ಉಪಚುನಾವಣೆ ನಂತರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಗೊಂಡಿರುವ ಕುಮಾರಸ್ವಾಮಿ

ಬೆಂಗಳೂರು

     ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಈಗೀಗ ಟ್ವಿಟರ್‌ನಲ್ಲಿ ಸಖತ್ ಕ್ರಿಯಾಶೀಲರಾಗಿದ್ದಾರೆ.ಬಿಜೆಪಿ ಹಾಗೂ ರಾಜಕೀಯ ವಿರೋಧಿಗಳಿಗೆ ತಿರುಗೇಟು ನೀಡಲು ಟ್ವಿಟರ್ ಸದಾ ಸಕ್ರಿಯವಾಗಿದೆ.ಹೌದು,ಹೆಚ್.ಡಿ.ಕುಮಾರಸ್ವಾಮಿ ಟ್ವಿಟರ್ ಈಗ ಮೊದಲಿಗಿಂತಲೂ ಹೆಚ್ಚು ಕ್ರಿಯಾಶೀಲವಾಗಿದೆ.

   ಸದ್ಯಕ್ಕೆ ಇವರ ಟ್ವಿಟರ್ ಹಿಂಬಾಲಕರ ಸಂಖ್ಯೆ 161 ಸಾವಿರ ಇದೆ.ಉಪಚುನಾವಣೆಯ ಸೋಲಿನ ಬಳಿಕ ಸಾಮಾಜಿಕ ಜಾಲತಾಣವನ್ನು ಕುಮಾರಸ್ವಾಮಿ ಆದಷ್ಟು ಬಳಸಿಕೊಳ್ಳತೊಡಗಿದ್ದಾರೆ.ಬಿಜೆಪಿಯ ಅಥವಾ ಕಾಂಗ್ರೆಸಿನ ಯಾವುದೇ ನಾಯಕರ ತಮ್ಮ ಬಗೆಗಿನ ಹೇಳಿಕೆಗೆ ಟ್ವೀಟ್ ಮೂಲಕವೇ ಪ್ರಖರವಾಗಿ ಉತ್ತರಿಸುತ್ತಿದ್ದಾರೆ. ಸುದ್ದಿಗೋಷ್ಠಿ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು

   ನೀಡುವುದಕ್ಕಿಂತಲೂ ಟ್ವಿಟರ್‌ನಲ್ಲಿಯೇ ಖಡಕ್ ಉತ್ತರಗಳು ಹೇಳಿಕೆಗಳನ್ನು ನೀಡುತ್ತಿದ್ದಾರೆ.ಈ ಹಿಂದಿಗಿಂತಲೂ ಕುಮಾರಸ್ವಾಮಿ ಅವರ ಟ್ವಿಟರ್ ಹೆಚ್ಚು ಕೆಲಸ ಮಾಡಲಾರಂಭಿಸಿದೆ.ಉಪಚುನಾವಣೆ ಸೋಲಿನ ಬಳಿಕ ಟ್ವೀಟ್ ಮೊರೆ ಹೋಗಿರುವ ಕುಮಾರಸ್ವಾಮಿ ಅವರಿಗೆ ಕಳೆದ ಎರಡು ತಿಂಗಳಿನಿಂದ ಸುಮಾರು15ಸಾವಿರ ಹಿಂಬಾಲಕರು ಹೆಚ್ಚಾಗಿದ್ದಾರೆ.ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಿಂತ ತಮ್ಮ ಅನಿಸಿಕೆ ಹೇಳಿಕೆಗಳನ್ನು ತಮಗೆ ಅನುಕೂಲವಾಗುವಂತೆ ವ್ಯಕ್ತಪಡಿಸಲು ಟ್ವೀಟ್ ಹೆಚ್ಚು ಶೀಘ್ರ ಮತ್ತು ಅನುಕೂಲ ಎಂದು ಭಾವಿಸಿದಂತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap