ಸೌಟು ಬಿಟ್ಟು ಗನ್ ಹಿಡಿದ ಕೊಡವ ಮಹಿಳೆಯರು..!

ಮಡಿಕೇರಿ:

   ಸಾಮಾನ್ಯವಾಗಿ ಕೊಡಗಿನಲ್ಲಿ ಮಹಿಳೆಯರು ತಾವಾಯಿತು ತಮ್ಮ ಕಾಫಿತೋಟಗಳಾಯಿತು ಎಂದು ಕೊಂಡು ಇರುತ್ತಾರೆ .ಆದರೆ ಕಳೆದ ಐದು ದಿನಗಳಿಂದ ಬೆಳಿಗ್ಗೆ ದಕ್ಷಿಣ ಕೊಡಗು ಮೂಲದ ಕೆಲ ಮಹಿಳೆಯರು ಶೂಟಿಂಗ್ ಕಲಿಯುವ ಉದ್ದೇಶದೊಂದಿಗೆ ತಮ್ಮ ನಿತ್ಯದ ಅಡುಗೆ ಕೆಲಸಕ್ಕೆ ರೆಸ್ಟ್ ಕೊಟ್ಟು ಕೈಯಲ್ಲಿ ಬಂದೂಕು  ಹಿಡಿದಿದ್ದಾರೆ.ಕೊಡವ ಜನಾಂಗದವರ ಮುಖ್ಯ ವೃತ್ತಿ ಭೆಟೆಯಾಡುವುದು ಅದಕ್ಕಾಗಿ ಬಂದೂಕನ್ನು ಮನೆಯಲ್ಲಿ ತಂದಿಟ್ಟುಕೊಂಡಿರುತ್ತಾರೆ.

   ನಾವು ಅಡುಗೆ ಮನೆಗೆ ಸೀಮಿತರಲ್ಲ ಎಂದು ತೋರಿಸಲು ಕೊಡವರ ಹೆಣ್ಣು ಮಕ್ಕಳು ಬಂದೂಕುಗಳನ್ನು ಬಳಸುವುದನ್ನು ಕಲಿಯವ ಸಲುವಾಗಿ ಅಡುಗೆ ಕೆಲಸ ಬಿಟ್ಟು ಬಂದೂಕು ಹಿಡಿದಿದ್ದಾರೆ. ಇದು ಮಹಿಳೆಯರಿಗೆ ಆತ್ಮ ರಕ್ಷಣಾ ಸಾಮರ್ಥ್ಯ ನೀಡುತ್ತದೆ.

   ಎಲ್ಲಾ ಮಹಿಳೆಯರು ಬಿಳಿ ಅಂಗಿ ಧರಿಸಿ ಗೋಣಿಕೊಪ್ಪಲ್ ನ ಕಾವೇರಿ ಕಾಲೇಜು ಮೈದಾನಕ್ಕೆ ಧಾವಿಸಿ ಬಂದೂಕುಗಳಿಗೆ ಬುಲೆಟ್ ಲೋಡ್ ಮಾಡುವುದು ಮತ್ತು ನಿರ್ದಿಷ್ಟ ಗುರಿಯನ್ನು ಶೂಟ್ ಮಾಡುವುದನ್ನು ಕಲಿಯುತ್ತಿದ್ದಾರೆ. 

    ಗೋಣಿಕೊಪ್ಪಲ್ ಪೊಲೀಸರು ಶೂಟಿಂಗ್ ತರಬೇತಿಯನ್ನು ಆಯೋಜಿಸಿದ್ದು, ದಕ್ಷಿಣ ಕೊಡಗುದಾದ್ಯಂತದ 60 ಕ್ಕೂ ಹೆಚ್ಚು ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತರಬೇತಿ ಪಡೆದವರಲ್ಲಿ ಎಂಟು ಮಹಿಳೆಯರು ತರಬೇತಿಯ ನಂತರ ಹವ್ಯಾಸಿ ಶೂಟರ್ ಆಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link