ಕುಡಿದ ಮತ್ತಿನಲ್ಲಿ ಟ್ರಾಕ್ಡರ್ ಚಾಲಕನ ಕೊಲೆ…!!

ಬೆಂಗಳೂರು

        ಬಾರ್‍ನಲ್ಲಿ ಮದ್ಯಪಾನ ಮಾಡುವಾಗ ಹಣಕಾಸಿನ ವಿಚಾರಕ್ಕಾಗಿ ಸ್ನೇಹಿತರ ನಡುವೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿ ಓರ್ವನ ಕೊಲೆಯಲ್ಲಿ ಕೊನೆಯಾಗಿರುವ ದುರ್ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

       ಕೆಂಗೇರಿ ಉಪನಗರದ ವರುಣ್(26) ಎದೆಗೆ ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿರುವ ಹೊಸ ಗುಡ್ಡದಹಳ್ಳಿಯ ರವಿ(27)ಯ ಸುಳಿವು ಆತನ ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

       ಹೊಸ ಗುಡ್ಡದಹಳ್ಳಿಯಲ್ಲಿ ವಾಸಿಸುತ್ತಿದ್ದ ಟ್ರ್ಯಾಕ್ಟರ್ ಚಾಲಕ ವರುಣ್‍ಗೆ ಆರೋಪಿ ರವಿ ಸ್ನೇಹಿತನಾಗಿದ್ದ ಇತ್ತೀಚಿಗೆ ಕೆಂಗೇರಿ ಉಪನಗರಕ್ಕೆ ಮನೆ ಬದಲಾಯಿಸಿ ಕೆಲದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ ವರುಣ್ ಬಳಿಯಿದ್ದ ವಾಹನವೊಂದನ್ನು ಆರೋಪಿ ರವಿ ಪಡೆದು ಬೇರೊಬ್ಬರಿಗೆ ಅಡವಿಟ್ಟು ಸಾಲ ಪಡೆದು ಸಾಲ ವಾಪಾಸ್ ನೀಡಿ ವಾಹನ ಹಿಂಪಡೆದಿರಲಿಲ್ಲ ಹಲವು ಬಾರಿ ಕೇಳಿದರೂ ವಾಹನ ಕೊಡಿಸಲು ರವಿ ಮುಂದಾಗಿರಲಿಲ್ಲ ಈ ಕಾರಣಕ್ಕಾಗಿ ವರುಣ್ ಮತ್ತು ಆರೋಪಿ ರವಿ ನಡುವೆ ವೈಮನಸ್ಸು ಉಂಟಾಗಿತ್ತು.

        ಹೊಸ ಗುಡ್ಡದಹಳ್ಳಿ ಬಳಿಯ ಬಾರ್‍ವೊಂದಕ್ಕೆ ಬಾನುವಾರ ರಾತ್ರಿ 10.30ರ ವೇಳೆ ತೆರಳಿದ್ದ ರವಿ ಮತ್ತು ವರುಣ್ ಮದ್ಯ ಸೇವಿಸಲು ಹೋಗಲು ಹೋಗಿದ್ದಾಗ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಆರಂಭವಾದ ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿ ರೊಚ್ಚಿಗೆದ್ದ ರವಿಯು ವರುಣ್‍ನ ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

        ಕಳಗೆಬಿದ್ದು ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ವರುಣ್‍ನನ್ನು ಸ್ಥಳೀಯರು ಬ್ಯಾಟರಾಯನಪುರ ಬಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೆಲ ಸಮಯದಲ್ಲಿಯೇ ಮೃತಪಟ್ಟಿದ್ದಾನೆ.ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಟರಾಯನಪುರ ಪೊಲೀಸರು ಆರೋಪಿ ರವಿಗಾಗಿ ಪತ್ತೆಗಾಗಿ ಶೋಧ ಕೈಗೊಂಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link