ಬೆಂಗಳೂರು
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆಗೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಸಹೋದರನ ಪರವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಕ್ಷಮೆಕೋರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಕುಮಾರ ಸ್ವಾಮಿ, ರಾಜ್ಯದ ಯಾವುದೇ ಮಹಿಳೆ ಬಗ್ಗೆಅಗೌರವದಿಂದ ನಡೆದುಕೊಳ್ಳುವುದು ಸರಿಯಲ್ಲ.ಸಚಿವ ಎಚ್.ಡಿ. ರೇವಣ್ಣನ ಹೇಳಿಕೆಯಿಂದಯಾರಿಗಾದರೂ ನೋವಾಗಿದ್ದರೆ ಅವರ ಪರವಾಗಿತಾವು ಕ್ಷಮೆ ಕೋರುವುದಾಗಿ ತಿಳಿಸಿದರು.
ಮಾಧ್ಯಮ ಸ್ನೇಹಿತರು ರೇವಣ್ಣ ಅವರು ಪ್ರಚೋದನೆಗೆ ಒಳಗಾವಂತಹ ಪ್ರಶ್ನೆ ಕೇಳಿದ್ದಾರೆ. ಆದರೂ ಅವರುಎಚ್ಚರಿಕೆಯಿಂದ ಉತ್ತರ ಕೊಡಬೇಕಿತ್ತು. ಆದರೂಸಚಿವ ರೇವಣ್ಣನ ಹೇಳಿಕೆಯಿಂದ ನೋವಾಗಿದ್ದರೆರೇವಣ್ಣನವರ ಪರವಾಗಿ ಕ್ಷಮೆ ಕೋರುತ್ತೇನೆ. ನಮ್ಮಕುಟುಂಬ ಯಾವ ಹೆಣ್ಣು ಮಕ್ಕಳಿಗೂ ಅವಮಾನಮಾಡಿಲ್ಲ. ರೇವಣ್ಣ ಅವರು ಆಡಿರುವ ಮಾತುಗಳನ್ನು ಪೂರ್ಣ ಪ್ರಮಾನದಲ್ಲಿ ಮಾಡದೆ ಕಟ್ ಅಂಡ್ ಪೇಸ್ಟ್ಮಾಡಿವೆ ಎಂದರು.
ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮುಂದಾಗಿರುವ ಚಿತ್ರನಟ ಅಂಬರೀಷ್ ಅವರ ಪತ್ನಿ ಸುಮಲತಾ ಅವರ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ನೀಡಿರುವ ಹೇಳಿಕೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಿರಿಯ ಸಚಿವರಾಗಿ ಎಚ್.ಡಿ. ರೇವಣ್ಣ ಅವರುಆತುರವಾಗಿ ಮಾತನಾಡುವುದು ಸರಿಯಲ್ಲ. ಎಲ್ಲರ ಭಾವನೆಅರ್ಥ ಮಾಡಿಕೊಂಡು ಮಾತನಾಡಬೇಕು. ರಾಜ್ಯದಲ್ಲಿಮೈತ್ರಿ ಸರ್ಕಾರ ಆಡಳಿತದಲ್ಲಿದ್ದು, ಉದ್ವೇಗಕ್ಕೆ ಅವಕಾಶಕೊಡದೆ ಸಂಯಮದಿಂದ ಮಾತನಾಡಿದರೆ ಒಳ್ಳೆಯದು. “ ಗಂಡನನ್ನು ಕಳೆದುಕೊಂಡು ಎರಡು ಮೂರು ತಿಂಗಳು ಕಳೆದಿಲ್ಲ. ಆಗಲೇ ರಾಜಕೀಯಕ್ಕೆ ಬಂದಿದ್ದಾರೆ” ಎಂದು ರೇವಣ್ಣ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಖರ್ಗೆ, ವಿರೋಧಿಗಳು ಇಂತಹ ಹೇಳಿಕೆಗಳನ್ನೇ ಚುನಾವಣೆಯಲ್ಲಿಅಸ್ತ್ರವಾಗಿ ಬಳಸಿಕೊಳ್ಳಲು ಕಾಯುತ್ತಿರುತ್ತಾರೆ. ಹಾಗಾಗಿರೇವಣ್ಣ ಅವರು ತಾಳ್ಮೆ ಸಂಯಮದಿಂದ ಮಾತನಾಡಬೇಕು ಎಂದು ಕಿವಿ ಮಾತು ಹೆಳಿದರು.
ಈ ಮಧ್ಯೆ ರೇವಣ್ಣ ಹೇಳಿಕೆಗೆ ಕುಮಾರಸ್ವಾಮಿ ಪುತ್ರ, ಜೆಡಿಎಸ್ ನ ಸಂಭವನೀಯ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಹ ಕ್ಷಮೆ ಕೋರಿದ್ದಾರೆ.ಮಂಡ್ಯದ ಚಿನಕುರಳಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ