ರಸ್ತೆ ಬದಿಯಲ್ಲೇ ತಿಂಡಿ ಸೇವನೆ, ಪಾರ್ಕ್‍ನಲ್ಲಿ ಮತಯಾಚನೆ

ಬೆಂಗಳೂರು

      ಸದಾಶಿವ ನಗರದ ಸ್ಯಾಂಕಿಕೆರೆಗೆ ಬೆಳಗಿನ ವಾಯು ವಿಹಾರಕ್ಕೆ ಬಂದಿದ್ದ ನಾಗರಿಕರ ಬಳಿ ಬೆಂಗಳೂರು ಉತ್ತರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಭೈರೇಗೌಡ ಮತಯಾಚಿಸಿದರು.

      ಇಂದು ಬೆಳಗ್ಗೆ 7ಕ್ಕೆ ಸ್ಯಾಂಕಿ ಕೆರೆ ಸದಾಶಿವ ನಗರ ಪ್ರವೇಶ ದ್ವಾರದ ಮೂಲಕ ಹೊರಟು ಪ್ರತಿಯೊಬ್ಬರೂ ಮತ ನೀಡುವಂತೆ ಮನವಿ ಮಾಡಿ ಪಕ್ಷದ ಕರಪತ್ರವನ್ನು ವಿತರಿಸಿದರು.

       ಸದಾಶಿವನಗರ ಮಾರ್ಗದಿಂದ ಹೊರಟು ಇನ್ನೊಂದು ಕಡೆ ಅಂದರೆ ಮಲ್ಲೇಶ್ವರಂ ಪ್ರವೇಶ ದ್ವಾರದ ಕಡೆ ತಮ್ಮ ಕ್ಯಾಂಪೇನ್ ಪೂರ್ಣ ಗೊಳಿಸಿದ ಅವರು, ನೂರಾರು ಮಂದಿಗೆ ಕರಪತ್ರ ನೀಡಿ ಮತ ನೀಡುವಂತೆ ಮನವಿ ಮಾಡಿದರು.

      ಸ್ಯಾಂಕಿ ಕೆರೆ ಭೇಟಿ ಬಳಿಕ ಮಲ್ಲೇಶ್ವರಂ ಮರ್ಗೊಸಾ ರಸ್ತೆಯಲ್ಲಿರುವ ವೀಣಾ ಸ್ಟೋರ್‍ಗೆ ತೆರಳಿ ಸಾರ್ವಜನಿಕರೊಂದಿಗೆ ಸರತಿ ಸಾಲಿನಲ್ಲಿ ನಿಂತು ಉಪಹಾರ ಸೇವಿಸಿದರು. ಕೃಷ್ಣಭೈರೇಗೌಡ ಆಹಾರ ಸೇವಿಸಲು ಆಗಮಿಸಿದ್ದ ಜನರೊಂದಿಗೆ ಮಾತುಕತೆ ನಡೆಸಿದರು. ಅವರಿಂದಲೂ ಇದೇ ಸಂದರ್ಭ ಮತಯಾಚನೆ ಮಾಡಿದರು.

       ಇದಾದ ಬಳಿಕ ಮಲ್ಲೇಶ್ವರ ಮಾರುಕಟ್ಟೆಗೆ ತೆರಳಿ ವ್ಯಾಪಾರಿಗಳ ಕುಂದು ಕೊರತೆಗಳನ್ನು ಆಲಿಸಿದರು. ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರದಿಂದ ಕಣಕ್ಕಿಳಿದಿದ್ದೇನೆ. ಹಾಗಾಗಿ ತಮ್ಮನ್ನ ಬೆಂಬಲಿಸುವಂತೆ ಮತದಾರರು, ವ್ಯಾಪಾರಿಗಳು ಮತ್ತು ಅಲ್ಲಿಗೆ ಆಗಮಿಸಿದ ಗ್ರಾಹಕರಲ್ಲಿ ಮನವಿ ಮಾಡಿಕೊಂಡರು.

      ದಿನವಿಡೀ ಸಂಚಾರ:ಇಂದು ದಿನವಿಡೀ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಮತದಾರನ ಭೇಟಿಯಾಗಲಿರುವ ಕೃಷ್ಣಬೈರೇಗೌಡ, ಮಧ್ಯಾಹ್ನದವರೆಗೆ ಮಲ್ಲೇಶ್ವರ ಭಾಗದಲ್ಲಿ ಹಾಗೂ ಮಧ್ಯಾಹ್ನದ ನಂತರ ಮಹಾಲಕ್ಷ್ಮಿ ಲೇಔಟ್ ಭಾಗದಲ್ಲಿ ಸಂಚರಿಸಲಿದ್ದಾರೆ.ಬಿಜೆಪಿ ಪ್ರಾಬಲ್ಯ ಹೆಚ್ಚಿರುವ ಮಲ್ಲೇಶ್ವರ ಭಾಗದಲ್ಲಿ ಇವರಿಗೆ ನಿರೀಕ್ಷಿತ ಪ್ರತಿಕ್ರಿಯೆ ಸಿಗದಿದ್ದರೂ ಮಧ್ಯಾಹ್ನದ ನಂತರ ಮಹಾಲಕ್ಷ್ಮಿ ಲೇಔಟ್‍ನಲ್ಲಿ ಇವರನ್ನು ಬೆಂಬಲಿಸುವ ಜನ ಸಿಗುವ ನಿರೀಕ್ಷೆ ಇದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap