ಶಿರಾ:
ಒಕ್ಕಲಿಗ ಸಮುದಾಯ ಕೇಂದ್ರದಲ್ಲಿ ಮೀಸಲಾತಿ ಪಡೆಯುತ್ತಿದ್ದು, ಇದರಡಿಯಲ್ಲಿ ಬರುವಂತ ಕುಂಚಿಟಿಗ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ಈ ಬಗ್ಗೆ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರಿಗೆ ಶ್ರೀಮಠ ಪತ್ರ ಮುಖೇನಾ ಮನವಿ ಸಲ್ಲಿಸಿದ್ದು, ಈ ಪತ್ರ ಕೇಂದ್ರ ಸರ್ಕಾರದ ಅಂಗಳದಲ್ಲಿದೆ.
ಕೇಂದ್ರ ಸರ್ಕಾರಕ್ಕೆ ಕುಂಚಿಟಿಗ ಮೀಸಲಾತಿ ಬಗ್ಗೆ ಕೇಂದ್ರದ ಗಮನ ಸೆಳೆದು ಶೀಘ್ರವೇ ಮೀಸಲಾತಿಯನ್ನು ದೇವೇಗೌಡರು ಕೊಡಿಸಲಿದ್ದಾರೆ. ಇದರಿಂದ ಸಮುದಾಯದ ಪ್ರತಿಭಾವಂತ ವಿಧ್ಯಾರ್ಥಿಗಳ ಐಎಎಸ್, ಐಪಿಎಸ್ ಮಾಡುವಂತ ಕನಸು ನನಸಾಗಲಿದೆ ಎಂದು ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀನಂಜಾವಧೂತ ಸ್ವಾಮಿಜಿ ಹೇಳಿದರು.ಶಿರಾ ತಾಲೂಕಿನ ಕ್ಯಾದಿಗುಂಟೆ ಗ್ರಾಮದಲ್ಲಿ ಗುರುವಾರ ನಡೆದ ಶ್ರೀಯರಬಳ್ಳಿ ಮಾರಮ್ಮ ದೇವಿಯ ಪ್ರತಿಷ್ಟಾಪನಾ ಮಹೋತ್ಸವದಲ್ಲಿ ದಿವ್ಯಸಾನ್ನೀದ್ಯ ವಹಿಸಿ ಮಾತನಾಡಿದರು.
ನಿತ್ಯದ ಜೀವನದಲ್ಲಿ ಮನುಷ್ಯ ಪರಸ್ಪರ ವಿರೋಧ ಮತ್ತು ವೈಮನಸ್ಸಿನಿಂದಲೇ ಕೆಲಸ ಮಾಡುತ್ತಾನೆ ಇಂತಹ ಮನಸ್ಥಿತಿ ಯಾರಲ್ಲೂ ಇರ ಬಾರದು ನಾವು ಮಾಡುವಂತ ಕಾರ್ಯ ಸಮಾಜ ಮುಖಿಯಾಗಿರ ಬೇಕು. ಮತ್ತೊಬ್ಬರ ಸುಖ-ಸಂತೋಷದಲ್ಲಿ ಭಾಗಿಯಾಗುವಂತ ವ್ಯಕ್ತಿಯ ಹೃದಯ ಮಂದಿರದಲ್ಲಿ ದೇವರು ನೆಲಸುತ್ತಾನೆ. ಬದುಕಿನಲ್ಲಿ ಬರುವಂತ ಸಂಕಷ್ಟ ದೂರ ಮಾಡಿ ಇಷ್ಟಾರ್ಥ ಸಿದ್ದಿಸಿ ಕೊಳ್ಳುವ ಮಾರ್ಗ ದೇವಸ್ಥಾನ ಒಂದೇ. ಶ್ರದ್ದೆ ಭಕ್ತಿ ಹಾಗೂ ಸಮಾಜದ ಒಗ್ಗಟ್ಟಿನಿಂದ ಕಟ್ಟಿದ ದೇಗುಲ ದೇವರಿಗೆ ಪ್ರಿಯವಾಗಲಿದ್ದು, ಅಂತಹ ಭಕ್ತಿಗೆ ಮೆಚ್ಚುವ ಯರಬಳ್ಳಿ ಮಾರಮ್ಮ ಗುಡಿಯಲ್ಲಿ ಶಾಶ್ವತವಾಗಿ ನೆಲಸಲಿದ್ದಾಳೆ ಎಂದರು
ಕ್ಯಾದಿಗುಂಟೆ ಗ್ರಾಮಕ್ಕೆ ಆಗಮಿಸಿದ ನಂಜಾವಧೂತಶ್ರೀಗಳಿಗೆ ಭಕ್ತ ಸಮೂಹ ಪೊರ್ಣಕುಂಭ ಸ್ವಾಗತ ಕೊರಿದರು.ಯರಬಳ್ಳಿ ಮಾರಮ್ಮ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಟಿ.ಪಾಂಡುರಂಗಯ್ಯ, ಉಪಾಧ್ಯಕ್ಷ ಕೆ.ಆರ್.ರಂಗನಾಥ್, ಮುಖಂಡರಾದ ಶಿವರಾಜ್, ತಿಪ್ಪೇಸ್ವಾಮಿ, ಮೂಡ್ಲಪ್ಪ, ಆರ್.ರಂಗನಾಥ್, ಕುಮಾರ್, ತುಕರಾಂ, ಇ.ನರಸಿಂಹಯ್ಯ, ಜಗನ್ನಾಥ್, ವಿಶ್ವನಾಥ್, ಲಕ್ಷ್ಮಪ್ಪ, ಆರ್.ಓಂಕಾರಪ್ಪ, ವೆಂಕಟೇಶ್ ವಸಂತಕುಮಾರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








