ಬೆಂಗಳೂರು
ದೇಶಕ್ಕೀಗ ಕುಟುಂಬ ರಾಜಕಾರಣ ಅನಿವಾರ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನವನ್ನುಯಾವ ಕಾರಣಕ್ಕೂ ತೊರೆಯಬೇಡಿ.ತೊರೆದರೆ ಕಾಂಗ್ರೆಸ್ ಪಕ್ಷ ಕುಸಿದು ಹೋಗುತ್ತದೆ ಎಂದು ಸಿಎಂ ಕುಮಾರಸ್ವಾಮಿ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರಿಗೆ ಹೇಳಿದ್ದಾರೆ.
ಮೂರು ದಿನಗಳ ಹಿಂದೆ ರಾಹುಲ್‌ಗಾಂಧಿ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ ನೇರವಾಗಿಯೇ ಈ ಮಾತನ್ನು ಹೇಳಿದ್ದು,ಕಾಂಗ್ರೆಸ್ ನಾಯಕತ್ವವನ್ನುನಿಮ್ಮ ಕುಟುಂಬ ತೊರೆದರೆ ಅದರ ಬಲವೂ ಕುಸಿಯುತ್ತದೆ ಎಂದು ವಿವರಿಸಿದ್ದಾರೆ.
ಒಂದು ಕಾಲದಲ್ಲಿ ಕುಟುಂಬ ರಾಜಕಾರಣದ ಬಗ್ಗೆ ವಿರೋಧವಿತ್ತು.ಅದರ ವಿರುದ್ಧ ದೊಡ್ಡಮಟ್ಟದಲ್ಲಿ ಹೋರಾಟವೂ ನಡೆಯಿತು.ಆದರೆ ಈ ಹೋರಾಟದ ಬೆನ್ನಲ್ಲಿ ಮೇಲೆದ್ದ ಜನತಾಪರಿವಾರದ ಬಹುತೇಕ ಎಲ್ಲ ಪಕ್ಷಗಳೂ ಕುಟುಂಬ ರಾಜಕಾರಣವನ್ನುನೆಚ್ಚಿಕೊಂಡಿವೆ ಎಂದಿದ್ದಾರೆ.
ಕರ್ನಾಟಕದಲ್ಲಿ ಜನತಾಪರಿವಾರವನ್ನುಉಳಿಸಿಕೊಳ್ಳಲು ನಮ್ಮ ತಂದೆಯವರು ನಿರಂತರ ಪ್ರಯತ್ನಮಾಡುತ್ತಲೇ ಬಂದಿದ್ದಾರೆ.ಜೆಡಿಎಸ್ ಪಕ್ಷವನ್ನುಕಟ್ಟಿದ ನಂತರ ಹಲವರನ್ನುಪಕ್ಷದ ಮುಂಚೂಣಿಯಲ್ಲಿ ತಂದು ನಿಲ್ಲಿಸುವ ಯತ್ನನಡೆದಿದೆ.
ಆದರೆ ಇಂತಹ ಯತ್ನನಿರೀಕ್ಷಿತ ಫಲ ನೀಡಿಲ್ಲ.ಹೀಗಾಗಿ ಏನೇ ಮಾಡಿದರೂ ಪಕ್ಷದ ಉಳಿವಿಗಾಗಿ ನಮ್ಮ ಕುಟುಂಬದವರೇ ಮುಂಚೂಣಿಯಲ್ಲಿ ನಿಲ್ಲುವ ಅನಿವಾರ್ಯತೆ ಇದೆ.ಈ ಪರಿಸ್ಥಿತಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ.
ತಮಿಳ್ನಾಡಿನಲ್ಲಿ ಡಿಎಂಕೆ ಇರಬಹುದು,ಒರಿಸ್ಸಾದಲ್ಲಿ ನವೀನ್ ಪಾಟ್ನಾಯಕ್ ಅವರಿರಬಹುದು,ಬಿಹಾರದಲ್ಲಿ ಲಾಲೂ ಪ್ರಸಾದ್ ಯಾದವ್ ಅವರಿರಬಹುದು,ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್ ಯಾದವ್ ಇರಬಹುದು.ಜಮ್ಮು-ಕಾಶ್ಮೀರದಲ್ಲಿ ಫಾರೂಕ್ ಅಬ್ದುಲ್ಲಾ ಕುಟುಂಬವೇ ಇರಬಹುದು.
ಕೇಂದ್ರದ ಅಧಿಕಾರ ಹಿಡಿದಿರುವ ಬಿಜೆಪಿಯನ್ನೂ ಇದು ಬಿಟ್ಟಿಲ್ಲ.ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ನಾಯಕರ ಮಕ್ಕಳು,ಕುಟುಂಬ ವರ್ಗದವರು ಮೇಲೆದ್ದು ನಿಂತಿದ್ದಾರೆ.
ಬದಲಾದ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಇದು ಅನಿವಾರ್ಯವೂ ಹೌದು.ಅಂದ ಹಾಗೆ ಕಾಂಗ್ರೆಸ್ ಪಕ್ಷವನ್ನು ವಂಶಪಾರಂಪರ್ಯ ರಾಜಕಾರಣದ ಕುಟುಂಬ ಎನ್ನುವ ಮಾತು ಶಕ್ತಿ ಕಳೆದುಕೊಂಡಿದೆ.
ನೆಹರೂ,ಇಂದಿರಾಗಾಂಧಿ,ರಾಜೀವ್‌ಗಾಂಧಿ,ಶ್ರೀಮತಿ ಸೋನಿಯಾಗಾಂಧಿ ಹಾಗೂ ನೀವು ರಾಜಕಾರಣ ಮಾಡಿದವರು.ದೇಶಕ್ಕೆ ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷ ಕಳೆದರೂ ಇಷ್ಟೇ ಮಂದಿ ರಾಜಕಾರಣ ಮಾಡಿದಿರಿ.
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿನ ಸೋಲಿಗೆ ಹಲವು ಕಾರಣಗಳಿವೆ.ನಮ್ಮ ಪಕ್ಷಕ್ಕೂ ಆಘಾತವಾಗಿದೆ.ಹಾಗಂತ ನಿರಾಶರಾಗಬೇಕಾದ ಅಗತ್ಯವೇನಿಲ್ಲ.ಕಾಂಗ್ರೆಸ್ ನೇತೃತ್ವದ ಯುಪಿಎ ಸತತವಾಗಿ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿತ್ತು.
ಈಗ ಎನ್.ಡಿ.ಎ ಕೂಡಾ ಅಧಿಕಾರಕ್ಕೆ ಬಂದಿದೆ.ಮುಂದಿನ ಐದು ವರ್ಷಗಳಲ್ಲಿ ಅದರ ವೈಫಲ್ಯ ಎದ್ದು ಕಾಣಲಿದ್ದು ಯಥಾ ಪ್ರಕಾರ ಬಾವನಾತ್ಮಕ ವಿಷಯಗಳನ್ನುಮುಂದಿಟ್ಟುಕೊಂಡು ಹೋರಾಡುವ ಪರಿಸ್ಥಿತಿಗೆ ಅದು ಬಂದರೆ ಜನ ಕೆರಳುತ್ತಾರೆ.
ಹೀಗಾಗಿ ಸನ್ನಿವೇಶಕ್ಕೆ ಅನುಗುಣವಾಗಿ ಮೌನವಾಗಿರೋಣ.ರಾಜ್ಯ ಮಟ್ಟದಲ್ಲಿರುವ ಸರ್ಕಾರಗಳನ್ನು ಬಲಪಡಿಸಿಕೊಂಡು ಮುಂದುವರಿಯೋಣ ಎಂದು ಕುಮಾರಸ್ವಾಮಿ ಅವರು ಹೇಳಿದ್ದು ಅವರ ಮಾತಿಗೆ ರಾಹುಲ್ ಗಾಂಧಿ ಅವರೂ ಸಹಮತ ವ್ಯಕ್ತಪಡಿಸಿದರು ಎಂದು ಮೂಲಗಳು ಹೇಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








