ಹರಪನಹಳ್ಳಿ:
ಜೈನ ತೀರ್ಥಂಕರರ ಮೂರ್ತಿಯನ್ನು ಕೆಲ ದಿನಗಳ ಹಿಂದೆ ಕಿಡಿಗೇಡಿಗಳು ವಾಮಚಾರ ಮಾಡಿ ಭಗ್ನಗೊಳಿಸಿ ಪಾಣಿಪೀಠವನ್ನು ಸುಮಾರು ನಾಲ್ಕು ಐದು ಅಡಿ ಆಳ ಹೊಂಡ ತೆಗೆದು ದೇವಸ್ಥಾನವನ್ನು ಹಾಳು ಮಾಡಿದ್ದಾರೆಂದು ಜೈನ್ ಸಮಾಜದ ತಾಲ್ಲೂಕು ಅಧ್ಯಕ್ಷ ಪದ್ಮನಾಭ ಸ್ಥಳಕ್ಕೆ ಬೇಡಿ ನೀಡಿ ಸುದ್ಧಿಗಾರರಿಗೆ ಶುಕ್ರವಾರ ಮಾಹಿತಿ ನಿಡಿದರು.
ತಾಲ್ಲೂಕಿನ ಉಚ್ಚಂಗಿದುರ್ಗ ಕೋಟೆಯ ಬಳಿ ಇರುವ ಜೈನ್ ತೀರ್ಥಂಕರರ ಹಲವಾರು ಪುರಾತನ ದೇವಸ್ಥಾನಗಳು ಕಳೆದ ಹಲವಾರು ವರ್ಷಗಳಿಂದ ಕಿಡಿಗೇಡಿಗಳ ನಿಧಿ ಆಸೆಗೆ ಧ್ವಂಸ ಮಾಡುತ್ತಿದ್ದಾರೆ. ಉಚ್ಚಂಗೆಮ್ಮ ದೇವಸ್ಥಾನ ಪುರಾತತ್ವ ಇಲಾಖೆಯ ಸೃಪದಿಯಲ್ಲಿ ಇದೆ. ಇದರ ಬಳಿ ಇರುವ ಈ ಜೈನ ಮಂದಿರಗಳಿಗೆ ರಕ್ಷಣೆಯಿಲ್ಲದೇ ನಿರಂತರವಾಗಿ ನಾಶವಾಗುತ್ತಿವೆ ಎಂದು ದೂರಿದರು.
ಇಲ್ಲಿಯ ಹಿರೆಹೊಂಡ ಕಮಲದ ಹೂಗಳಿಂದ ತುಂಬಿ ತುಳುಕ್ಕುತ್ತಿದೆ. ಸಿಗೆಹೊಂಡ ಇಂತಹ ಬೇಸಿಗೆಯಲ್ಲೂ ನೀರು ನಿಂತಿದೆ. ಈ ಪ್ರದೇಶದಲ್ಲಿ ಸುಮಾರು 30ಕ್ಕೂ ಹೆಚ್ಚು ಜೈನ ಹಾಗೂ ಶಿವ ಮಂದಿಗಳಿವೆ. ಮಹೇಶ್ವರಲಿಂಗ, ಶಿವದೇವಾಲಯ, ಬಯಲು ರಾಮಲಿಂಗ, ನಾಗದೇವತೆ, ನೊಣೇಶ್ವರ ಹೀಗೆ ಇನ್ನೂ ಹಲವಾರು ದೇವಸ್ಥಾನಗಳಿವೆ. ಇಲ್ಲಿಯ ನಿವಾಸಿಗರು ಹೇಳುವಂತೆ ಈಗ ನಡೆದಿರುವ ಮೂರ್ತಿ ಭಗ್ನ, ದೇವಸ್ಥಾನಗಳ ಧ್ವಂಸ ಹಲವಾರು ವರ್ಷಗಳಿಂದ ಇದೇ ತೆರನಾಗಿ ನಿಧಿ ಆಸೆಗೆ ಹಾಳು ಮಾಡುತ್ತಿದ್ದಾರೆ. ರಾಜ್ಯದಲ್ಲಿ 4ನೇ ಶತಮಾನದಲ್ಲಿ ಜೈನರ ಇತಿಹಾಸಕ್ಕೆ ಉನ್ನತ ಸ್ಥಾನ ನೀಡಿದೆ. ಆದರೆ ಇಲ್ಲಿಯ ಪಳೆಉಳಿಕೆಗಳನ್ನು ರಕ್ಷಣೆ ಮಾಡಲು ಸಂಬಂಧಿಸಿದ ಅಧಿಕಾರಿಗಳು ಕಾಳಜಿವಹಿಸುತ್ತಿಲ್ಲ ಎಂದು ವಿಷಾಧಿಸಿದರು.
ಇಲ್ಲಿಯ ಗ್ರಾಮಲೆಕ್ಕಿಗರು ಹೇಳುವಂತೆ ಸರ್ವೆ ನಂ. 399 ರಲ್ಲಿ 1058 ಎಕರೆ ಜಮೀನು ಸರ್ಕಾರದ ಅಧೀನದಲ್ಲಿದೆ. ಇದರಲ್ಲಿ ಪ್ರವಾಸೋದ್ಯಮ ಇಲಾಖೆಗೆ 1.60 ಎಕರೆ ಜಮೀನು ನೀಡಲಾಗಿದೆ.
ರಾಜರ ಇತಿಹಾಸ ಹೇಳುವ ಜೈನ ಮಂದಿರ ಹಾಗೂ ಅಳಿದುಳಿದ ದೀಪ ಸ್ಥಂಭ, ಮಾನಸ ಸ್ಥಂಭ, ಶಿಲಾ ಶಾಸನಗಳು ನೂರಾರಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಸೂಕ್ತ ರಕ್ಷಣೆ ಇಲ್ಲದೇ ಈ ಸ್ಥಳದ ದೇವಸ್ಥಾನಗಳಿಗೆ ಹಲವಾರು ಬಾರಿ ಒಂದೇ ತಂಡ ಇದೇ ತೆರನಾಗಿ ವಾಮಚಾರದ ಪೂಜೆ ಮಾಡಿ ನಿಧಿ ಹುಡುಕುತ್ತಿದ್ದು ಮೇಲಿಂದ ಮೇಲೆ ಈ ಮೂರ್ತಿ ಭಗ್ನ ಮಾಡುತ್ತಿರುವುದರಿಂದ ಅವರಿಗೆ ಇಲ್ಲಿ ಸಂಪತ್ತು ದೊರೆಕಿರಬಹುದು ಎಂದು ಅನುಮಾನ ವ್ಯಕ್ತವಾಗುತ್ತದೆ ಎನ್ನುತ್ತಾರೆ ನಿವಾಸಿಗರು.
ತಾಲ್ಲೂಕು ಜೈನ ಸಮುದಾಯದ ಮುಖಂಡರು ಮೂರ್ತಿ ಭಗ್ನ ಮಾಡಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಬೇಕು. ಈ ಸ್ಥಳದಲ್ಲಿರುವ ಮಂದಿರಗಳಿಗೆ ಸೂಕ್ತ ರಕ್ಷಣೆ ನೀಡಲು ಕಾನೂನು ಕ್ರಮ ಜರುಗಿಸಬೇಕು ಎಂದು ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.ಜೈನ್ ಸಮುದಾಯದ ಅಧ್ಯಕ್ಷ ಪದ್ಮನಾಭ, ಉಪಾಧ್ಯಕ್ಷ ಮೋಹನ್, ಕಾರ್ಯದರ್ಶಿ ಯು.ಪಿ. ನಾಗರಾಜ, ಖಜಾಂಜಿ ಬಿಳಿಚೋಡ ಪದ್ಮರಾಜ, ಮುಖಂಡರಾದ ಪವನ್, ಅಜಯ್, ಯು.ಪಿ.ರಾಜು, ಸಿದ್ದನಗೌಡ ಹಾಗೂ ಇತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
