ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಮನವಿ ..!!

ಹರಪನಹಳ್ಳಿ:

      ಸರ್ಮಪಕ ಕುಡಿಯುವ ನೀರು ಒದಗಿಸುವಂತೆ ಒತ್ತಾಯಿಸಿ ಹೊಸಪೇಟೆ ರಸ್ತೆಯ ಬಳಿ ಇರುವ ಆಶ್ರಯ ಕಾಲೋನಿ ನಿವಾಸಿಗಳು ಸೋಮವಾರ ಪಟ್ಟಣದ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.

       ಸಿಪಿಎಂಎಲ್ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಇದ್ಲಿ ರಾಮಪ್ಪ ಮಾತನಾಡಿ, `ಸಮರ್ಪಕ ಕುಡಿಯುವ ನೀರು ಇಲ್ಲದೇ ಆಶ್ರಯ ಕಾಲೋನಿ ನಿವಾಸಿಗಳು ಪರಿತಪಿಸುವಂತಾಗಿದೆ. ಹಲವು ದಿನಗಳಿಂದ ನೀರಿನ ಸಮಸ್ಯೆ ತಲೆದೋರಿದ್ದರೂ ಈ ಬಗ್ಗೆ ಸಂಬಂಧಿಸಿದವರು ಯಾರೂ ಇತ್ತ ಗಮನ ಹರಿಸಿಲ್ಲ. ಪಟ್ಟಣದ ಕೆಲ ಭಾಗಗಳಲ್ಲಿ ನೀರು ವ್ಯರ್ಥವಾಗಿ ಹರಿಯುತ್ತಿದ್ದರೆ, ಆದರೆ ಇಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ನೀರಿನ ವಿಷಯದಲ್ಲಿ ಉಳ್ಳವರಿಗೆ ಒಂದು ನೀತಿ, ಬಡವರಿಗೆ ಒಂದು ನೀತಿ ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿದರು.

      ಟ್ಯಾಂಕರ್ ಮೂಲಕ ತಾತ್ಕಲಿಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವ ಭರವಸೆ ಪುರಸಭೆ ನೀಡಿದೆ. ಮುಂದೆ ಪರಿಸ್ಥಿತಿ ಮುಂದುವರಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು. ಆಶ್ರಯ ಕಾಲೋನಿಗೆ ಶಾಶ್ವತ ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು. ಅಲ್ಲಿಯವರಿಗೆ ನಮ್ಮ ಹೋರಾಟ ನಿರಂತರವಾಗಿರುತ್ತದೆ’ ಎಂದು ಎಚ್ಚರಿಕೆ ನೀಡಿದರು.

      ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರು, ಆಶ್ರಯ ಕಾಲೋನಿ ನೀರಿನ ಸಮಸ್ಯೆಗೆ ಪರಿಹಾರಕ್ಕೆ ತಾತ್ಕಲಿಕ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುವುದು’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.ಪ್ರತಿಭಟನೆಯಲ್ಲಿ ಸಂಘಟನೆಯ ಪಿರಂಗಿ ದುರುಗದಯ್ಯ, ನಾಗರಾಜ, ಸುಮಂಗಲಾ, ಜಯಮ್ಮ, ಫರೀದಾ ಸೇರಿದಂತೆ ಆಶ್ರಯ ಕಾಲೋನಿ ಮಹಿಳೆಯರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link