ಬೆಂಗಳೂರು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು, ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣರನ್ನು ವಿಚಾರಣೆಗೆ ಒಳಪಡಿಸಿದ್ದರು. ಇಂದು ಬುಧವಾರ ಮಧ್ಯಾಹ್ನ 12ಗಂಟೆಯಿಂದ ಸತತವಾಗಿ ನಡೆದ ಕೆ.ಎನ್ ರಾಜಣ್ಣವರ ವಿಚಾರಣೆಯೀಗ ಅಂತ್ಯಗೊಂಡಿದೆ.
ದೆಹಲಿಯ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಮಾಜಿ ಶಾಸಕ ಕೆ.ಎನ್ ರಾಜಣ್ಣ ಮತ್ತು ಡಿಕೆಶಿ ನಡುವಿನ ಹಣ ವರ್ಗಾವಣೆ ಕುರಿತು ವಿಚಾರಣೆ ನಡೆಸಲಾಗಿದೆ. ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಿದ್ದ ಕೆ.ಎನ್ ರಾಜಣ್ಣ ವಿಚಾರಣೆ ಇಂದಿಗೆ ಬಹುತೇಕ ಮುಗಿದಿದೆ ಎನ್ನಲಾಗಿದೆ.
ವಿಚಾರಣೆ ಬಳಿಕ ಮಾತಾಡಿದ .ಕೆ.ಎನ್ ರಾಜಣ್ಣ, ಇಡಿ ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಕೊಟ್ಟಿದ್ದೇನೆ. ಕಳೆದ ಬಾರಿಯೂ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದೆ. ಈ ಉತ್ತರಕ್ಕೆ ಪೂರಕವಾದ ದಾಖಲೆಗಳನ್ನು ಕೊಡಲಿಕ್ಕೆ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕೊಟ್ಟು ಬಂದಿದ್ದೇನೆ ಎಂದರು.
ಇನ್ನು ಸಾಲ ಕೊಟ್ಟಿದರ ಬಗ್ಗೆ ಏನು ಪ್ರಸ್ತಾಪವಾಗಿಲ್ಲ. ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿಲ್ಲ. ಕೇವಲ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಾಲದ ವಿವರ ಕೊಟ್ಟಿಲ್ಲ. ಇಲ್ಲಿಯವರೆಗೂ ಒಟ್ಟು 28 ಶುಗರ್ ಪ್ರಾಕ್ಟರಿಗೆ ನೀಡಿದ್ದ ಸಾಲದ ವಿವರ ನೀಡಿದ್ದೇವೆ. ಅವರಿಗೆ ಯಾವುದು ಬೇಕೋ ಅದನ್ನ ನೋಡಿಕೊಳ್ಳಲಿ ಎಂದು ಕೆ.ಎನ್ ರಾಜಣ್ಣ ಪ್ರತಿಕ್ರಿಯಿಸಿದರು.
