ಜಗಳೂರು:
ಜಗಳೂರುನಲ್ಲಿ ಡಿಪೋ ಮಾಡಲು ಸ್ಥಳದ ಸರ್ವೆ ಮಾಡಿದ್ದರೂ ಸಹ ಅಧಿಕಾರಿಗಳ ಹಾಗೂ ರಾಜಕಾರಣಿಗಳ ನಿರ್ಲಕ್ಷತೆಯಿಂದ ಕೆ.ಎಸ್.ಆರ್.ಟಿ.ಸಿ. ಡಿಪೋ ನೆನಗುದಿಗೆ ಬಿದ್ದಿದೆ ಎಂದು ಎಸ್.ಎಫ್.ಐ.ಜಿಲ್ಲಾ ಅಧ್ಯಕ್ಷ ಮಹಾಲಿಂಗಪ್ಪ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಕೆ.ಎಸ್.ಆರ್.ಟಿ.ಸಿ. ಡಿಪೋ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬಸ್ ಬಿಡಲು ಅಧಿಕಾರಿಗಳೊಂದಿಗೆ ಎಸ್.ಎಫ್.ಐ.ಯ ಸಂಘಟನೆಯವರು ಜೊತೆಗೂಡಿ ರೂಟ್ ಮ್ಯಾಪ್ ಮಾಡಿ ಸರ್ಕಾರಿ ಬಸ್ ಬಿಡಲು ಸಿದ್ದತೆ ಮಾಡಲಾಗಿತ್ತು.
ಆದರೇ ಈಗ ಸರ್ವೆ ಹಾಗೆಯೇ ಉಳಿದಿದೆ. ಕಾರ್ಯ ಸಮರ್ಪಕವಾಗಿಲ್ಲ. ಈ ಸಂಭಂದ ಕ್ಷೇತ್ರದ ಶಾಸಕರಾದ ಎಸ್.ವಿ.ರಾಮಚಂದ್ರರವರನ್ನು ಬೇಟಿ ಮಾಡಿ ಕೇಳಿದಾಗ ನಾವು ಈಗಾಗಲೇ ಡಿಪೋ ಮಾಡಲು ಸ್ಥಳ ಪರಿಶೀಲಿಸಿ ಸಂಪೂರ್ಣ ವರಧಿಯನ್ನು ನೀಡಲಾಗಿದೆ. ಈಗ ಕೆ.ಎಸ್.ಆರ್.ಟಿ.ಸಿ. ಡಿಸಿ ಯವರು ಮುಂದಿನ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ. ಈಗೆ ಅಧಿಕಾರಿಗಳು ಹಾಗೂ ರಾಜಕಾರಣಿಗಳು ನಿರ್ಲಕ್ಷೆ ವಹಿಸಿದರೇ ಡಿಪೋ ಕೊಡಿ ಓಟು ಕೇಳಿ ಎಂಬ ಅಭಿಯಾನವನ್ನು ಸಾರ್ವಜನಿಕರೊಂದಿಗೆ ಮಾಡಲಾಗುವುದೆಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಜಗಳೂರು ತಾಲ್ಲೂಕಿನ ಹಿರೇ ಮಲ್ಲನಹೊಳೆ, ಅಣಬೂರು, ತೋರಣಗಟ್ಟೆ ಸೇರಿದಂತೆ ಅನೇಕ ಗ್ರಾಮಾಣಿ ಪ್ರದೇಶದ ಹಳ್ಳಿಗಳಿಗೆ ಬಸ್‍ಗಳಿಲ್ಲ. ಈ ಭಾಗದ ಜನರು ,ವಿದ್ಯಾರ್ಥಿಗಳಿಗೆ ಓಡಾಡಲು ಬಹಳ ತೊಂದರೆಯಾಗುತ್ತಿದೆ. ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗಳು ಜಗಳೂರು ದಾವಣಗೆರೆ ಮಾತ್ರ ಓಡಾಡಿಸಿ ರೆವ್ಯೂನು ಕಲೆಕ್ಷನ್ ಮಾಡುವುದೇ ಮುಖ್ಯವಲ್ಲ. ಗ್ರಾಮೀಣ ಪ್ರದೇಶಗಳಿಗೆ ಬಸ್ ಬಿಡಬೇಕು ಎಂದರು.ಬಸ್ ಪಾಸ್‍ವಿರುವ ವಿದ್ಯಾರ್ಥಿಗಳನ್ನು ಎಬ್ಬಿಸಿ ಬೇರೆಯವರನ್ನು ಒತ್ತಾಯಪೂರ್ವಕವಾಗಿ ಬಸ್ ಕಂಡಕ್ಟರ್ ಮಾಡುತ್ತಿದ್ದಾರೆ. ಈ ತಾರತಮ್ಯ ತಕ್ಷಣವೇ ನಿಲ್ಲಿಸಬೇಕು. ಜಗಳೂರುನಲ್ಲಿ ಶೀರ್ಘವೇ ಕೆ.ಎಸ್.ಆರ್.ಟಿ.ಸಿ. ಡಿಪೋ ಮಾಡದಿದ್ದರೇ ಉಗ್ರಹೋರಾಟ ಮಾಡಲಾಗುತ್ತದೆ ಎಂದವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.ಈ ಸದರ್ಭದಲ್ಲಿ ಎಸ್.ಎಫ್.ಐ. ಜಿಲ್ಲಾ ಉಪಾಧ್ಯಕ್ಷ ಅನಂತಕುಮಾರ್, ತಾಲ್ಲೂಕು ಅಧ್ಯಕ್ಷ ಮೈಲೇಶ್ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
