ಚಿತ್ರದುರ್ಗ:
ಇಲ್ಲಿನ ಸ್ಟೇಡಿಯಂ ರಸ್ತೆಯಲ್ಲಿರುವ ಹಳೆ ಕೈಗಾರಿಕಾ ಕಚೇರಿ ಹಿಂಭಾಗವಿರುವ ನಾಗರಕಟ್ಟೆ ವಾರ್ಡ್ ನಂ.33 ಈ ಪ್ರದೇಶವನ್ನು ಕೊಳಗೇರಿಯೆಂದು ಘೋಷಣೆ ಮಾಡುವಂತೆ ಸ್ಲಂ ಜನಾಂದೋಲನ ಕರ್ನಾಟಕದಿಂದ ಸೋಮವಾರ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಲಿಂಗಾಯಿತ, ರೆಡ್ಡಿ, ಹಿಂದುಳಿದವರು ಹೀಗೆ ಎಲ್ಲಾ ಜಾತಿಯವರು ಈ ಪ್ರದೇಶದಲ್ಲಿ ಕಳೆದ ಐವತ್ತು ವರ್ಷಗಳಿಂದ ವಾಸಿಸುತ್ತಿದ್ದು, ಇದುವರೆವಿಗೂ ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಹಾಗಾಗಿ ನಾಗರಕಟ್ಟೆ ಪ್ರದೇಶವನ್ನು ಅಭಿವೃದ್ದಿಪಡಿಸುವುದಕ್ಕಾಗಿ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಅಧಿನಿಯಮ 1973 ರ ಕಲಂ (3) ರ ಪ್ರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಬೇಕೆಂದು ಸ್ಲಂ ಜನಾಂದೋಲನ-ಕರ್ನಾಟಕ ಇವರು ಅಪರ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಸ್ಲಂ ಜನಾಂದೋಲನ-ಕರ್ನಾಟಕ ಜಿಲ್ಲಾ ಸಂಚಾಲಕ ಟಿ.ಮಂಜಣ್ಣ, ಅಧ್ಯಕ್ಷ ಎಂ.ಮಹೇಶ್‍ಸ್ವಾಮಿ, ಉಪಾಧ್ಯಕ್ಷೆ ಮಾಲತಿ, ಕಾರ್ಯದರ್ಶಿ ಮಲ್ಲಿಕಾರ್ಜುನ್, ಭಾಗ್ಯಮ್ಮ, ಜಯಂತಿ, ಖಜಾಂಚಿ ಮಂಜುನಾಥ್ ಸೇರಿದಂತೆ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
