ಪಾವಗಡ
ಕೃಷಿ ಇಲಾಖೆಯಿಂದ ಬರುವ ಯೋಜನೆಗಳನ್ನು ರೈತರ ಮನೆ ಮನೆಗೆ ಸೌಲಭ್ಯ ಸಿಗುವ ದೃಷ್ಠಿಯಿಂದ ಸರ್ಕಾರ ಈ ಯೋಜನೆ ಅನುಷ್ಠಾನ ಗೋಳಿಸಬೇಕೆಂದ ದೇಶದ ಅನ್ವಯ ಕೃಷಿ ಅಭಿಯಾನ ಪ್ರಚಾರ ವಾಹನಕ್ಕೆ ಚಾಲನೆ ನೀಡಬೇಕಾಗಿದೆ ಎಂದು ತಾ.ಪಂ.ಅಧ್ಯಕ್ಷ ಸೊಗಡುವೆಂಕಟೇಶ್ ತಿಳಿಸಿದರು.
ಪಟ್ಟಣದ ಕೃಷಿ ಇಲಾಖೆ ಅವರಣದಲ್ಲಿ ಕೃಷಿ ಸಮಗ್ರ ಅಭಿಯಾನ ರಥಕ್ಕೆ ಚಾಲನೆ ನೀಡಿ ಮಾತನಾಡುತ್ತಾ ರೈತರು ಹಳೇ ಬೇಸಾಯ ಪದ್ದತಿಗಳನ್ನು ಬಿಟ್ಟು ತಾಂತ್ರಿಕ ಬೇಸಾಯ ಪದ್ದತಿಗಳನ್ನು ಅಳವಡಿಸಿಕೊಂಡು ಲಾಭ ಪಡೆಯ ಬೇಕಾಗಿದೆ ಎಂದು ತಿಳಿಸಿದರು.
ತಾಲ್ಲೂಕಿನಲ್ಲಿ ಹೆಚ್ಚಿನದಾಗಿ ರೈತರು ಶೇಂಗಾ ಬೆಳೆ ನಂಬಿ ನಷ್ಟಾವಾಗುತ್ತಿದ್ದು,15 ವರ್ಷಗಳಿಂದ ಮಳೆ ಬೆಳೆಯಾಗದೆ ರೈತರಿಗೆ ಕಂಗಾಲಾಗಿದ್ದು,ಶೇಂಗಾ ಬೆಳೆಯನ್ನು ಕೈಬಿಟ್ಟು ಪರಿಯಾಯ ಸಿರಿದ್ಯಾನ
ಬೆಳೆಗಳಾದ ನವನೆ,ಹಾರಿಕೆ,ಜೋಳ,ತೋಗರೆ ಬೆಳೆಗಳನ್ನು ಬೆಳೆದು ಲಾಭ ಪಡೆಯ ಬೇಕಾಗಿದೆ ಎಂದರು.
ಪಾವಗಡ ತಾಲ್ಲೂಕಿಗೆ ಕುಡಿಯುವ ನೀರಿಗಾಗಿ 2350 ಕೋಟಿ ಹಣ ಬಿಡುಗಡೆ ಮಾಡಿದ್ದು,ಟೆಂಡರ್ ಕರೆದಿದ್ದು,ಕಾಮಗಾರಿ ತರಿತ್ವಾಗಿ ಯೋಜನೆ ಪೂರ್ಣಗೋಳಿಸಲು ಪ್ರಯತ್ನ ನಡೆಯುತ್ತಿದ್ದು,ಹಳ್ಳಿಗಳಿಗೆ ಯಾವ ರೀತಿ ನೀರು ಪೂರೈಕೆ ಮಾಡಬೇಕೆಂದು ಚರ್ಚೆ ನಡೆಯುತ್ತಿದ್ದು,ಕುಡಿಯುವ ನೀರಿನ ಟ್ಯಾಂಕ್‍ಗಳ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಚಿವ ವೆಂಕಟರಮಣಪ್ಪ ಗ್ರಾಮಗಳ ಬುದ್ದಿ ಜೀವಿಗಳಿಂದ ಸಲಹೆ ಪಡೆದು ನೀರು ಸರಬರಾಜು ಮಾಡಬೇಕೆಂದು ಅವರ ಗಮನಕ್ಕೆ ತರುವುದಾಗಿ ತಿಳಿಸಿದರು.
ರೈತ ಸಂಘದ ತಾಲ್ಲೂಕು ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ ತಾಲ್ಲೂಕಿಗೆ ಕುಡಿಯುವ ನೀರು ಯೋಜನೆ ಕುಂಠಿತಗೊಂಡಿದ್ದು, ಎರಡು ವರ್ಷದಿಂದ ಜನಪ್ರತಿನಿಧಿಗಳು ಟೊಳ್ಳು ಬರವೆ ನೀಡುತ್ತಿದ್ದಾರೆ.ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಹಾಹಕಾರ ಎದಿದ್ದು,ಕಾಮಗಾರಿಗೆ ಚಾಲನೆ ನೀಡಿಲ್ಲ,ಗುದ್ದಲ ಪೂಜೆ ನಡೆದಿಲ್ಲ,ಇನ್ನು ಯಾವಾಗ ಪಾವಗಡಕ್ಕೆ ನೀರು ಕೊಡುವುದಾಗಿ ಆಕ್ರೋಶ ವ್ಯಕ್ತಪಡೆಸಿದರು.
ಈ ಸಂದರ್ಭದಲ್ಲಿ ಹಸಿರು ಸೇನೆ ರೈತ ಸಂಘದ ಅಧ್ಯಕ್ಷ ಪೂಜಾರಪ್ಪ ಹಾಗೂ ಕೃಷಿ ಸಹಾಯ ನಿರ್ದೇಶಕ ಪುಟ್ಟರಂಗಯ್ಯ ಮಾತನಾಡಿದರು.
ಕೃಷಿ ಇಲಾಖೆ ಅಧಿಕಾರಿಗಳಾದ ರಾಮಾಂಜಿನಪ್ಪ,ಮಲ್ಲಿಕಾರ್ಜುನಪ್ಪ, ರಂಗನಾಥ್,ರೈತ ಸಂಘದ ಸದಸ್ಯ ಅಶ್ವಥಪ್ಪ,ಕೆ.ಓ.ಎಫ್ ಬಾಲಾಜಿ, ಸ್ವಾಮಿ ವಿವೇಕನಂದ ಸಿದ್ದಾಪುರ ಕಲಾತಂಡದ ಕಲಾವಿದರಾದ ಮರಿಸ್ವಾಮಿ, ನಾಗರಾಜು, ರಾಜಗೋಪಾಲ್, ಈಶ್ವರ್, ಸಿ.ಐ.ಟಿ.ಯು ಸದಸ್ಯ ಶಿವಕುಮಾರ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








