ಕ್ಷಯರೋಗ ಪತ್ತೆ ಆಂದೋಲನ : ಸಿಇಓ

ತುಮಕೂರು

   ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರವು ಜುಲೈ 15 ರಿಂದ 20ರವರೆಗೆ ಹಮ್ಮಿಕೊಂಡಿರುವ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಭಿತ್ತಿಚಿತ್ರವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭ ಕಲ್ಯಾಣ್ ಅವರು ಇಂದು ಅನಾವರಣ ಗೊಳಿಸಿದರು.

     ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ|| ಜಿ.ಕೆ. ಸನತ್‍ಕುಮಾರ್ ಈ ಆಂದೋಲನದಲ್ಲಿ ನಿಯೋಜಿತ ತಂಡಗಳು ಮನೆ ಮನೆಗೆ ತೆರಳಿ ಭಿತ್ತಿ ಚಿತ್ರದ ಮೂಲಕ ಕ್ಷಯ ರೋಗದ ಬಗ್ಗೆ ಜಾಗೃತಿ ಮೂಡಿಸಲಿವೆ. ಜಿಲ್ಲೆಯಲ್ಲಿ 109736 ಮನೆಗಳಿಗೆ ಭೇಟಿ ನೀಡುವ ಗುರಿ ಹೊಂದಲಾಗಿದ್ದು, ನಿಯೋಜಿತ ತಂಡಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಷಯ ರೋಗದ ಲಕ್ಷಣಗಳು ಕಂಡು ಬಂದಲ್ಲಿ ಕಫ ಸಂಗ್ರಹಣೆ ಮಾಡಿಸಿ ಅದೇ ದಿನ ಕಫವನ್ನು ಪರೀಕ್ಷೆಗೊಳಪಡಿಸಲಾಗುವುದು. ಕಫದಲ್ಲಿ ಕ್ರಿಮಿಗಳು ಪತ್ತೆಯಾದಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಮತ್ತು ಕಲ್ಯಾಣಾಧಿಕಾರಿ ಡಾ|| ಬಿ.ಆರ್.ಚಂದ್ರಿಕಾ, ಆರ್‍ಸಿಹೆಚ್ ಡಾ|| ಕೇಶವರಾಜ್, ಡಿಪಿಸಿ ಬಿ.ರೂಪ, ಮತ್ತಿತರರು ಉಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link