಕಣ್ಣಿಟ್ಟಿದೆ. ಏನೇನು ಸರ್ಕಾರ ಮಾಡುತ್ತದೆಯೋ ನೋಡೋಣ ಎಂದು ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap