ಬೆಂಗಳೂರು:
ರಾಜ್ಯ ರಸ್ತೆ ಸಾರಿಗೆ ಬಸ್ ಪ್ರಯಾಣದರ ಏರಿಕೆ ಮಾಡಿ ಸರ್ಕಾರ ಆದೇಶ ಪ್ರಕಟಿಸಿದೆ. ಸರ್ಕಾರಿ ಸಾರಿಗೆ ಬಸ್ ದರದಲ್ಲಿ ಶೇ.12ರಷ್ಟು ಹೆಚ್ಚಳ ಮಾಡಿ ಆದೇಶ ಜಾರಿ ಮಾಡಲಾಗಿದ್ದು ದರ ಹೆಚ್ಚಳ ಇಂದು ಮಧ್ಯರಾತ್ರಿಯಿಂದಲೇ ಅನ್ವಯಿಸಲಿದೆ.
ದರ ಹೆಚ್ಚಳ ಸಂಬಂಧ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಪರಿಶೀಲಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು ಶೇ. 12ರಷ್ಟು ಬಸ್ ಪ್ರಯಾಣ ದರ ಏರಿಕೆ ಮಾಡಲು ಸರ್ಕಾರ ಅನುಮೋದಿಸಿದೆ.
ಸರ್ಕಾರ ಬಸ್ ಪ್ರಯಾಣದರವನ್ನು ಶೇ.12ರಷ್ಟು ಹೆಚ್ಚಳ ಮಾಡಿದೆ. ಈ ಪ್ರಕಾರ 100 ರು. ಟಿಕೆಟಿನ ಬೆಲೆ 12 ರು. ಏರಿಕೆಯಾಗಿ 112 ರು. ಆಗಲಿದೆ. ಅದರಂತೆ ೨೦೦ ರು. ಗೆ ೨೨೪, 300 ರು. ಗೆ 336 , 500 ರು. ಗೆ 560 1000 ರು. ಗೆ 1120 ರು. ನೀಡಬೇಕಾಗುವುದು.
ಈ ದರ ಏರಿಕೆಯು ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳಿಗೆ ಅನ್ವಯಿಸಲಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದರ ಏರಿಕೆಯಿಂದ ಹೊರಗುಳಿದಿದೆ.
