ಮೈತ್ರಿ ಸರ್ಕಾರ ನಡೆಸುವುದರಲ್ಲಿ ಮುಖ್ಯಮಂತ್ರಿ ಪಿಎಚ್ ಡಿ ಪಡೆದಿದ್ದಾರೆ : ಸಿಎಸ್ ಪುಟ್ಟರಾಜು

ಬೆಂಗಳೂರು

       ಮೈತ್ರಿ ಸರ್ಕಾರ ಹಾಗೂ ಪ್ರಬುದ್ಧ ಆಡಳಿತ ನಡೆಸುವುದರಲ್ಲಿ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಪಿಎಚ್ ಡಿ ಪಡೆದಿದ್ದಾರೆ ಎಂದು ಸಚಿವ ಸಿಎಸ್ ಪುಟ್ಟರಾಜು ತಿರುಗೇಟು ನೀಡಿದ್ದಾರೆ.

        ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ವಿಶೇಷ ಪ್ರತಿನಿಧಿಯಾಗಿ ಶಾಸಕ ಅಜಯ್ ಸಿಂಗ್ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರಿಂದಲೇ ಜೆಡಿಎಸ್ ನಾಯಕರು ಯಾರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿಲ್ಲ ಎಂದು ಅವರು ಸರ್ಕಾರದೊಳಗಿನ ಅಸಮಾಧಾನವನ್ನು ಬಹಿರಂಗಗೊಳಿಸಿದ್ದಾರೆ.

      ಅಜಯ್ ಸಿಂಗ್ ಪದಗ್ರಹಣ ಕಾರ್ಯಕ್ರಮಕ್ಕೆ ತಮಗೆ ಆಹ್ವಾನವೂ ಬಂದಿತ್ತು. ತಾವು ಕಾರ್ಯಕ್ರಮಕ್ಕೆ ಬರಬೇಕು ಎಂದುಕೊಂಡಿದ್ದೆವು. ಆದರೆ, ಸಿದ್ದರಾಮಯ್ಯ ಅವರನ್ನು ಕೂಡಿಸಿಕೊಂಡು ಕಾಂಗ್ರೆಸ್ ಶಾಸಕರು ಜೆಡಿಎಸ್ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿದರೆ ಬೇಸರ ಆಗುತ್ತದೆ ಎಂಬ ಕಾರಣದಿಂದ ಮನಸ್ಸಿದ್ದರೂ ಕಾರ್ಯಕ್ರಮದಿಂದ ದೂರ ಉಳಿಯಬೇಕಾಯಿತು ಎಂಬ ಸಂಗತಿಯನ್ನು ಹೊರ ಹಾಕಿದರು.

      ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರನ್ನು ಹೊಗಳುವುದರಲ್ಲಿ ತಪ್ಪಿಲ್ಲ ಎಂಬ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ರಾಯರೆಡ್ಡಿ ಮೊದಲು ತಮ್ಮ ಮೂಲ ಯಾವುದು ಎಂಬುದನ್ನು ಅರಿತು ಮಾತನಾಡಲಿ. ಅವರ ಆಡಳಿತದ ಬಗ್ಗೆ ಕಾಂಗ್ರೆಸ್ ಶಾಸಕರು ಹಾದಿ-ಬೀದಿಯಲ್ಲಿ ಚರ್ಚೆ ಮಾಡುವುದನ್ನು ನೋಡಿಕೊಂಡು ಜೆಡಿಎಸ್ ನಾಯಕರು, ಶಾಸಕರು, ಮಂತ್ರಿಗಳು ಮೌನವಾಗಿ ಇರಲು ಹೇಗೆ ಸಾಧ್ಯ ಎಂದು ಪುಟ್ಟರಾಜು ಪ್ರಶ್ನಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link