ಹರಪನಹಳ್ಳಿ
ಹರಪನಹಳ್ಳಿ ತಾಲೂಕಿನ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಹೈದ್ರಾಬಾದ್ ಕರ್ನಾಟಕದ 371 ಜೆ ಅಡಿಯಲ್ಲಿ 7 ಕೋಟಿ ರು.ಗಳ ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ಥಾವನೆ ಕಳಿಸಬೇಕಾಗಿದೆ ಎಂದು ವಿಧಾನ ಪರಿಷತ್ತು ಸದಸ್ಯ ಕೆ.ಸಿ.ಕೊಂಡಯ್ಯ ಹೇಳಿದ್ದಾರೆ.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯನ್ನು ಮಾತನಾಡಿ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆ ಸೇರ್ಪಡೆ ಯಾಗಿದ್ದಕ್ಕೆ ಹೈದ್ರಾಬಾದ್ ಕರ್ನಾಟಕದ ಅನುದಾನ ದೊರಕಲು ಅವಕಾಶ ಸಿಕ್ಕಿದ್ದು, ಡಿ.31 ರೊಳಗೆ 7 ಕೋಟಿ ರು.ಗಳ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದು ಅವರು ತಿಳಿಸಿದರು.
ಹರಪನಹಳ್ಳಿ, ಹೂವಿನ ಹಡಗಲಿ, ಕೊಟ್ಟೂರು ತಾಲೂಕುಗಳನ್ನೊಳಗೊಂಡ ಕಂದಾಯ ಉಪವಿಭಾಗ ಹರಪನಹಳ್ಳಿಯಲ್ಲಿ ಇರುತ್ತದೆ, ಡಿವೈಎಸ್ಪಿ ಕಚೇರಿ ಸಹ ಇಲ್ಲಿಯೇ ಇರುತ್ತದೆ, ಒಟ್ಟಿನಲ್ಲಿ ಎಲ್ಲಾ ಉಪವಿಭಾಗದ ಕಚೇರಿಗಳು ಇಲ್ಲಿಯೇ ಮುಂದುವರೆಯುತ್ತವೆ ಎಂದು ಅವರು ತಿಳಿಸಿದರು.
ಹೊಸ ವರ್ಷದ ನಂತರ ಬಳ್ಳಾರಿ ಜಿಲ್ಲಾಧಿಕಾರಿಯವರು ಇಲ್ಲಿಗೆ ಬಂದು ವಿವಿಧ ದಾಖಲೆಗಳನ್ನು ಪರಿಶೀಲಿಸಿ ಎಲ್ಲಾ ಸರಿಪಡಿಸುತ್ತಾರೆ ಎಂದರು. 371 ಜೆ ಬಗ್ಗೆ ವಿವರ ಮಾಹಿತಿ ನೀಡಲು ಬೆಂಗಳೂರು ಹಾಗೂ ಬಳ್ಳಾರಿಯ ಪರಿಣಿತರನ್ನು ಕರೆದುಕೊಂಡು ಇಲ್ಲಿಗೆ ಬಂದು ಕಾರ್ಯಗಾರ ಮಾಡಿಸುವ ಯೋಜನೆ ಇದೆ ಎಂದು ಅವರು ಹೇಳಿದರು.
ಕಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ ಅವರು ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಬೇಕು, 371 ಜೆ ಸೌಲಭ್ಯ ಸಿಗಬೇಕು ಎಂದು ನಾನು ಸಹ ಹೋರಾಟ , ಮೊದಲೇ ಹರಪನಹಳ್ಳಿಯನ್ನು ದಾವಣಗೆರೆಗೆ ಕಳಿಸಲು ಇಷ್ಟವಿದ್ದಿಲ್ಲ ಎಂದ ಅವರು ಈಗ ಹೃದಯ ಪೂರ್ವಕ ಸ್ವಾಗತಿಸುತ್ತೇನೆ ಎಂದು ಅವರು ತಿಳಿಸಿದರು.
ಉತ್ತರ ಕರ್ನಾಟಕಕ್ಕೆ ಅನ್ಯಾಯ ವಾಗಿದೆ, ಬಳ್ಳಾರಿ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನು ಯಾರಿಗಾದರೂ ಕೊಡ್ರಿ ಎಂದು , ಆ ಪ್ರಕಾರ ಕೊಟ್ಟಿದ್ದಾರೆ ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಮುಖಂಡ ಟಿ.ಎಚ್ .ಎಂ ವಿರುಪಾಕ್ಷಯ್ಯ, ಆಲದಹಳ್ಳಿ ಷಣ್ಮೂಖಪ್ಪ, ಮತ್ತಿಹಳ್ಳಿ ಶಿವಣ್ಣ, ಅಬ್ದುಲ್ ರಹಿಮಾನ,, ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ