ದೇವೆಗೌಡರ ಸೋಲಿಗೆ ಕಾರಣ ಬಿಚ್ಚಿಟ್ಟ ಕೆ ಎನ್ ಆರ್

ತುಮಕೂರು :

       ಕಾಂಗ್ರೆಸ್ ಜೊತೆ ಸೇರಿಕೊಂಡು ತನ್ನ ಕೋಟೆಯನ್ನು ಕರ್ನಾಟಕದಲ್ಲಿ ಭದ್ರಗೊಳಿಸಬೇಕು ಎನ್ನುವ ಜೆಡಿಎಸ್ ಕನಸು ಲೋಕಸಭಾ ಚುನಾವಣೆಯ ನಂತರ ನುಚ್ಚುನೂರಾಗಿದೆ.

      ಖುದ್ದು ಜೆಡಿಎಸ್ ವರಿಷ್ಠರೇ ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ ಎಸ್ ಬಸವರಾಜ್ ವಿರುದ್ದ 13,339 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ. ಬಸವರಾಜುಗೆ 596,127, ದೇವೇಗೌಡರಿಗೆ 582,788 ಮತಗಳ ಬಿದ್ದಿವೆ.

       ತುಮಕೂರು ಲೋಕಸಭಾ ವ್ಯಾಪ್ತಿಯ ಅಸೆಂಬ್ಲಿವಾರು ಲೆಕ್ಕಾಚಾರದಲ್ಲಿ ದೇವೇಗೌಡರಿಗೆ ಕೈಕೊಟ್ಟಿದ್ದು ಮಧುಗಿರಿ. ಅಲ್ಲಿ ಹಾಲೀ ಶಾಸಕ ವೀರಭದ್ರಯ್ಯ ಜೆಡಿಎಸ್ ನವರಾಗಿದ್ದರೂ, ಜಿ ಎಸ್ ಬಸವರಾಜ್ ಅವರಿಗೆ ಅತಿಹೆಚ್ಚು ಲೀಡ್ ಸಿಕ್ಕಿದ್ದು ಅಲ್ಲಿಂದಲೇ.

       ಮಧುಗಿರಿಯಲ್ಲಿ ಬಿಜೆಪಿಯ ಬೂತ್ ಕೂಡಾ ಇರಲಿಲ್ಲ, ಆದರೂ ಹತ್ತು ಸಾವಿರ ಗೌಡ್ರಿಗಿಂತ ಜಾಸ್ತಿ ಲೀಡ್ ಬಸವರಾಜ್ ಅವರಿಗೆ ಬಂದಿದೆ ಅಂದರೆ, ಅದು ಕುಟುಂಬ ರಾಜಕಾರಣದ ಮೇಲಿರುವ ಸಿಟ್ಟು ಎಂದಿರುವ ಮಾಜಿ ಮಧುಗಿರಿ ಕಾಂಗ್ರೆಸ್ ಶಾಸಕ ಕೆ ಎನ್ ರಾಜಣ್ಣ, ಗೌಡ್ರ ಸೋಲಿಗೆ ನಿಖಿಲ್ ಕುಮಾರಸ್ವಾಮಿ ಕಾರಣ ಎಂದಿದ್ದಾರೆ.

ಕುಂಚಿಕ ಸಮುದಾಯದ ಹೆಣ್ಣುಮಗಳ ಜೊತೆ ಎಂಗೇಜ್ಮೆಂಟ್

      ದೇವೇಗೌಡರು ಸೋಲುವುದನ್ನು ನಾನು ನಿರೀಕ್ಷಿಸಿದ್ದೆ. ಮಧುಗಿರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಕುಂಚಿಕ ಸಮುದಾಯದ ಹೆಣ್ಣುಮಗಳ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ. ಆಮೇಲೆ ಆ ಹುಡುಗಿಯನ್ನು ಬಿಟ್ಟುಬಿಟ್ಟ. ಅದು ಅಂಡರ್ ಕರೆಂಟ್ ಆಗಿ, ಅದು ಇಲ್ಲಿನ ಜನತೆ ಗೌಡರ ವಿರುದ್ದ ಮತಹಾಕಲು ಕಾರಣವಾಯಿತು ಎನ್ನುವ ಹೇಳಿಕೆಯನ್ನು ರಾಜಣ್ಣ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap