ಡಿಸಿಸಿ ಬ್ಯಾಂಕ್ ಮತ್ತೆ ಕೆಎನ್‍ಆರ್ ತೆಕ್ಕೆಗೆ

ತುಮಕೂರು:

    ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಆಡಳಿತ ಮಂಡಳಿಯ 14 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿಯಾದ ಉಪವಿಭಾಗಾಧಿಕಾರಿ ವಿ.ಅಜಯ್ ಘೋಷಿಸಿದ್ದಾರೆ. ಇದರೊಂದಿಗೆ ಡಿಸಿಸಿ ಬ್ಯಾಂಕ್‍ನ ಆಡಳಿತ ಚುಕ್ಕಾಣಿ ಮರಳಿ ಮಾಜಿ ಶಾಸಕ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಬೆಂಬಲಿತ ನಿರ್ದೇಶಕರ ಪಾಲಾಗಿದೆ.

   ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ಎ ವರ್ಗದ 10, ಬಿ,ಸಿ,ಡಿ ಹಾಗೂ ಡಿ1 ವರ್ಗದ 4 ನಿರ್ದೆಶಕ ಸ್ಥಾನಗಳು ಸೇರಿ ಒಟ್ಟು 14 ಸ್ಥಾನಗಳಿಗೆ 24 ನಾಮಪತ್ರ ಸಲ್ಲಿಕೆಯಾಗಿದ್ದವು. ಈ ಪೈಕಿ ತುಮಕೂರು , ಕೊರಟಗೆರೆ, ಚಿಕ್ಕನಾಯಕನಹಳ್ಳಿ , ಮಧುಗಿರಿಯಿಂದ ತಲಾ ಒಂದು ಉಮೇದುವಾರಿಕೆ ಮಾತ್ರ ಸಲ್ಲಿಕೆಯಾಗಿದ್ದರೆ, ಗುಬ್ಬಿ-3 ಕುಣಿಗಲ್-3, ಶಿರಾ-2. ಪಾವಗಡ-2, ತಿಪಟೂರು-2 ಹಾಗೂ ತುರುವೇಕೆರೆಯಿಂದ 3 ನಾಮಪತ್ರ ಸಲ್ಲಿಕೆಯಾಗಿದ್ದವು. ನಾಮಪತ್ರ ವಾಪಸ್ ಪಡೆಯಲು ಕೊನೆಯದಿನವಾಗಿದ್ದ ಗುರುವಾರ ಹತ್ತು ಮಂದಿ ವಾಪಸ್ ಪಡೆದಿದ್ದರಿಂದ ಎ ವರ್ಗದ ಹತ್ತು ಮಂದಿ ಅವಿರೋಧ ಆಯ್ಕೆಗೆ ಸಹಕಾರಿಯಾಯಿತು. ಉಳಿದಂತೆ ಬಿ,ಸಿ.ಡಿ, ಡಿ1 ವರ್ಗದ ನಾಲ್ಕು ಸ್ಥಾನಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧ ಆಯ್ಕೆಯೆಂದು ಘೋಷಿಸಲಾಗಿದೆ.

   ಅವಿರೋಧ ಆಯ್ಕೆಯಾದವರು: ತಾಲೂಕುವಾರು ವಿಎಸ್‍ಎಸ್‍ಎನ್‍ಗಳನ್ನು ಪ್ರತಿನಿಧಿಸುವ ಎ ವರ್ಗದ ನಿರ್ದೇಶಕ ಸ್ಥಾನಗಳಿಗೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ (ತುಮಕೂರು), ಸಿಂಗದಹಳ್ಳಿ ರಾಜ್‍ಕುಮಾರ್(ಚಿಕ್ಕನಾಯಕನಹಳ್ಳಿ), ಜಿ.ಜೆ.ರಾಜಣ್ಣ(ಮಧುಗಿರಿ), ಹಾಗೂ ಹನುಮಾನ್ (ಕೊರಟಗೆರೆ), ಮಾಜಿ ಶಾಸಕ ಕೆ.ಷಡಾಕ್ಷರಿ(ತಿಪಟೂರು), ಜಿ.ಎಸ್.ರವಿ(ಸಿರಾ), ಟಿ.ಎನ್.ನರಸಿಂಹಯ್ಯ(ಪಾವಗಡ), ಎಂ.ಸಿದ್ದಲಿಂಗಪ್ಪ(ತುರುವೇಕೆರೆ), ಎಚ್.ಸಿ.ಪ್ರಭಾಕರ್(ಗುಬ್ಬಿ), ಬಿ.ಶಿವಣ್ಣ(ಕುಣಿಗಲ್) ಅವರುಗಳು ಅವಿರೋಧ ಆಯ್ಕೆಯಾಗಿದ್ದಾರೆ.

    ಉಳಿದಂತೆ ಟಿಎಪಿಸಿಎಂಎಸ್ ಪ್ರತಿನಿಧಿಸುವ ಬಿ. ವರ್ಗದಿಂದ  ಕ್ರಿಪ್ಕೋ ನಿರ್ದೇಶಕ ಆರ್. ರಾಜೇಂದ್ರ, ಪಟ್ಟಣ ಸಹಕಾರ ಬ್ಯಾಂಕ್‍ಗಳು ಹಾಗೂ ವ್ಯವಸಾಯೇತರ ಪತ್ತಿನ ಸಹಕಾರ ಸಂಘಗಳನ್ನು ಪ್ರತಿನಿಧಿಸುವ ಸಿ ವರ್ಗದಿಂದ ಲಕ್ಷ್ಮೀನಾರಾಯಣ್, ಹಾಲು ಉತ್ಪಾದಕರ ಸಹಕಾರ ಸಂಘದ ಪರವಾಗಿ ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್‍ಬಾಬು ಹಾಗೂಇದೇ ಮೊದಲ ಬಾರಿಗೆ ಕಲ್ಪಿಸಿರುವ ಮಹಿಳಾ ಸಹಕಾರ ಕ್ಷೇತ್ರದಿಂದ ಸಹಕಾರಿ ಯೂನಿಯನ್ ಮಾಜಿ ಉಪಾಧ್ಯಕ್ಷರಾದ ಅನ್ನಪೂರ್ಣ ವೆಂಕಟನಂಜಪ್ಪ ಅವರುಗಳು ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap