ಪಾವಗಡ
ನಗರೋತ್ಥಾನ ಯೋಜನೆಯಲ್ಲಿ ಪಟ್ಟಣದ ಕುಡಿಯುವ ನೀರು ಸರಬರಾಜಿಗೆ 337 ಕೋಟಿ ರೂ. ವೆಚ್ಚದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು.
ಅವರು ಎಚ್.ಡಿ.ಕುಮಾರಸ್ವಾಮಿ ಬಡಾವಣೆಯಲ್ಲಿ ಬುಧವಾರ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಪಟ್ಟಣದಲ್ಲಿ ಕುಡಿಯುವ ನೀರಿನ ಬವಣೆ ತಪ್ಪಿಸುವ ಹಿನ್ನೆಲೆಯಲ್ಲಿ 3 ಕೋಟಿ 37 ಲಕ್ಷ ರೂ. ವೆಚ್ಚದಲ್ಲಿ ಪೈಪ್‍ಲೈನ್, 1 ಲಕ್ಷ ಲೀಟರ್ ಸಾಮಥ್ರ್ಯದ ಟ್ಯಾಂಕ್ ವಾರ್ಡ್ ಸಂಖ್ಯೆ 2 ರಲ್ಲಿ ನಿರ್ಮಾಣ, ಆಶ್ರಯ ಬಡಾವಣೆಯಲ್ಲಿ 2.50 ಲಕ್ಷ ಲೀಟರ್ ಸಾಮಥ್ರ್ಯದ ಟ್ಯಾಂಕ್ ನಿರ್ಮಾಣ, ಟ್ಯಾಂಕ್‍ಗಳಿಗೆ ಕೊಳವೆ ಮಾರ್ಗಗಳು ಅಳವಡಿಸುವುದು, ನಾಗಲಮಡಿಕೆ ಜಾಕ್‍ವೆಲ್ ಬಳಿ ಕೊಳವೆ ಬಾವಿಗಳನ್ನು ನಿರ್ಮಿಸಿ, ಸೂಕ್ತ ವಿದ್ಯುತ್ ಪಂಪುಗಳನ್ನು ಅಳವಡಿಸುವುದು, ಪಟ್ಟದ ವಿವಿಧ ಭಾಗಗಳಲ್ಲಿ 1000 ಎಲ್.ಪಿ.ಹೆಚ್ ಸಾಮಥ್ರ್ಯದ ಆರ್.ಒ ಫಿಲ್ಟರ್ ಅಳವಡಿಸಿ ಚಾಲನೆಗೊಳಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಸುಮಾಅನಿಲ್, ಜಿ.ಪಂ.ಸದಸ್ಯ ಎಚ್.ವಿ.ವೆಂಕಟೇಶ್, ಮಾಜಿ ಶಾಸಕ ಸೋಮ್ಲಾನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್‍ಬಾಬು, ಎ.ಪಿ.ಎಂ.ಸಿ ಅಧ್ಯಕ್ಷ ರವಿಕುಮಾರ್, ಮುಖ್ಯಾಧಿಕಾರಿ ನವೀನ್‍ಚಂದ್ರ, ಕಾರ್ಯಾಪಾಲಕ ಅಭಿಯಂತರರಾದ ಮುದ್ದರಾಜು, ಸಹಾಯಕ ಕಾರ್ಯಾಪಾಲಕರಾದ ಚಂದ್ರಶೇಖರ್, ಸಹಾಯಕ ಎಂಜನಿಯರ್ ಸುನಿಲ್‍ಕುಮಾರ್, ಮಾಜಿ ಅಧ್ಯಕ್ಷ ಶಂಕರರೆಡ್ಡಿ, ಗುರಪ್ಪ, ಪುರಸಭೆ ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯರಾದ ರಾಜೇಶ್, ಸುಬ್ರಹ್ಮಣ್ಯಂ, ವಸಂತಕುಮಾರ್, ಗೋಪಾಲ್, ವಿಶ್ವನಾಥ್, ಮುಖಂಡರಾದ ಕೋಳಿಬಾಲಾಜಿ, ಮಹಮದ್, ಎಂ.ಎನ್.ಬಾಬು, ಶ್ರೀನಿವಾಸ್, ಅಂಜಿನಪ್ಪ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
