ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವ

ಹರಪನಹಳ್ಳಿ

     ಹರಿಹರದ ಪಂಚಮಸಾಲಿ ಪೀಠವನ್ನು ಸರ್ವಜನಾಂಗದವರಿಗೂ ಹಾಗೂ ಸಮಗ್ರ ಕನ್ನಡ ನಾಡಿನ ಜನತೆಯ ಆರೋಗ್ಯ ಪೀಠವನ್ನಾಗಿಸಲು ಪ್ರಯತ್ನಿಸಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ವಚನನಾಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. 

      ಅವರು ತಾಲೂಕಿನ ತಲುವಾಗಲು ಗ್ರಾಮದಲ್ಲಿ ಗ್ರಾಮ ಘಟಕದಿಂದ ಶನಿವಾರ ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

        ಸರಕಾರ ಕೊಡುವುದಕ್ಕಿಂತ ಸಮಾಜದ ಭಕ್ತರೆ ಶ್ರೀಮಠಕ್ಕೆ ಆಸ್ತಿಯಾಗಿದ್ದಾರೆ ಆದ್ದರಿಂದ ಬರುವ ಭಕ್ತರು ನೆಮ್ಮದಿಯಿಂದ ಜೀವನ ನಡೆಸಲು ಯೋಗ, ಪ್ರಾಣಾಯಾಮ, ದಂತಹ ಆರ್ಯುವೇದ ಔಷಧಿಗಳುಳ್ಳ ಕೇಂದ್ರವನ್ನಾಗಿ ಮಾಡಲಾಗುತ್ತಿದ್ದು ಶ್ರೀಮಠವು ಭಕ್ತಿಗೆ ಮಹತ್ವ ನೀಡುತ್ತದೆ ಎಂದರು.

      ಯಾವದೇ ಪಕ್ಷದ ರಾಜಕಾರಣಿಗಳು ಬಂದರು ಅವರಿಗೆ ಅರ್ಶಿವಾದ ಮಾಡುತ್ತೇವೆ ರಾಜಕಾರಣವನ್ನು ಕೇವಲ ಚುನಾವಣೆಯಲ್ಲಿ ಮಾತ್ರ ಮಾಡಬೇಕು ಒಂದು ರೀತಿಯಲ್ಲಿ ಹೋಳಿಹುಣ್ಣಿಮೆಯನ್ನು ಆಚರಿಸಿದಂತೆ ಚುನಾವಣ ಬಳಿಕ ಎಲ್ಲರೂ ಒಗ್ಗೂಡಿ ಸಮಾಜದ ಅಬಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.

        ಹಾರ-ತುರಾಯಿ ನಿಷೇದ: ಭಕ್ತಿ ಇರುತ್ತದೆ ಕೊಡುವ ಶಕ್ತಿ ಇರುವುದಿಲ್ಲ ಹೂವಿನ ಹಾರ ಹಾಕಿಸಿಕೊಂಡಾಗ ಆಹಾಂಕಾರ ಬರುತ್ತದೆ ಹಾರ. ಆರೋಹರವಾಗುತ್ತದೆ ಆದ್ದರಿಂದ ಹಾರ ತುರಾಯಿ ಹಾಕುವ ಸಂಸ್ಕøತಿಯನ್ನು ಕೈಬೀಡಬೇಕು ಇದರ ಬದಲು ಭಕ್ತಿ ಸಮರ್ಪಣೆ ಮಾಡಿ ಎಂದ ಅವರು ಇನ್ನು ಮುಂದೆ ಯಾರೇ ಮದುವೆ ಮಾಡುತ್ತಿದ್ದಲ್ಲಿ ಶ್ರೀಮಠದ ಕಲ್ಯಾಣಮಂಟಪದಲ್ಲಿ ಮಾಡಿಕೊಳ್ಳಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಎಂದರು,.

        ವಾರದ ಕಾರ್ಯಕ್ರಮ: ಮುಂದಿನ ದಿನಗಳಲ್ಲಿ ಹರಪನಹಳ್ಳಿಯಲ್ಲಿ ಒಂದು ವಾರಗಳ ಕಾಲ ಯೋಗ, ಪ್ರಾಣಾಯಾಮ, ಧಾರ್ಮಿಕ ಚಿಂತನೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

        ಗೌತಮಬುದ್ದ, ಮದರ ತೇರೆಸ್, ಕರುಣಾನಂತಹ ಅನೇಕ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ನೀವು ಕೊಡುವ ಸತ್ಕಾರ್ಯದಿಂದ ಸಮಾಜದ ಅಭಿವೃದ್ಧಿಯಾಗುತ್ತದೆ ಈ ನಿಟ್ಟಿನಲ್ಲಿ ಆದರ್ಶ ವ್ಯಕ್ತಿಗಳಡಿಯಲ್ಲಿ ಜೀವನ ನಡೆಸಬೇಕು ಮುಂದಿನ ದಿನಗಳಲ್ಲಿ ನಿತ್ಯವು ಅನ್ನದಾಸೋಹ ನಡೆಯಲಿದ್ದು ತಾಲೂಕಿನ ತಲುವಾಗಲು ಗ್ರಾಮ ಆದರ್ಶ ಗ್ರಾಮವಾಗಲಿ ಎಂದು ಆರ್ಶಿವದಿಸಿದರು.

       ಜಿಲ್ಲಾ ಸಮಿತಿ ಅಧ್ಯಕ್ಷ ಬಿ.ಸಿ.ಉಮಾಪತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಹರಿಹರ ಪಂಚಮಸಾಲಿ ಮಠಕ್ಕೆ ಪೀಠಾಧಿಪತಿಗಳು ಇಬ್ಬರು ಆಗಿದ್ದು, ಜಗದ್ಗುರುಗಳ ಹುಡುಕಾಟ ಕಷ್ಟವಾಗಿದ್ದರು ಸಹ ರಾಷ್ಟ್ರದಲ್ಲಿಯೇ ಪ್ರಸಿದ್ದಿ ಪಡೆದ ಶ್ರೀ ವಚನಾನಂದ ಮಹಾಸ್ವಾಮಿಗಳು ಸಿಕ್ಕಿರುವುದು ಹೆಮ್ಮೆಯ ವಿಚಾರವಾಗಿದೆ ಎಂದ ಅವರು ಸಮಾಜದ ಸಹಕಾರದಿಂದ ಇನ್ನಷ್ಟು ಉತ್ತಮ ಕೆಲಸ ಆಗಬೇಕಾಗಿದೆ ಎಂದರು.

       ಶೈಕ್ಷಣಿಕ, ರಾಜಕೀಯ, ಆರ್ಥಿಕವಾಗಿ ಮುನ್ನಡೆಯಬೇಕು ಹಾಗೂ ಯುವಕರು ದುಶ್ಚಟಗಳನ್ನು ಬದಿಗಿಟ್ಟು ಸಮಾಜದ ಕೆಲಸದಲ್ಲಿ ತೊಡಗಿಕೊಳ್ಳಿ, ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಅವರನ್ನೆ ಆಸ್ತಿಯಾಗಿ ಮಾಡಿ ಅವರಿಗೆ ಧರ್ಮ, ಸಂಸ್ಕಾರವನ್ನು ಕಲಿಸಿಕೊಡಿ ಎಂದರು.ತಾಲೂಕು ಪಂಚಾಮಸಲಿ ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ, ಜಿ.ಕೆ.ಮಲ್ಲಿಕಾರ್ಜುನ, ಬಂದೋಳ ಮಂಜುನಾಥ ಮಾತನಾಡಿದರು.ಕಾರ್ಯಕ್ರಮಕ್ಕೂ ಮೊದಲು ಗ್ರಾಮದಲ್ಲಿ ಟ್ರಾಕ್ಟರ್‍ನಲ್ಲಿ ಕಿತ್ತೂರು ಚನ್ನಮ್ಮ ಭಾವಚಿತ್ರದೊಂದಿಗೆ ಸಕಲವಾದ್ಯಗಳ ಮೂಲಕ ಕಳಸದೊಂದಿಗೆ ಮೇರವಣಿಗೆ ನಡೆಸಲಾಯಿತು. ಗ್ರಾಮದಲ್ಲಿ ಪ್ರತಿಮನೆಗೂ ನೀಡಲಾಗಿದ್ದ ಕಾಣಿಕೆ ಹಣವನ್ನು ಸಂಗ್ರಹಿಸಿ ಶ್ರೀಮಠಕ್ಕೆ ಗ್ರಾಮಸ್ಥರು ನೀಡಿದರು.

        ಈ ಸಂದರ್ಭದಲ್ಲಿ ಸಿ.ರುದ್ರಪ್ಪ, ನಾಗರಾಜ, ಸಿದ್ದಪ್ಪ, ಚನ್ನನಗೌಡ್ರು, ಕೊಟ್ರೇಶ್, ಬಿ.ಸಿದ್ದೇಶ್, ಸಿದ್ದಲಿಂಗಪ್ಪ, ರೇಖಮ್ಮ, ಗ್ರಾಪಂ ಸೀಮಾಪ್ಪ, ನಂದ್ಯಪ್ಪ, ಜಯಶ್ರೀ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap