ಫೆ.16-17ರಂದು ಖೋಖೋ ಪಂದ್ಯಾವಳಿ

ದಾವಣಗೆರೆ:

       ನಗರದ ಬೀರಲಿಂಗೇಶ್ವರ ಮೈದಾನದಲ್ಲಿ ದಾವಣಗೆರೆ ಕ್ರೀಡಾ ಸಂಸ್ಥೆಯಿಂದ ಫೆ.16, 17ರಂದು ರಾಜ್ಯಮಟ್ಟದ ಹೊನಲು-ಬೆಳಕಿನ ಪುರುಷರ ಆಹ್ವಾನಿತ ಖೋಖೋ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಅಜ್ಜಂಪುರಶೆಟ್ರು ಮೃತ್ಯುಂಜಯ ತಿಳಿಸಿದರು.

       ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.16ರಂದು ಸಂಜೆ 6.30ಕ್ಕೆ ಪಂದ್ಯಾವಳಿಯನ್ನು ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರು ಉದ್ಘಾಟಿಸುವರು. ಸಂಸ್ಥೆಯ ಅಧ್ಯಕ್ಷ ಎ.ಜಿ.ಮಂಜುನಾಥ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್‍ನ ಪ್ರಭಾರ ಅಧ್ಯಕ್ಷೆ ಸವಿತಾ ಕಲ್ಲಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಶ್ರೀನಿವಾಸ, ಪಾಲಿಕೆ ಸದಸ್ಯ ದಿನೇಶ ಕೆ. ಶೆಟ್ಟಿ ಮತ್ತಿತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.

        ಫೆ.17ರಂದು ಸಂಜೆ 7.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ದಾವಣಗೆರೆ ಉತ್ತರ ಶಾಸಕ ಎಸ್.ಎ.ರವೀಂದ್ರನಾಥ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದ ಅವರು, ಪಂದ್ಯಾವಳಿಯಲ್ಲಿ ಮೂಡಬಿದರೆಯ ಆಳ್ವಾಸ್, ಕೋಲಾರದ ಕೆಕೆಸಿ, ಭದ್ರಾವತಿಯ ಸರ್ ಎಂ.ವಿ, ದಾವಣಗೆರೆಯ ಡಿವೈಎಸ್, ಸ್ಪೋಟ್ರ್ಸ್ ಕ್ಲಬ್, ಮೈಸೂರಿನ ಜಿಲ್ಲಾ ತಂಡ, ಹಾಸನದ ಹಾಸನಾಂಬ, ಬೆಂಗಳೂರಿನ ಪಯನಿಯರ್, ಭಜರಂಗಬಲಿ, ಯಂಗ್ ಪಯನಿಯರ್, ಬಿಸಿಕೆಹೆಚ್, ನೆಲಮಂಗಲದ ನವಭಾರತ್ ಸ್ಪೋಟ್ರ್ಸ್ ಕ್ಲಬ್ ಸೇರಿದಂತೆ 12 ತಂಡಗಳು ಭಾಗವಹಿಸಲಿವೆ ಎಂದು ವಿವರಿಸಿದರು.

        ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಎಸ್.ಎಸ್.ಚಿದಂಬರ, ಎ.ಎನ್.ಹನುಮಂತಪ್ಪ, ವಿ.ಸುರೇಶ, ಮೂರ್ತಿ, ಸತ್ಯನಾರಾಯಣ ಅಪ್ಪಾಜಿ ಮತ್ತಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link