ಜನತಾ ಕಪ್ರ್ಯೂ : ಸಂಪೂರ್ಣ ಸ್ತಬ್ಧವಾದ ಕುಣಿಗಲ್

ಕುಣಿಗಲ್

    ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕರೆ ನಿಡಿದ ಜನತಾ ಕಪ್ರ್ಯೂಗೆ ಇಡೀ ತಾಲ್ಲೂಕು ಜನಜೀವನ ಸ್ತಬ್ಧವಾಗಿದ್ದು ಕೊರೊನಾ ವೈರಸ್ ತಡೆಗೆ ಪ್ರತಿಯೊಬ್ಬ ಜನರು ಸಹಕರಿಸುವಂತೆ ಕರೆನೀಡಿದ ಪ್ರಧಾನಿಗಳ ರಾಷ್ಟ್ರವ್ಯಾಪಿ ಆಂದೋಲನಕ್ಕೆ ಸಂಪೂರ್ಣವಾದ ಬೆಂಬಲ ವ್ಯಕ್ತವಾಗುವ ಮೂಲಕ ಹೊಸ ಇತಿಹಾಸಕ್ಕೆ ನಾಂದಿಯಾದಂತಾಗಿದೆ.

    ಹೆಚ್ಚುತ್ತಿರುವ ಮಹಾಮಾರಿ ಕೊರೊನಾ ಸೋಂಕು ವಿರುದ್ಧ ದೇಶವ್ಯಾಪ್ತಿ ಜನಜಾಗೃತಿಗಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕಪ್ರ್ಯೂನ್ನು ಸ್ವಯಂ ಪ್ರೇರಿತರಾಗಿ ಜನರು ತಮ್ಮ ಎಲ್ಲಾ ವ್ಯವಹಾರಗಳನ್ನು ಸ್ಥಗಿತಗೊಳಿಸುವ ಮೂಲಕ ಯಶಸ್ವಿಯಾಗಿ ಆಚರಿಸಲಾಯಿತು.

   ಈ ಬಂದ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳಾದ ಔಷಧಿ,ಹಾಲು,ಪತ್ರಿಕೆ ,ಸರ್ಕಾರಿ ಆಸ್ಪತ್ರೆಗಳ ಸೇವೆ ಲಭ್ಯವಿದ್ದು, ಇತರೆ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳು, ತರಕಾರಿಗಳು, ಕೆ.ಎಸ್.ಆರ್.ಟಿಸಿ ಬಸ್‍ಗಳು,ಖಾಸಗಿ ಬಸ್,ಆಟೋ ರಿಕ್ಷಾ, ಜ್ಯೂವಲ್ಲೆರಿ ಮಳಿಗೆ,ಬೀದಿ ವ್ಯಾಪಾರಿಗಳು,ಪಬ್,ಬಾರು,ಚಿತ್ರಮಂದಿರ ಬೆಳಿಗ್ಗೆಯಿಂದಲೇ ಮನೆಯಿಂದ ಹೊರಬರದೇ ಜನತಾ ಕಪ್ರ್ಯೂಗೆ ಸಂಪೂರ್ಣವಾಗಿ ಬೆಂಬಲ ವ್ಯಕ್ತಪಡಿಸಿ ಬಂದ್ ಮಾಡಿದರು.

    ರಸ್ತೆಯಲ್ಲಿ ಜನರಿಲ್ಲದೇ ವಾಹನ ಓಡಾಟ ಸಂಪೂರ್ಣವಾಗಿ ಸ್ತಬ್ಧವಾಗಿದ್ದು,ಹೋಟೆಲ್‍ಗಳು ಬಂದ್ ಆಗಿದ್ದು,ಯಾವುದೇ ವೈನ್ ಸ್ಟೋರ್ ಸೇರಿದಂತೆ ಕುರಿ-ಮೇಕೆ ಮಾಂಸ ಅಂಗಡಿಗಳು ನಿಷೇಧಿಸಲಾಗಿತ್ತು, ಖಾಸಗಿ ಬಸ್ ನಿಲ್ದಾಣ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸೇರಿದಂತೆ, ರೈಲು ನಿಲ್ದಾಣ ಬಿಕೋ ಅನ್ನುತ್ತಿತ್ತು. ಪಟ್ಟಣ ಸೇರಿ ಹುಲಿಯೂರುದುರ್ಗ,ಅಮೃತೂರು,ಎಡೆಯೂರು ಸೇರಿ ಯಾವುದೇ ಭಾಗದಲ್ಲಿ ಜನಸಾಮಾನ್ಯರು ರಸ್ತೆಗೆ ಇಳಿಯದೇ ಪ್ರಧಾನ ಮಂತ್ರಿ ಜನತಾ ಕಪ್ರ್ಯೂಗೆ ಸ್ವಯಂ ಘೋಷಿತರಾಗಿ ಜನತಾ ಕಪ್ರ್ಯೂಗೆ ಬೆಂಬಲ ವ್ಯಕ್ತಪಡಿಸಿ ಮನೆಯಲ್ಲಿ ಉಳಿದಿದ್ದರು, ಕೆಲವರಂತೂ ಕುತುಹಲದಿಂದ ಹೊರ ಬಂದು ನಗರವನ್ನು ನೋಡುತ್ತ ಅಯ್ಯೋ ಕುಣಿಗಲ್ ಎಂದೂ ಯಾರೇ ಕರೆಕೊಟ್ಟರೂ ಇಂತಹ ಪರಿಸ್ಥಿತಿಗೆ ಬಂದಿರಲಿಲ್ಲ ಆದರೆ ಇಂದಿನ ದೃಶ್ಯ ಇತಿಹಾಸ ಪುಟಸೇರಿದಂತೆಯೇ ಸರಿ ಎಂದೆಲ್ಲ ಮಾತನಾಡುತ್ತ ಕುಡಿಯಲು ಟೀ,ಬೀಡಿ ಸಿಗದೇ ಪರದಾಡಿದ ದೃಶ್ಯ ಕಂಡುಬಂತು.

    ಅಲ್ಲಲ್ಲಿ ಮಾತ್ರ ಕೋಳಿ ಕೊಂಡೊಯ್ಯುತ್ತಿದ್ದರೆ ಮದ್ಯವೆಸನಿಗಳಂತೂ ಬಾರಿ ಪರದಾಡುತ್ತಿದ್ದರು. ಸಂಜೆ 5 ಗಂಟೆಗೆ ತಮ್ಮ ತಮ್ಮ ಮನೆ ಮುಂಭಾಗ ನಿಂತು ಹಲವೆಡೆ ಮಕ್ಕಳು ಪೋಷಕರು ತಮ್ಮ ಮನೆಯಲ್ಲಿದ್ದ ತಟ್ಟೆ, ಗಂಟೆ ಭಾರಿಸುವ ಮೂಲಕ ಕೊರೋನಾ ವೈರಸ್ ವಿರುದ್ದ ನಿತ್ಯ ಶ್ರಮಿಸುತ್ತಿರುವ ಡಾಕ್ಟರ್ಸ್,ಗಳು, ಸರ್ಕಾರಿ ಅಧಿಕಾರಿಗಳು, ಪೊಲೀಸರು, ಕರ್ಮಚಾರಿಗಳು ಹಾಗೂ ಮಾಧ್ಯಮದವರಿಗೆ ಬೆಂಬಲಿಸುವ ಮೂಲಕ ಶುಭಕೋರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link