ಶಕ್ತಿ ಕಾರ್ಯಕ್ರಮ ನೊಂದಣಿ ಅಭಿಯಾನದಲ್ಲಿ ಕೆಪಿಸಿಸಿ ಪ್ರಥಮ: ದಿನೇಶ ಗುಂಡೂರಾವ್

ಬೆಂಗಳೂರು

      ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕನಸಿನ ಯೋಜನೆಯಾದ ಶಕ್ತಿ ಕಾರ್ಯಕ್ರಮ ನೊಂದಣಿ ಅಭಿಯಾನದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಥಮ ಸ್ಥಾನದಲ್ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

       ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪಕ್ಷದ ಕಾರ್ಯಕರ್ತರನ್ನು ಸಂಪರ್ಕಿಸುವ ಹಾಗು ತಳಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಎಐಸಿಸಿ ಜಾರಿಗೆ ತಂದ ‘ಶಕ್ತಿ’ಕಾರ್ಯಕ್ರಮ ರಾಜ್ಯದಲ್ಲಿ ಯಶಸ್ವಿಯಾಗಿದೆ ಎಂದರು.
‘ಶಕ್ತಿ’ ಯೋಜನೆಯಡಿಯಲ್ಲಿ 10,46,759 ಸದಸ್ಯತ್ವ ನೊಂದಣಿ ಮೂಲಕ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ರಾಜಸ್ಥಾನ ಎರಡನೆ ಸ್ಥಾನದಲ್ಲಿದೆ. ರಾಜ್ಯಾದ್ಯಂತ ಶಕ್ತಿ ನೋಂದಣಿಯಲ್ಲಿ ಶೇ 77 % ರಷ್ಟು ಬೂತ್ ಗಳನ್ನು ತಲುಪಿದ್ದೇವೆ. ಅಲ್ಲದೆ 7 ವಿಧಾನಸಭಾ ಕ್ಷೇತ್ರಗಳಲ್ಲಿ 20 ಸಾವಿರಕ್ಕೂ ಸದಸ್ಯರನ್ನು ನೊಂದಣಿ ಮಾಡಲಾಗಿದೆ.

         ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ 1,12,500 ಸದಸ್ಯರನ್ನು ಯಶವಂತಪುರ ಕ್ಷೇತ್ರದಲ್ಲಿ ನೋಂದಣಿ ಮಾಡುವ ಮೂಲಕ ಇಡೀ ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಮೊದಲ ಸ್ಥಾನಕ್ಕೇರಿದೆ.ಅತಿ ಕಡಿಮೆ ನೋಂದಣಿ ಹಾಸನ ಕ್ಷೇತ್ರದಲ್ಲಿ ದಾಖಲಾಗಿದ್ದು, ಕೇವಲ 73 ಸದಸ್ಯರು ಮಾತ್ರ ನೋಂದಣಿಯಾಗಿದ್ದಾರೆ. ಹಾಗೆಯೇ, ಕೋಲಾರ,ದಾವಣಗೆರೆ,ಚಿಕ್ಕಮಗಳೂರು,ಮಂಡ್ಯ ಕ್ಷೇತ್ರಗಳಲ್ಲಿ ಯೋಜನೆ ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಇಡೀ ರಾಜ್ಯದಲ್ಲಿ 20 ಲಕ್ಷ ಸದಸ್ಯರ ನೋಂದಣಿ ಗುರಿ ಹೊಂದಿದ್ದು, ವರ್ಷಾಂತ್ಯದೊಳಗೆ ಗುರಿಯನ್ನು ಮುಟ್ಟುವ ವಿಶ್ವಾಸವಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap