ಬೆಂಗಳೂರು
ಸಮ್ಮಿಶ್ರ ಸರ್ಕಾರದಲ್ಲಿ ತಾವು ಮತ್ತು ಪರಮೇಶ್ವರ್ ಹಕ್ಕಬಕ್ಕುರು. ವಿಜಯನಗರ ಸಾಮ್ರಾಜ್ಯವನ್ನು ಆಗಿನ ಹಕ್ಕಬುಕ್ಕರು ಕಟ್ಟದ್ದರು.ಈಗ ಬೆಂಗಳೂರು ನಗರಾಭಿವೃದ್ಧಿ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ತಾವು ಮತ್ತು ಪರಮೇಶ್ವರ್ ಕೆಲಸ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಕುದುರೆಗೇರಿ ಗ್ರಾಮದಲ್ಲಿನಡೆದ ವಸತಿ ಇಲಾಖೆ ರಾಜೀವ ಗಾಂಧಿ ವಸತಿ ನಿಗಮದಿಂದ ನಡೆದ ‘ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ’ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಬಡವರಿಗೆ ಒಳ್ಳೆಯ ಮನೆಗಳನ್ನು ನಿರ್ಮಿಸಿಕೊಡುವುದು ಸರ್ಕಾರದ ಜವಾಬ್ದಾರಿ. ಬಡವರಿಗೆ ಮನೆ ಕೊಡುವುದು ನನ್ನ ಮತ್ತು ಪರಮೇಶ್ವರ್ ಉದ್ದೇಶವಾಗಿದೆ.
೨ ಲಕ್ಷ ಮನೆ ನಿರ್ಮಿಸಲಾಗುತ್ತಿದ್ದು, ಮೊದಲನೇ ಹಂತದಲ್ಲಿ ಐವತ್ತು ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಮೈತ್ರಿ ಸರ್ಕಾರದಲ್ಲಿ ಬೆಂಗಳೂರು ನಗರ ಅಭುವೃದ್ಧಿಗೆ ಒಂದು ಲಕ್ಷ ಕೋ.ರೂ.ಕೊಡುವುದು. ೯ ತಿಂಗಳಿನಲ್ಲಿ ೧೪ ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾ ಮಾಡಲಾಗಿದೆ. ಪ್ರಧಾನಿ ಮೋದಿ ಸುಳ್ಳು ಮಾತುಗಳನ್ನಾಡುತ್ತಿದ್ದಾರೆ. ನರೇಂದ್ರ ಮೋದಿಯವರ ಕಾರ್ಯಕ್ರಮ ಬೆನ್ನಿಗೆ ಚೂರಿಹಾಕುವ ಸುಳ್ಳಿನ ಕಂತೆ ಎಂದು ಅವರು ಟೀಕಿಸಿದರು.
ರಾಜ್ಯ ೨.೮ ಲಕ್ಷ ರೈತರನ್ನು ಪ್ರಧಾನಿಯವರ ಕಿಸಾನ್ ಸಮ್ಮಾನ್ ಯೋಜನೆಗೆ ಸೇರಿಸಲಾಗಿದೆ. ಆದರೆ ಪ್ರಧಾನಿ ಮೋದಿ ಇದರಲ್ಲಿ ಬರಿ ೧೭ ರೈತರನ್ನು ಆಯ್ಕೆ ಮಾಡಿ, ಅದರಲ್ಲಿ ಕೇವಲ ೬ರೈತರ ಅಕೌಂಟಿಗೆ ೨ ಸಾವಿರ ರೂ. ಕೂಡ ಹಾದೇ ಕೇವಲ ೯೦೦ ರೂ. ರೈತನ ಖಾತೆಗೆ ಹಾಕಿದ್ದಾರೆ.ನರೇಂದ್ರ ಮೋದಿ ಅಪ್ಪಟ ಸುಳ್ಳುಗಾರ. ನಮ್ಮ ಮನೆ ಬಾಗಿಲನ್ನು ಯಾವಾಗ ಬೇಕಾದರೂ ಬಡಿಯಬಹುದು. ಆದರೆ ನರೇಂದ್ರ ಮೋದಿ ಅವರ ಮನೆ ಬಾಗಿಲಿಗೆ ಹೋಗಲು ಸಾಧ್ಯವೇ ?ಎಂದು ಪ್ರಶ್ನಿಸಿದರು.
ಸರ್ಕಾರದ ಕಟ್ಟಡಗಳು ಕಳಪೆಯಾಗಿರುತ್ತವೆ ಎನ್ನುವ ಭಾವನೆ ತೊಲಗಿಸಿ, ಉತ್ತಮ ಕಟ್ಟಡಗಳನ್ನು ನಿರ್ಮಿಸಲಾಗಿದೆ.ಬೀದಿ ವ್ಯಾಪಾರಿಗಳಿಗೆ, ಪೆಟ್ರೋಲ್ ಬಂಕ್ ಕೆಲಸಗಾರರಿಗೆ, ಆಟೋ ಡ್ರೈವರ್ ಸೇರಿದಂತೆ ನಿವೇಶನರಹಿತರಿಗೆ ಮನೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಕೇಂದ್ರ ಸರ್ಕಾರದ ೧.೫ ಲಕ್ಷ ರಾಜ್ಯ ಸರ್ಕಾರದ ೨ ಲಕ್ಷ ಬ್ಯಾಂಕ್ ಗ್ಯಾರಂಟಿಯೊಂದಿಗೆ ಫಲಾನುಭವಿಗಳ
ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕೃಷ್ಣಬೈರೆಗೌಡ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ವಸತಿ ಸೌಲಭ್ಯ ಯೋಜನೆಗೆ ಬ್ಯಾಟರಾಯನಪುರ ಕ್ಷೇತ್ರದಿಂದಲೇ ಚಾಲನೆ ನೀಡಬೇಕು ಎನ್ನುವುದು ಅವರ ಆಸೆಯಾಗಿತ್ತು. ಅದರಂತೆ ಸಮಾರಂಭ ನಡೆದಿದೆ ಎಂದರು.
ವಸತಿ ಇಲಾಖೆ ರಾಜೀವ್ ಗಾಂಧಿ ವಸತಿ ನಿಗಮನಿಯಮಿತ ವತಿಯಿಂದ ಬೆಂಗಳೂರು ಉತ್ತರ ಕ್ಷೇತ್ರದ ಬ್ಯಾಟರಾಯನಪುರದಲ್ಲಿ ನಡೆದ ‘ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಗೆ ಭೂಮಿಪೂಜೆ ಸಮಾರಂಭಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಯೋಜನೆಗೆ ರಿಮೋಟ್ ಗುಂಡಿ ಒತ್ತುವ ಮೂಲಕ ಲೋಕಾರ್ಪಣೆಗೊಳಿಸಲಾಯಿತು.
ಬ್ಯಾಟರಾಯನಪುರ ಶಾಸಕ ಹಾಗೂ ಗ್ತಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಸುಮಾರು 40 ಸಾವಿರ ಕೋಟಿ ಸಾಲಮನ್ನಾ ಯೋಜನೆ ಮಾಡಿರುವ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ರಾಜ್ಯದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಎಂಟು ಸಾವಿರ ಕೋಟಿ ಅನುದಾನವನ್ನು ಬೆಂಗಳೂರ ನಗರಾಭಿವೃದ್ಧಿಗೆ ನೀಡಲಾಗಿದೆ.
ಹದಿನೈದು ವರ್ಷಗಳಿಂದ ಬಾಕಿಯಿದ್ದ ಪೆರಿಫ್ಲೈ ರಿಂಗ್ ರೋಡಿಗೆ ಸರ್ಕಾರದಿಂದಲೇ ೬ ಸಾವಿರ ಕೋ.ನೀಡಲಾಗಿದೆ. ಎರಡು ಮತ್ತು ಮೂರನೇ ಹಂತದ ಮೆಟ್ರೋ ಯೋಜನೆಗೂ ಚಾಲನೆ ನೀಡಲಾಗಿದೆ ಎಂದರು.ರೈತರ ಅಭಿವೃದ್ಧಿ ಮತ್ತು ಬೆಂಗಳೂರುಅಭಿವೃದ್ಧಿ ಸೇರಿದಂತೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕುಮಾರಸ್ವಾಮಿ ಹಾಗೂ ಪರಮೇಶ್ವರ್ ಕಂಕಣಬದ್ಧರಾಗಿದ್ದಾರೆ.
ಮೂರು ವರ್ಷಗಳ ತಯಾರಿ ನಡೆದಿದ್ದು, ೪೫ ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರವನ್ನೂ ವಿತರಿಸಲಾಗಿದೆ. ಸಮ್ಮಿಶ್ರ ಸರ್ಕಾರದಲ್ಲಿ ೧೪ಮಹಡಿ ಲಿಫ್ಟ್ ಸೌಲಭ್ಯವುಳ್ಳ ಮನೆ ನಿರ್ಮಿಸಲಾಗುತ್ತಿದೆ. ಸೂರುರಹಿತರಿಗೆ ಕೈಗೆಟಕುವ ಬಲೆಯಲ್ಲಿ ಸರ್ಕಾರ ಸಹಾಯಧನದೊಂದಿಗೆ ಮನೆ ನೀಡುತ್ತಿದೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಯೋಜನೆಗೆ ಚಾಲನೆ ಸಿಕ್ಕಿರುವುದು ಖುಷಿ ನೀಡಿದೆ.
ನಿವೇಶನ ಉಚಿತ ಕೊಡುತ್ತೇವೆ. ಕಟ್ಟಿದಮನೆಗಳ ಮೇಲಿನ ವೆಚ್ಚ ಇನ್ನಷ ಕಡಿತಗೊಂಡರೆ ಇನ್ನು ಹೆಚ್ಚು ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನುಕೂಲವಾಗುತ್ತದೆ. ಎಲ್ಲರೂ ವಿಶ್ವಾಸದಿಂದ ಅರ್ಜಿ ಸಲ್ಲಿಸಿ ಎಂದರು.ವಸತಿ ಸಚಿವ ಎಂ.ಟಿ.ಬಿನಾಗರಾಜ್ ಭೂಮಿಪೂಜೆ ನೆರವೇರಿಸಿದರು.
ಸಮಾರಂಭದಲ್ಲಿ ಯೋಜನೆಯನ್ನು ಬಿಡಿಎನಿಂದ ಜಿಲ್ಲಾ ವ್ಯಾಪ್ತಿಗೆ ವಿತರಿಸಲು ಮುಖ್ಯಮಂತ್ರಿಗಳು ಸಮ್ಮತಿ ಸೂಚಿಸಿದರು. ಆನ್ಲೈನ್ ಅರ್ಜಿಯನ್ನು ಇಂದಿನಿಂದ ವಿಸ್ತರಿಸಲಾಗಿದ್ದು ಇನ್ನು ೫೦ ಸಾವಿರ ಫಲಾನುಭವಿಗಳಿಗೆ ಅವಕಾಶ ನೀಡಲಾಯಿತು.
ವೇದಿಕೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ವಸತಿ ಸಚಿವ ಎಂ.ಟಿ.ಬಿ.ನಾಗರಾಜ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.
